ಗುರುತೇ ಸಿಗದಂತೆ ಬದಲಾದ ಸ್ಟಾರ್ ನಟ; ಬಾಲಿವುಡ್ ಕಲಾವಿದನ ಪೋಸ್ಟರ್ ವೈರಲ್
ಈ ಹಿಂದಿನ ಸಿನಿಮಾಗಳಲ್ಲಿ ಅವರು ತುಂಬಾ ಸ್ಟೈಲಿಶ್ ಆದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಲವರ್ ಬಾಯ್ ಪಾತ್ರ ಮಾಡಿ ಮಿಂಚಿದ್ದರು. ಕಲರ್ಫುಲ್ ಕಾಸ್ಟ್ಯೂಮ್ಗಳನ್ನು ಧರಿಸಿ ಅಭಿಮಾನಿಗಳ ಮನ ಗೆದ್ದಿದ್ದರು. ಆದರೆ ಈಗ ತುಂಬಾ ಸ್ಲಿಮ್ ಆಗಿದ್ದಾರೆ. ‘ಚಂದು ಚಾಂಪಿಯನ್’ ಸಿನಿಮಾಗಾಗಿ ಸಂಪೂರ್ಣ ಹೊಸ ಅವತಾರದಲ್ಲಿ ಬಂದಿದ್ದಾರೆ.
ಕೆಲವು ನಟರ ಬದ್ಧತೆಗೆ ಭೇಷ್ ಎನ್ನಲೇಬೇಕು. ಪಾತ್ರಕ್ಕಾಗಿ ದೇಹವನ್ನು ಯಾವ ರೀತಿ ಬೇಕಿದ್ದರೂ ಬದಲಿಸಿಕೊಳ್ಳಲು ಅವರು ಸಿದ್ಧರಿರುತ್ತಾರೆ. ಈ ಮೊದಲು ಹೃತಿಕ್ ರೋಷನ್, ಆಮಿರ್ ಖಾನ್, ರಣದೀಪ್ ಹೂಡಾ ಮುಂತಾದ ನಟರು ಅಂಥ ಟ್ರಾನ್ಸ್ಫಾರ್ಮೇಷನ್ಗೆ ಒಳಗಾಗಿದ್ದನ್ನು ಪ್ರೇಕ್ಷಕರು ನೋಡಿದ್ದಾರೆ. ಈಗ ಬಾಲಿವುಡ್ನ (Bollywood) ಮತ್ತೋರ್ವ ನಟ ಕೂಡ ಅದೇ ಹಾದಿ ತುಳಿದಿದ್ದಾರೆ. ಹೌದು, ಹಿಂದಿ ಚಿತ್ರರಂಗದ ಸ್ಟಾರ್ ಕಲಾವಿದರ ಕಾರ್ತಿಕ್ ಆರ್ಯನ್ (Kartik Aaryan) ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರು ನಟಿಸಿರುವ ಹೊಸ ಸಿನಿಮಾ ‘ಚಂದು ಚಾಂಪಿಯನ್’ (Chandu Champion) ಬಿಡುಗಡೆಗೆ ಸಜ್ಜಾಗಿದೆ. ಇದರ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದ್ದು, ಎಲ್ಲರ ಕಣ್ಣು ಕುಕ್ಕುತ್ತಿದೆ.
ಈ ಮೊದಲಿನ ಸಿನಿಮಾಗಳಲ್ಲಿ ಕಾರ್ತಿಕ್ ಆರ್ಯನ್ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಲವರ್ ಬಾಯ್ ಆಗಿ ಅವರು ಮಿಂಚಿದ್ದರು. ಬಣ್ಣ ಬಣ್ಣದ ಕಾಸ್ಟ್ಯೂಮ್ ಧರಿಸಿ ಮಹಿಳಾಭಿಮಾನಿಗಳ ಹೃದಯ ಕದ್ದಿದ್ದರು. ಆದರೆ ಈಗ ಅವರು ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ‘ಚಂದು ಚಾಂಪಿಯನ್’ ಚಿತ್ರಕ್ಕಾಗಿ ಸಂಪೂರ್ಣ ಹೊಸ ಅವತಾರ ತಾಳಿದ್ದಾರೆ. ಅವರು ಈ ಸಿನಿಮಾ ಮೇಲೆ ಹೆಚ್ಚು ಭರವಸೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ‘ಆಶಿಕಿ 3’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಜೊತೆ ನಟಿಸಲಿರುವ ತೃಪ್ತಿ ದಿಮ್ರಿ
ನೈಜ ಘಟನೆ ಆಧರಿಸಿ ‘ಚಂದು ಚಾಂಪಿಯನ್’ ಸಿನಿಮಾ ಸಿದ್ಧವಾಗಿದೆ. ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತೀಯ ಮುರಳಿಕಾಂತ್ ಪೇಟ್ಕರ್ ಅವರ ಪಾತ್ರಕ್ಕೆ ಕಾರ್ತಿಕ್ ಆರ್ಯನ್ ಬಣ್ಣ ಹಚ್ಚಿದ್ದಾರೆ. ಖ್ಯಾತ ನಿರ್ದೇಶಕ ಕಬೀರ್ ಖಾನ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಫಸ್ಟ್ ಲುಕ್ ಬಿಡುಗಡೆ ಆದ ಬಳಿಕ ‘ಚಂದು ಚಾಂಪಿಯನ್’ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ.
Champion Aa Raha Hai… Super excited and proud to share the first poster of the most challenging and special film of my career#ChanduChampion 💪🏻 🇮🇳 #14thJune#KabirKhan #SajidNadiadwala @ipritamofficial @NGEMovies #KabirKhanFilms @WardaNadiadwala @TSeries @PenMovies pic.twitter.com/YcWYMLVXOO
— Kartik Aaryan (@TheAaryanKartik) May 15, 2024
ಜೂನ್ 14ರಂದು ‘ಚಂದು ಚಾಂಪಿಯನ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಹಾಡುಗಳಿಗೆ ಪ್ರೀತಮ್ ಅವರು ಸಂಗೀತ ನೀಡಿದ್ದಾರೆ. ಸಾಜಿದ್ ನಾಡಿಯದ್ವಾಲಾ ಮತ್ತು ಕಬೀರ್ ಖಾನ್ ಅವರು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ಚಾಂಪಿಯನ್ ಬರುತ್ತಿದ್ದಾರೆ. ನನ್ನ ವೃತ್ತಿ ಜೀವನದ ಚಾಲೆಂಜಿಂಗ್ ಮತ್ತು ಸ್ಪೆಷಲ್ ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ಹಂಚಿಕೊಳ್ಳಲು ಹೆಮ್ಮೆ ಎನಿಸುತ್ತಿದೆ’ ಎಂದು ಕಾರ್ತಿಕ್ ಆರ್ಯನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರಿಗೆ ಅಭಿಮಾನಿಗಳು ಆಲ್ ದಿ ಬೆಸ್ಟ್ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.