ಸಂಜಯ್​ ಲೀಲಾ ಬನ್ಸಾಲಿ ಚಿತ್ರರಂಗದ ಪಯಣಕ್ಕೆ 25 ವರ್ಷ; ಇಲ್ಲಿದೆ ಅವರ ಸಿನಿ ಜರ್ನಿ ಬಗ್ಗೆ ಮಾಹಿತಿ

ಸಂಜಯ್​ ಲೀಲಾ ಬನ್ಸಾಲಿ ಅವರು ತಮ್ಮದೇ ಆದ ಶೈಲಿ ಹೊಂದಿದ್ದಾರೆ. ಅವರ ಸಿನಿಮಾದಲ್ಲಿ ಯಾವಾಗಲೂ ಭಾವನೆಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಅವರು ಯಾವುದೇ ಸಿನಿಮಾ ಕೈಗೆತ್ತಿಕೊಳ್ಳಲಿ, ಅದಕ್ಕಾಗಿ ಅವರು ಸಾಕಷ್ಟು ಕೆಲಸ ಮಾಡುತ್ತಾರೆ.

ಸಂಜಯ್​ ಲೀಲಾ ಬನ್ಸಾಲಿ ಚಿತ್ರರಂಗದ ಪಯಣಕ್ಕೆ 25 ವರ್ಷ; ಇಲ್ಲಿದೆ ಅವರ ಸಿನಿ ಜರ್ನಿ ಬಗ್ಗೆ ಮಾಹಿತಿ
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ
Edited By:

Updated on: Aug 09, 2021 | 9:45 PM

ಭಾರತ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕರ ಪೈಕಿ ಸಂಜಯ್​ ಲೀಲಾ ಬನ್ಸಾಲಿ ಮುಂಚೂಣಿಯಲ್ಲಿರುತ್ತಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆದಿದೆ. ಈ ವಿಶೇಷ ದಿನದಂದು ಎಲ್ಲರೂ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. 1996ರಲ್ಲಿ ‘ಖಾಮೋಶಿ: ದಿ ಮ್ಯೂಸಿಕಲ್​’ ಸಿನಿಮಾ ತೆರೆಗೆ ಬಂದಿತ್ತು. ಇದು ಅವರ ಮೊದಲ ಸಿನಿಮಾ. ಹಮ್​ ದಿಲ್​ ದೆ ಚುಕೆ ಸನಮ್ (1999), ದೇವದಾಸ್​ (2002), ಬ್ಲ್ಯಾಕ್​​ (2005), ರಾಮ್​ ಲೀಲಾ (2013), ಬಾಜಿರಾವ್​ ಮಸ್ತಾನಿ (2015) ಮತ್ತು ಪದ್ಮಾವತ್​ (2018) ಅಂತಹ ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಸಂಜಯ್​ ಲೀಲಾ ಬನ್ಸಾಲಿಗೆ ಇದೆ.

ಸಂಜಯ್​ ಲೀಲಾ ಬನ್ಸಾಲಿ ಅವರು ತಮ್ಮದೇ ಆದ ಶೈಲಿ ಹೊಂದಿದ್ದಾರೆ. ಅವರ ಸಿನಿಮಾದಲ್ಲಿ ಯಾವಾಗಲೂ ಭಾವನೆಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಅವರು ಯಾವುದೇ ಸಿನಿಮಾ ಕೈಗೆತ್ತಿಕೊಳ್ಳಲಿ, ಅದಕ್ಕಾಗಿ ಅವರು ಸಾಕಷ್ಟು ಕೆಲಸ ಮಾಡುತ್ತಾರೆ. ಪ್ರತಿ ದೃಶ್ಯವೂ ಅಚ್ಚುಕಟ್ಟಾಗಿ ಮೂಡಿ ಬರೋಕೆ ಎನೆಲ್ಲ ಬೇಕೋ ಅದೆಲ್ಲವನ್ನೂ ಮಾಡುತ್ತಾರೆ ಸಂಜಯ್​ ಲೀಲಾ ಬನ್ಸಾಲಿ. ಇನ್ನು, ಅದ್ದೂರಿ ಸೆಟ್ ಬನ್ಸಾಲಿ ಸಿನಿಮಾದ ಹೈಲೈಟ್​.

25 ವರ್ಷದ ನೆನೆಪಿಗೆ ಸಂಜಯ್​ ಲೀಲಾ ಬನ್ಸಾಲಿ ಅವರು ಪೋಸ್ಟ್​ ಒಂದನ್ನು ಮಾಡಿದ್ದಾರೆ. ‘ನನ್ನ ಪಯಣದಲ್ಲಿ ಅನೇಕ ಚಾಲೆಂಜ್​ಗಳನ್ನು ಎದುರಿಸಿದ್ದೇನೆ. ಆದರೆ, ಪ್ರತಿ ಕ್ಷಣವನ್ನೂ ನಾನು ಆನಂದಿಸಿದ್ದೇನೆ. ನನ್ನ ಕೆಲಸದ ಬಗ್ಗೆ ವೀಕ್ಷಕರು ನೀಡುವ ಪ್ರತಿಕ್ರಿಯೆ ನನಗೆ ಸಂತೋಷ ನೀಡುತ್ತದೆ. ನನ್ನ ಜತೆ ಕೆಲಸ ಮಾಡಿದ ತಂಡದ ಸಹಾಯ ಇಲ್ಲದೆ ನಾನು ಇಲ್ಲಿವರೆಗೆ ಬರಲು ಸಾಧ್ಯವಿಲ್ಲ’ ಎಂದಿದ್ದಾರೆ ಬನ್ಸಾಲಿ.

ಇನ್ನು, ಬಾಲಿವುಡ್​ ನಟ- ನಟಿಯರು ಸಂಜಯ್​ ಲೀಲಾ ಬನ್ಸಾಲಿಗೆ ಶುಭಕೋರಿದ್ದಾರೆ. ಚಿತ್ರರಂಗದಲ್ಲಿ 25 ವರ್ಷ ಶ್ರಮಿಸಿದ ಬನ್ಸಾಲಿ ಅವರ ಮುಂದಿನ ಕೆಲಸಕ್ಕೆ ಎಲ್ಲರೂ ಶುಭ ಕೋರುತ್ತಿದ್ದಾರೆ.

ಸಂಜಯ್​ ಲೀಲಾ ಬನ್ಸಾಲಿ ಅವರು ಸದ್ಯ ಮುಂಬೈ ಮಾಫಿಯಾ ಕ್ವೀನ್​ ಗಂಗೂಬಾಯಿ ಕಾಠಿಯಾವಾಡಿ ಜೀವನ ಆಧರಿಸಿ ಸಿದ್ಧಗೊಂಡಿರುವ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಆಲಿಯಾ ಭಟ್​ ನಾಯಕಿ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಸಿನಿಮಾ ಜುಲೈ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ, ಕೊವಿಡ್​ ಎರಡನೇ  ಅಲೆ ಕಾರಣದಿಂದ ಈ ಸಿನಿಮಾ ಕೆಲಸಗಳು ಮುಂದೂಡಲ್ಪಟ್ಟವು.

ಇದನ್ನೂ ಓದಿ: ಆಲಿಯಾ ಭಟ್​ ವಿಚಾರಕ್ಕೆ ದೀಪಿಕಾ ಪಡುಕೋಣೆ- ಸಂಜಯ್​ ಲೀಲಾ ಬನ್ಸಾಲಿ ನಡುವೆ ಕೋಲ್ಡ್​ ವಾರ್!

Follow Us