ಈಗ ಯಾವುದೂ ಮೊದಲಿನ ರೀತಿ ಇಲ್ಲ; ಕೊನೆಗೂ ಸತ್ಯ ಒಪ್ಪಿಕೊಂಡ ದಿವ್ಯಾ
ಬಿಗ್ ಬಾಸ್ ಮನೆಯಲ್ಲಿ ಮಂಜು ಸರಿಯಾಗಿ ಮಾತನಾಡುತ್ತಿಲ್ಲ ಎನ್ನುವ ವಿಚಾರ ದಿವ್ಯಾಗೆ ಬೇಸರ ಮೂಡಿಸಿದೆ. ಮಂಜು ಜತೆ ಮಾತನಾಡೋಕೆ ಅವರು ಕಾರಣವನ್ನೂ ಹುಡುಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಸುರೇಶ್ ತುಂಬಾನೇ ಬದಲಾಗಿದ್ದಾರೆ. ಮಂಜು ಪಾವಗಡ ಜತೆಗೆ ಸುತ್ತಾಡುತ್ತಾ ಇದ್ದ ಅವರು ಈಗ ಪ್ರಶಾಂತ್ ಸಂಬರಗಿಗೆ ಹತ್ತಿರವಾಗುತ್ತಿದ್ದಾರೆ. ಈ ಬದಲಾವಣೆಯನ್ನು ವೀಕ್ಷಕರು ಕೂಡ ಗಮನಿಸಿದ್ದಾರೆ. ಈ ಮಧ್ಯೆ ನಾವಿಬ್ಬರೂ ಮೊದಲಿನಂತೆ ಇಲ್ಲ ಎಂದು ದಿವ್ಯಾ ಉರುಡುಗ ಎದುರು ದಿವ್ಯಾ ಸುರೇಶ್ ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮಂಜುಗೆ ಕಿಚನ್ ಡಿಪಾರ್ಟ್ಮೆಂಡ್ ನೀಡಲಾಗಿದೆ. ಹೀಗಾಗಿ ಅವರು ಶುಕ್ರವಾರದ (ಮಾರ್ಚ್ 26) ಎಪಿಸೋಡ್ನಲ್ಲಿ ಪಾತ್ರೆ ತೊಳೆಯಬೇಕಿತ್ತು. ಆದರೆ, ಮಂಜು ಅಡುಗೆ ಮನೆಗೆ ಹೋಗದೆ ಹೊರ ಭಾಗದಲ್ಲಿ ಕುಳಿತು ಸುದ್ದಿ ಹೇಳುತ್ತಾರೆ ನಿಂತಿದ್ದರು. ಅಷ್ಟೇ ಅಲ್ಲ, ನಾನು ವಾಕಿಂಗ್ ಮುಗಿಸಿ ಬಂದು ತೊಳೆಯುತ್ತೇನೆ ಕಾಯಿರಿ ಎಂದಿದ್ದರು. ಆದರೆ, ದಿವ್ಯಾ ಕಾದಿಲ್ಲ. ಬದಲಿಗೆ ಅವರು ಪಾತ್ರೆ ತೊಳೆಯುವ ಕೆಲಸ ಮಾಡಿದ್ದಾರೆ. ಇದು ಮಂಜುಗೆ ಬೇಸರ ತರಿಸಿದೆ. ಇದೇ ವಿಚಾರಕ್ಕೆ ಇಬ್ಬರೂ ಮಾತು ಬಿಟ್ಟಿದ್ದರು.
ಬಿಗ್ ಬಾಸ್ ಮನೆಯಲ್ಲಿ ಮಂಜು ಸರಿಯಾಗಿ ಮಾತನಾಡುತ್ತಿಲ್ಲ ಎನ್ನುವ ವಿಚಾರ ದಿವ್ಯಾಗೆ ಬೇಸರ ಮೂಡಿಸಿದೆ. ಮಂಜು ಜತೆ ಮಾತನಾಡೋಕೆ ಅವರು ಕಾರಣವನ್ನೂ ಹುಡುಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ ಜತೆ ಮಾತನಾಡುವಾಗ ದಿವ್ಯಾ ಸುರೇಶ್ ಒಂದಷ್ಟು ವಿಚಾರ ಹೇಳಿಕೊಂಡರು. ನನ್ನ ಹಾಗೂ ಮಂಜನ ನಡುವೆ ಮೊದಲಿನ ರೀತಿ ಯಾವುದೂ ಇಲ್ಲ. ಅವನನ್ನು ಮಾತನಾಡಿಸೋಕೆ ನಾನು ತುಂಬಾನೇ ಪ್ರಯತ್ನ ಮಾಡಿದ್ದೇನೆ. ಆದರೆ, ಅದು ಸಾಧ್ಯವಾಗಿಲ್ಲ ಎಂದು ಬೇಸರು ಹೊರ ಹಾಕಿದ್ದಾರೆ.
ಕೊನೆಗೆ ದಿವ್ಯಾ ಉರುಡುಗ ಮಧ್ಯಸ್ಥಿಕೆ ವಹಿಸಿದ ನಂತರ ದಿವ್ಯಾ ಸುರೇಶ್ ಹಾಗೂ ಮಂಜು ಒಂದಾಗಿದ್ದಾರೆ. ಇಬ್ಬರೂ ಸಿಟ್ಟು ಬಿಟ್ಟು ಪರಸ್ಪರ ಮಾತನಾಡಿದ್ದಾರೆ.
ಇದನ್ನೂ ಓದಿ: Divya Uruduga: ಬಿಗ್ ಬಾಸ್ ಮನೆಯಲ್ಲಿರುವ ದಿವ್ಯಾ ಉರುಡುಗಗೆ ಪ್ರಾಣ ಬೆದರಿಕೆ!
BBK8 Elimination: 14 ಸ್ಪರ್ಧಿಗಳ ಪೈಕಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವವರು ಇವರೇನಾ?