ಸಲ್ಮಾನ್ ಖಾನ್ ಹತ್ಯೆ ಪ್ರಕರಣದಲ್ಲಿ ಹೊಸ ಹೆಸರು ಮುನ್ನಲೆಗೆ

ಸಲ್ಮಾನ್ ಖಾನ್ ಅನ್ನು ಕೊಲ್ಲಲು ಭೂಗತ ಜಗತ್ತಿನ ಘಟಾನುಘಟಿಗಳು ಕಾದು ನಿಂತಿದ್ದಾರೆ. ಲಾರೆನ್ಸ್ ಬಿಷ್ಣೋಯಿ, ಎಲ್​ಜಿ ಬ್ರಾರ್ ಅವರ ಹೆಸರುಗಳು ಮಾತ್ರವೇ ಮುಂಚೂಣಿಯಲ್ಲಿ ಕೇಳಿ ಬಂದಿತ್ತು. ಇದೀಗ ಹೊಸ ಭೂಗತ ಪಾತಕಿಯ ಹೆಸರು ಮುನ್ನೆಲೆಗೆ ಬಂದಿದೆ.

ಸಲ್ಮಾನ್ ಖಾನ್ ಹತ್ಯೆ ಪ್ರಕರಣದಲ್ಲಿ ಹೊಸ ಹೆಸರು ಮುನ್ನಲೆಗೆ
Follow us
ಮಂಜುನಾಥ ಸಿ.
|

Updated on: May 15, 2024 | 1:00 PM

ಸಲ್ಮಾನ್ ಖಾನ್ (Salman Khan) ಅನ್ನು ಕೊಲ್ಲಲು ಭೂಗತ ಜಗತ್ತಿನ ಕೆಲ ಪಾತಕಿಗಳು ಟೊಂಕ ಕಟ್ಟಿ ನಿಂತಿದ್ದಾರೆ. ಸಲ್ಮಾನ್ ಖಾನ್ ರನ್ನು ಕೊಲ್ಲುವ ಪ್ರಯತ್ನವನ್ನು ಸತತವಾಗಿ ಮಾಡುತ್ತಲೇ ಇದ್ದಾರೆ. ಈ ಹತ್ಯೆ ಪ್ರಯತ್ನದಲ್ಲಿ ಮೊದಲು ಕೇಳಿ ಬರುತ್ತಿರುವ ಹೆಸರು ಲಾರೆನ್ಸ್ ಬಿಷ್ಣೋಯಿಯದ್ದು. ಜೈಲಿನಲ್ಲಿರುವ ಈತ ದೊಡ್ಡ ಭೂಗತ ಪಾತಕಿಗಳ ಗುಂಪಿನ ನಾಯಕ ಎನ್ನಲಾಗುತ್ತಿದೆ. ಲಾರೆನ್ಸ್ ಜೊತೆಗೆ ಬ್ರಾರ್ ಬ್ರದರ್ಸ್ ಹೆಸರು ಸಹ ಕೇಳಿ ಬರುತ್ತಿದೆ. ಕೆನಡಾವನ್ನು ತಮ್ಮ ನೆಲೆ ಮಾಡಿಕೊಂಡಿರುವ ಇವರು ಸಹ ದೊಡ್ಡ ಭೂಗತ ಪಾತಕಿಗಳ ಗುಂಪೊಂದನ್ನು ನಡೆಸುತ್ತಿದ್ದು ಲಾರೆನ್ಸ್ ಜೊತೆಗೂ ಆಪ್ತ ಬಂಧ ಹೊಂದಿದ್ದಾರೆ. ಈ ಮೂವರಲ್ಲದೆ ಇದೀಗ ಮತ್ತೊಬ್ಬ ಭೂಗತ ಪಾತಕಿಯ ಹೆಸರು ಈ ಪ್ರಕರಣದಲ್ಲಿ ಮುನ್ನೆಲೆಗೆ ಬಂದಿದೆ.

ಕಳೆದ ತಿಂಗಳಷ್ಟೆ ಸಲ್ಮಾನ್ ಖಾನ್​ರ ಮನೆಯ ಮೇಲೆ ಗುಂಡಿನ ದಾಳಿಯಾಗಿತ್ತು. ಮುಂಬೈನಲ್ಲಿರುವ ಸಲ್ಮಾನ್ ಖಾನ್​ರ ಗ್ಯಾಲೆಕ್ಸಿ ಅಪಾರ್ಟ್​ಮೆಂಟ್​ನ ಕಿಟಕಿಯ ಮೇಲೆ, ಬೈಕ್​ನಲ್ಲಿ ಬಂದ ಇಬ್ಬರು ಗುಂಡು ಹಾರಿಸಿ ಪರಾರಿಯಾಗಿದ್ದರು. ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡು ಹಾರಿಸಿದ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಬಂದೂಕನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇದೀಗ ತನಿಖೆ ಮುಂದುರೆಸಿದಂತೆ ಮತ್ತೊಬ್ಬ ಭೂಗತ ಪಾತಕಿಯ ಹೆಸರು ಮೇಲೆ ಬಂದಿದೆ.

ಸಲ್ಮಾನ್ ಖಾನ್ ಹತ್ಯೆ ಪ್ರಯತ್ನ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಅಪರಾಧ ತನಿಖಾ ವಿಭಾಗವು ಭೂಗತ ಪಾತಕಿ ರೋಹಿತ್ ಗೊದಾರ ವಿರುದ್ಧ ಪ್ರಕರಣ ದಾಖಲಿಸಿದೆ. ಸಲ್ಮಾನ್ ಖಾನ್ ರ ಗ್ಯಾಲೆಕ್ಸಿ ಅಪಾರ್ಟ್​ಮೆಂಟ್ ಮೇಲೆ ಗುಂಡು ಹಾರಿಸಿದ ಪ್ರಕರಣದ ರೂವಾರಿ ಇದೇ ರೋಹಿತ್ ಗೊದಾರ ಎನ್ನಲಾಗುತ್ತಿದೆ. ಆ ಪ್ರಕರಣದಲ್ಲಿ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಆರು ಮಂದಿಯನ್ನು ಬಂಧಿಸಲಾಗಿದೆ ಇನ್ನುಳಿದವರಿಗಾಗಿ ತನಿಖೆ ಜಾರಿಯಲ್ಲಿದೆ.

ಇದನ್ನೂ ಓದಿ:ಸಲ್ಮಾನ್ ಖಾನ್ ಜೊತೆ ನಟಿಸಲು ಭಾರಿ ಸಂಭಾವನೆ ಪಡೆಯಲಿದ್ದಾರೆ ರಶ್ಮಿಕಾ ಮಂದಣ್ಣ

‘ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಭೇಟಿಯಾಡಿದರೆ ಎನ್ನಲಾಗಿದ್ದು, ಪ್ರಕರಣದ ವಿಚಾರಣೆ ಇನ್ನೂ ಚಾಲ್ತಿಯಲ್ಲಿದೆ. ಕೃಷ್ಣಮೃಗವು ಬಿಷ್ಣೋಯಿ ಸಮುದಾಯಕ್ಕೆ ಪವಿತ್ರವಾಗಿದ್ದು, ಅದನ್ನು ಕೊಂದಿರುವ (ಆರೋಪ) ಸಲ್ಮಾನ್ ಖಾನ್ ಅನ್ನು ಕೊಂದು ಸೇಡು ತೀರಿಸಿಕೊಳ್ಳುವ ಗುರಿ ಲಾರೆನ್ಸ್ ಬಿಷ್ಣೋಯಿಯದ್ದು. ಹಾಗಾಗಿ ಸಲ್ಮಾನ್ ಖಾನ್ ಅನ್ನು ಕೊಲ್ಲುವ ಸತತ ಪ್ರಯತ್ನ ಮಾಡುತ್ತಲೇ ಇದ್ದಾನೆ. ಇದಕ್ಕಾಗಿ ತನ್ನ ಭೂಗತ ಪಾತಕಿ ಗೆಳೆಯರ ಸಹಾಯ ತೆಗೆದುಕೊಳ್ಳುತ್ತಿರುತ್ತಾನೆ.

ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಲ್ಮಾನ್ ಖಾನ್, ತನ್ನ ಪಾಡಿಗೆ ತಾನು ಸಿನಿಮಾಗಳಲ್ಲಿ ನಟಿಸುತ್ತಾ ಆರಾಮವಾಗಿದ್ದಾರೆ. ಪ್ರಸ್ತುತ ‘ಸಿಕಂಧರ್’ ಸಿನಿಮಾನಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ತಮಿಳಿನ ಎಆರ್ ಮುರುಗದಾಸ್ ನಿರ್ದೇಶಕ. ಸಿನಿಮಾ ನಿರ್ಮಾಣ ಮಾಡುತ್ತಿರುವುದು ಸಾಜಿದ್ ನಾಡಿಯಾವಾಲಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ