Jawan: ಶಾರುಖ್​ ಖಾನ್​-ಸಂಜಯ್​ ದತ್​ ಮುಖಾಮುಖಿ; ‘ಜವಾನ್​’ ಚಿತ್ರದಲ್ಲಿ ಭರ್ಜರಿ ಫೈಟ್​

Sanjay Dutt | Shah Rukh Khan: ‘ಜವಾನ್’​ ಸಿನಿಮಾದಲ್ಲಿ ಶಾರುಖ್​ ಖಾನ್​ ಎದುರು ಸಂಜಯ್​ ದತ್ ಘರ್ಜಿಸಲಿದ್ದಾರೆ. ಇಬ್ಬರ ಮುಖಾಮುಖಿ ದೃಶ್ಯಗಳನ್ನು ತೆರೆ ಮೇಲೆ ನೋಡಲು ಫ್ಯಾನ್ಸ್​ ಕಾದಿದ್ದಾರೆ.

Jawan: ಶಾರುಖ್​ ಖಾನ್​-ಸಂಜಯ್​ ದತ್​ ಮುಖಾಮುಖಿ; ‘ಜವಾನ್​’ ಚಿತ್ರದಲ್ಲಿ ಭರ್ಜರಿ ಫೈಟ್​
ಸಂಜಯ್ ದತ್, ಶಾರುಖ್ ಖಾನ್

Updated on: Mar 20, 2023 | 6:20 PM

ನಟ ಶಾರುಖ್​ ಖಾನ್​ (Shah Rukh Khan) ಅವರು ‘ಪಠಾಣ್​’ ಸಿನಿಮಾದಿಂದ ಮತ್ತೆ ಟ್ರ್ಯಾ​ಕ್​ಗೆ ಮರಳಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗಂತ ಅವರು ಆರಾಮಾಗಿ ವಿಶ್ರಾಂತಿ ಪಡೆಯುತ್ತ ಕಾಲ ಕಳೆಯುತ್ತಿಲ್ಲ. ಬದಲಿಗೆ, ಮುಂದಿನ ಸಿನಿಮಾಗಳತ್ತ ಗಮನ ಹರಿಸಿದ್ದಾರೆ. ಅಟ್ಲಿ ಕುಮಾರ್​ ನಿರ್ದೇಶನ ಮಾಡುತ್ತಿರುವ ‘ಜವಾನ್​’ (Jawan Movie) ಸಿನಿಮಾದಲ್ಲಿ ಶಾರುಖ್​ ಖಾನ್​ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಖ್ಯಾತ ನಟ ಸಂಜಯ್ ದತ್​ ಅವರಿಗೂ ಒಂದು ಮುಖ್ಯ ಪಾತ್ರ ಇದೆ. ಅವರೀಗ ಶೂಟಿಂಗ್​ನಲ್ಲಿ ಭಾಗಿ ಆಗಿದ್ದಾರೆ. ಶಾರುಖ್​ ಖಾನ್​ ಮತ್ತು ಸಂಜಯ್​ ದತ್​ (Sanjay Dutt) ನಡುವಿನ ಮುಖಾಮುಖಿ ದೃಶ್ಯಗಳನ್ನು ಚಿತ್ರಿಸಲಾಗುತ್ತಿದೆ. ನಟಿ ದೀಪಿಕಾ ಪಡುಕೋಣೆ ಕೂಡ ಶೀಘ್ರದಲ್ಲೇ ಶೂಟಿಂಗ್ ಸೆಟ್​ ಸೇರಿಕೊಳ್ಳಲಿದ್ದಾರೆ.

ವಿಲನ್​ ಪಾತ್ರಗಳಲ್ಲಿ ಸಂಜಯ್​ ದತ್​ ಮಿಂಚುತ್ತಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಅಧೀರನಾಗಿ ಅಬ್ಬರಿಸಿದ ಬಳಿಕ ಅವರಿಗೆ ನೆಗೆಟಿವ್​ ಶೇಡ್​ ಇರುವ ಪಾತ್ರಗಳ ಆಫರ್​ ಹೇರಳವಾಗಿ ಸಿಗುತ್ತಿದೆ. ‘ಜವಾನ್’​ ಸಿನಿಮಾದಲ್ಲಿ ಶಾರುಖ್​ ಖಾನ್​ ಎದುರು ಅವರು ಘರ್ಜಿಸಲಿದ್ದಾರೆ. ಇಬ್ಬರ ಮುಖಾಮುಖಿ ದೃಶ್ಯಗಳನ್ನು ತೆರೆ ಮೇಲೆ ನೋಡಲು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: Sanjay Dutt: ‘ಕೆಡಿ’ ಶೂಟಿಂಗ್​ ಸೆಟ್​ಗೆ ಕಾಲಿಟ್ಟ ಸಂಜಯ್​ ದತ್​; ಬಾಲಿವುಡ್​ ನಟನ ಎಂಟ್ರಿಯಿಂದ ಹೆಚ್ಚಿತು ನಿರೀಕ್ಷೆ

ಇದನ್ನೂ ಓದಿ
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ

ದಳಪತಿ ವಿಜಯ್​ ನಟನೆಯ ‘ಲಿಯೋ’ ಚಿತ್ರದಲ್ಲೂ ಸಂಜಯ್​ ದತ್​ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಕಾಶ್ಮೀರದಲ್ಲಿ ಮೊದಲ ಹಂತದ ಶೂಟಿಂಗ್​ ನಡೆಯುತ್ತಿದೆ. ಅದರ ಚಿತ್ರೀಕರಣದಲ್ಲಿ ಭಾಗಿ ಆಗಿದ್ದ ಸಂಜಯ್ ದತ್​ ಅವರು ಒಂದು ದಿನ ವಿಶ್ರಾಂತಿ ಪಡೆದುಕೊಂಡು ಈಗ ನೇರವಾಗಿ ‘ಜವಾನ್​’ ಶೂಟಿಂಗ್​ಗೆ ಬಂದಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

‘ಜವಾನ್​’ ರಿಲೀಸ್​ ಡೇಟ್​ ಬಗ್ಗೆ ಗಾಸಿಪ್​:

ಜೂನ್​ 2ರಂದು ‘ಜವಾನ್​’ ಸಿನಿಮಾವನ್ನು ತೆರೆ ಕಾಣಿಸಬೇಕು ಎಂದು ತೀರ್ಮಾನಿಸಲಾಗಿದೆ. ಆದರೆ ಈಗ ಕೇಳಿಬರುತ್ತಿರುವ ಲೇಟೆಸ್ಟ್​ ಗಾಸಿಪ್​ ಏನೆಂದರೆ, ಜೂನ್​ 2ರಂದು ‘ಜವಾನ್​’ ಬಿಡುಗಡೆ ಆಗೋದು ಅನುಮಾನ ಎನ್ನಲಾಗುತ್ತಿದೆ. ಅಂದುಕೊಂಡ ರೀತಿಯೇ ‘ಜವಾನ್​’ ಸಿನಿಮಾದ ಶೂಟಿಂಗ್​ ನಡೆಯುತ್ತಿದೆ. ನಿಗದಿತ ಸಮಯಕ್ಕೆ ಚಿತ್ರೀಕರಣ ಮುಗಿಸಲು ಅಟ್ಲಿ ಕುಮಾರ್​ ಪ್ರಯತ್ನಿಸುತ್ತಿದ್ದಾರೆ. ಆದರೆ ಎಡಿಟಿಂಗ್​ ಸಂದರ್ಭದಲ್ಲಿ ಎಷ್ಟು ಸಮಯ ಹಿಡಿಯಲಿದೆ ಅಂತ ಊಹಿಸೋದು ಕಷ್ಟ. ಒಂದು ವೇಳೆ ಜೂನ್​ 2ಕ್ಕೆ ಸಿನಿಮಾ ರಿಲೀಸ್​ ಮಾಡಲು ಸಾಧ್ಯವಾಗದಿದ್ದರೆ ಅಕ್ಟೋಬರ್​ಗೆ ಬಿಡುಗಡೆ ದಿನಾಂಕ ಮುಂದೂಡಿಕೆ ಆಗುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

‘ಜವಾನ್​’ ಸಿನಿಮಾದ ರಿಲೀಸ್​ ಡೇಟ್​ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅಟ್ಲಿ ಕುಮಾರ್​ ಮತ್ತು ಶಾರುಖ್​ ಖಾನ್​ ಅವರು ಮೀಟಿಂ​ಗ್​ ಮಾಡಲಿದ್ದಾರೆ. ಆ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಬಗ್ಗೆ ಚಿತ್ರತಂಡದಿಂದ ಯಾರೂ ಕೂಡ ಅಧಿಕೃತ ಹೇಳಿಕೆ ನೀಡಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:20 pm, Mon, 20 March 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us