ನಟಿ ಸಾರಾ ಅಲಿ ಖಾನ್ (Sara Ali Khan) ಅವರಿಗೆ ಶಿವನ ಬಗ್ಗೆ ಅಪಾರ ಭಕ್ತಿ ಇದೆ. ಈಗಾಗಲೇ ಅವರು ಶಿವನ ದೇವಾಲಯಗಳಿಗೆ ಭೇಟಿ ನೀಡಿ ಸುದ್ದಿ ಆಗಿದ್ದಾರೆ. ಈಗ ಮತ್ತೆ ಅವರು ಅಮರನಾಥ ಯಾತ್ರೆ (Amarnath Yatra) ಮಾಡಿದ್ದಾರೆ. ಆ ಸಂದರ್ಭದ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಸಾವಿರಾರು ಭಕ್ತರ ಜೊತೆಗೆ ತಾವೂ ಒಬ್ಬರಾಗಿ ಈ ಯಾತ್ರೆಯಲ್ಲಿ ಸಾರಾ ಅಲಿ ಖಾನ್ ಭಾಗಿ ಆಗಿದ್ದಾರೆ. ‘ಹರ ಹರ ಮಹದೇವ’ ಎಂದು ಅವರು ಜೈಕಾರ ಕೂಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಅನೇಕ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಸಾರಾ ಅಲಿ ಖಾನ್ ಅವರ ಧರ್ಮದ (Sara Ali Khan Religion) ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರಿ ಸಾರಾ ಅಲಿ ಖಾನ್. ಹಲವು ವರ್ಷಗಳ ಹಿಂದೆಯೇ ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ವಿಚ್ಛೇದನ ಪಡೆದರು. ಸಾರಾ ಅಲಿ ಖಾನ್ ಅವರು ಮುಸ್ಲಿಂ ಮತ್ತು ಹಿಂದೂ ಎರಡೂ ಧರ್ಮವನ್ನು ಪಾಲಿಸುತ್ತಾರೆ. ಆಗಾಗ ಅವರು ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಆಗೆಲ್ಲ ನೆಟ್ಟಿಗರಿಂದ ತಕಾರಾರು ಎದುರಾಗುತ್ತದೆ. ಅದಕ್ಕೆ ಈಗ ಮತ್ತೊಂದು ವರ್ಗದ ಜನರು ತಿರುಗೇಟು ನೀಡಿದ್ದಾರೆ. ‘ಸಾರಾ ಅಲಿ ಖಾನ್ ಅವರ ತಾಯಿ ಹಿಂದೂ ಎಂಬುದನ್ನು ಮರೆಯಬೇಡಿ’ ಎಂಬ ಕಮೆಂಟ್ಗಳು ಬಂದಿವೆ.
ಸಾರಾ ಅಲಿ ಖಾನ್ ಅವರು ಹಿಂದೂ ದೇವಾಲಯಕ್ಕೆ ಭೇಟಿ ನೀಡುವುದು ಸಿನಿಮಾದ ಪ್ರಚಾರಕ್ಕಾಗಿ ಎಂದು ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ ಆ ಮಾತನ್ನು ಅವರ ಅಭಿಮಾನಿಗಳು ಒಪ್ಪಿಲ್ಲ. ‘ಈಗ ಅವರ ಯಾವ ಸಿನಿಮಾ ಕೂಡ ರಿಲೀಸ್ ಆಗುತ್ತಿಲ್ಲ. ಅಲ್ಲದೇ ಈ ಯಾತ್ರೆಯಲ್ಲಿ ಅವರು ಸಿನಿಮಾ ತಂಡದವರ ಭಾಗಿ ಆಗಿಲ್ಲ. ಶಿವನ ಎಲ್ಲ ದೇವಸ್ಥಾನಗಳಿಗೆ ಸಾರಾ ಭೇಟಿ ನೀಡುತ್ತಿದ್ದಾರೆ’ ಎಂದು ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಇದನ್ನೂ ಓದಿ: Sara Ali Khan: ‘ನಿಮಗೆ ಇಷ್ಟ ಇಲ್ಲ ಅಂತ ನಾನು ದೇವಸ್ಥಾನಕ್ಕೆ ಹೋಗೋದು ನಿಲ್ಲಿಸಲ್ಲ’: ಸಾರಾ ಅಲಿ ಖಾನ್
ಬಾಲಿವುಡ್ನಲ್ಲಿ ಸಾರಾ ಅಲಿ ಖಾನ್ ಅವರಿಗೆ ಬೇಡಿಕೆ ಇದೆ. ಆರಂಭದಲ್ಲಿ ಅವರಿಗೆ ನೆಪೋಟಿಸಂ ಕಾರಣದಿಂದ ಅವಕಾಶ ಸಿಕ್ಕಿತು ಎಂಬುದು ನಿಜ. ಈಗ ಅವರು ತಮ್ಮ ನಟನೆಯ ಮೂಲಕವೂ ಗುರುತಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ವಿಕ್ಕಿ ಕೌಶಲ್ ಜೊತೆ ನಟಿಸಿದ ‘ಜರ ಹಟ್ಕೆ ಜರಾ ಬಚ್ಕೆ’ ಸಿನಿಮಾ ರಿಲೀಸ್ ಆಯಿತು. ಈ ಸಿನಿಮಾ ಸ್ಲೀಪರ್ ಹಿಟ್ ಆಗಿದೆ. ಹಲವು ದಿನಗಳ ಕಾಲ ಪ್ರದರ್ಶನಗೊಂಡು 87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಗೆಲುವಿನಿಂದ ಸಾರಾ ಅಲಿ ಖಾನ್ ಅವರ ಮುಖದಲ್ಲಿ ನಗು ಅರಳಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:41 am, Sun, 23 July 23