AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲಿಯಾ ಭಟ್​ ವಿಚಾರಕ್ಕೆ ದೀಪಿಕಾ ಪಡುಕೋಣೆ- ಸಂಜಯ್​ ಲೀಲಾ ಬನ್ಸಾಲಿ ನಡುವೆ ಕೋಲ್ಡ್​ ವಾರ್!

ಸಂಜಯ್​ ಲೀಲಾ ಬನ್ಸಾಲಿ ಮತ್ತು ದೀಪಿಕಾ ನಡುವೆ ಯಾವುದೂ ಸರಿ ಇಲ್ಲ ಎನ್ನುವ ಬಗ್ಗೆ ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ.

ಆಲಿಯಾ ಭಟ್​ ವಿಚಾರಕ್ಕೆ ದೀಪಿಕಾ ಪಡುಕೋಣೆ- ಸಂಜಯ್​ ಲೀಲಾ ಬನ್ಸಾಲಿ ನಡುವೆ ಕೋಲ್ಡ್​ ವಾರ್!
ದೀಪಿಕಾ-ಸಂಜಯ್​ ಲೀಲಾ ಬನ್ಸಾಲಿ
ರಾಜೇಶ್ ದುಗ್ಗುಮನೆ
|

Updated on:Mar 27, 2021 | 7:05 PM

Share

ರಾಮ್​ ಲೀಲಾ, ಬಾಜಿರಾವ್​ ಮಸ್ತಾನಿ ಮತ್ತು ಪದ್ಮಾವತ್​ ಬಾಲಿವುಡ್​ ಪಾಲಿಗೆ ಸೂಪರ್​ ಹಿಟ್​ ಸಿನಿಮಾಗಳು. ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಮತ್ತು ನಟಿ ದೀಪಿಕಾ ಪಡುಕೋಣೆ ಈ ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ದೀಪಿಕಾ ವೃತ್ತಿ ಜೀವನದ ತೂಕ ಹೆಚ್ಚಿಸಿತ್ತು. ಇವರು ಮುಂದಿನ ದಿನಗಳಲ್ಲಿ ಮತ್ತೆ ಕೆಲಸ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಈಗ ಕೇಳಿ ಬರುತ್ತಿರುವ ಲೇಟೆಸ್ಟ್​ ವಿಚಾರ ಎಂದರೆ, ದೀಪಿಕಾ ಹಾಗೂ ಬನ್ಸಾಲಿ ನಡುವೆ ಕೋಲ್ಡ್​ ವಾರ್​ ನಡೆದಿದೆಯಂತೆ. ಇದಕ್ಕೆ ಕಾರಣ ಆಲಿಯಾ ಭಟ್​ ಅನ್ನೋದು ವಿಚಿತ್ರ. ಸಂಜಯ್​ ಲೀಲಾ ಬನ್ಸಾಲಿ ಮತ್ತು ದೀಪಿಕಾ ನಡುವೆ ಯಾವುದೂ ಸರಿ ಇಲ್ಲ ಎನ್ನುವ ಬಗ್ಗೆ ಬಾಲಿವುಡ್​ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದೆ. ಗಂಗೂಬಾಯಿ ಕಾಠಿಯಾವಾಡಿ ಸಿನಿಮಾವನ್ನು ಸಂಜಯ್​ ಲೀಲ್​ ಬನ್ಸಾಲಿ ನಿರ್ದೇಶವಿದೆ. ಈ ಚಿತ್ರದಲ್ಲಿ ವಿಶೇಷ ಸಾಂಗ್​ ಒಂದರಲ್ಲಿ ನಟಿಸೋಕೆ ದೀಪಿಕಾಗೆ ಬನ್ಸಾಲಿ ಆಫರ್​ ನೀಡಿದ್ದರಂತೆ. ಆದರೆ, ಈ ಆಫರ್​ಅನ್ನು ದೀಪಿಕಾ ಕಡ್ಡಿಮುರಿದಂತೆ ತಿರಸ್ಕರಿಸಿದ್ದಾರೆ. ನಂತರ ಹೀರಾ ಮಂಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಆಫರ್​ ಕೂಡ ನೀಡಲಾಯಿತಂತೆ. ಆಗಲೂ ದೀಪಿಕಾ ಈ ಆಫರ್​ ತಿರಸ್ಕರಿಸಿದ್ದರು. ಇದು ಈಗ ಹಲವು ಸಂಶಯಗಳಿಗೆ ಕಾರಣವಾಗಿದೆ.

ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ಬೈಜು ಬಾವ್ರಾ ಸಿನಿಮಾದಲ್ಲಿ ರಣಬೀರ್​ ಕಪೂರ್​, ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ ನಟಿಸಬೇಕಿತ್ತು. ಆದರೆ, ಈ ಕೋಲ್ಡ್​ ವಾರ್​ನಿಂದ ಈ ಸಿನಿಮಾ ಆಗೋದೆ ಡೌಟ್​ ಎನ್ನುವ ಮಾತು ಬಾಲಿವುಡ್​ ಅಂಗಳದಿಂದ ಕೇಳಿ ಬರುತ್ತಿದೆ.

ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದಲ್ಲಿ ಲೀಡ್​ ಪಾತ್ರಕ್ಕಾಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಬನ್ಸಾಲಿ ಆಲೋಚನೆ ಆಗಿತ್ತು. ಆದರೆ, ಅವರು ಮದುವೆ ಆಗಿ ಅಮೆರಿಕದಲ್ಲಿದ್ದಾರೆ. ಹೀಗಾಗಿ, ಅವರು ಆಫರ್​ ತಿರಸ್ಕರಿಸಿದ್ದಾರೆ. ಅವರು ಎರಡನೇ ಆಪ್ಶನ್​ ಆಗಿ ದೀಪಿಕಾರನ್ನು ಇಟ್ಟುಕೊಳ್ಳಲಾಗಿತ್ತು. ಆದರೆ, ಬನ್ಸಾಲಿ ಕೊನೆ ಕ್ಷಣದಲ್ಲಿ ಆಲಿಯಾ ಭಟ್​ ಅವರನ್ನು ಆಯ್ಕೆ ಮಾಡಿಕೊಂಡಿರುವುದು ದೀಪಿಕಾ ಕೋಪಕ್ಕೆ ಕಾರಣವಾಗಿದೆ. ಹೀಗಾಗಿ, ಬನ್ಸಾಲಿ ವಿರುದ್ಧ ದೀಪಿಕಾ ಮುನಿಸಿಕೊಂಡಿದ್ದಾರೆ ಎಂಬುದು ಸದ್ಯ ಕೇಳಿ ಬರುತ್ತಿರುವ ಮಾಹಿತಿ.

ಇದನ್ನೂ ಓದಿ: ಗಂಗೂಬಾಯಿ ಕಾಠಿಯಾವಾಡಿ ಸಿನಿಮಾಗೆ ಸಂಕಷ್ಟ; ಆಲಿಯಾ, ಬನ್ಸಾಲಿಗೆ ಸಮನ್ಸ್​ ​

Published On - 6:47 pm, Sat, 27 March 21

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More