Satyaprem Ki Katha: ಹೇಗಿದೆ ‘ಸತ್ಯಪ್ರೇಮ್​ ಕಿ ಕಥಾ’ ಸಿನಿಮಾ? ಕಾರ್ತಿಕ್​ ಆರ್ಯನ್​ ಚಿತ್ರದ ಟ್ವಿಟರ್​ ವಿಮರ್ಶೆ ಇಲ್ಲಿದೆ..

|

Updated on: Jun 29, 2023 | 3:19 PM

Satyaprem Ki Katha Twitter Review: ‘ಈ ಸಿನಿಮಾದಲ್ಲಿ ಒಂದು ಶುದ್ಧವಾದ ಪ್ರೇಮ ಕಥೆ ಇದೆ. ಅದರ ಜೊತೆ ಒಂದು ಮಹತ್ವವಾದ ಸಂದೇಶ ಕೂಡ ಇದೆ’ ಎಂದು ಅಭಿಮಾನಿಗಳು ಟ್ವೀಟ್​ ಮಾಡಿದ್ದಾರೆ.

Satyaprem Ki Katha: ಹೇಗಿದೆ ‘ಸತ್ಯಪ್ರೇಮ್​ ಕಿ ಕಥಾ’ ಸಿನಿಮಾ? ಕಾರ್ತಿಕ್​ ಆರ್ಯನ್​ ಚಿತ್ರದ ಟ್ವಿಟರ್​ ವಿಮರ್ಶೆ ಇಲ್ಲಿದೆ..
ಕಿಯಾರಾ ಅಡ್ವಾಣಿ, ಕಾರ್ತಿಕ್​ ಆರ್ಯನ್​
Follow us on

ಕಾರ್ತಿಕ್​ ಆರ್ಯನ್​ (Kartik Aaryan) ಮತ್ತು ಕಿಯಾರಾ ಅಡ್ವಾಣಿ ಅವರು ಜೋಡಿಯಾಗಿ ನಟಿಸಿದ ಸತ್ಯಪ್ರೇಮ್​ ಕಿ ಕಥಾ’ (Satyaprem Ki Katha) ಸಿನಿಮಾ ಇಂದು (ಜೂನ್​ 29) ಬಿಡುಗಡೆ ಆಗಿದೆ. ಈ ಚಿತ್ರದ ಮೇಲೆ ಅವರ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಅದಕ್ಕೆ ತಕ್ಕಂತೆಯೇ ಸಿನಿಮಾ ಮೂಡಿಬಂದಿದೆ. ಬಕ್ರೀದ್​ ಹಬ್ಬದ ರಜೆ ಇರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯಲು ಇಂದು ಸಿನಿಮಾ ರಿಲೀಸ್​ ಮಾಡಲಾಗಿದೆ. ಮೊದಲ ದಿನ ಮೊದಲ ಶೋ ನೋಡಿ ಬಂದ ಪ್ರೇಕ್ಷಕರು ಟ್ವಿಟರ್​ ಮೂಲಕ ತಮ್ಮ ವಿಮರ್ಶೆ (Satyaprem Ki Katha Twitter Review) ಹಂಚಿಕೊಳ್ಳುತ್ತಿದ್ದಾರೆ. ಬಹುತೇಕ ಎಲ್ಲರಿಂದಲೂ ಪಾಸಿಟಿವ್​ ಪ್ರತಿಕ್ರಿಯೆ ಸಿಗುತ್ತಿದೆ.

ಎಲ್ಲ ಶೈಲಿಯ ಸಿನಿಮಾಗಳಿಗೂ ಸೂಕ್ತ ಆಗುವಂತಹ ಕಲಾವಿದ ಕಾರ್ತಿಕ್​ ಆರ್ಯನ್​. ಕಳೆದ ವರ್ಷ ಅವರು ‘ಭೂಲ್​ ಭುಲಯ್ಯ’ ಸಿನಿಮಾ ಮೂಲಕ ಯಶಸ್ಸು ಕಂಡಿದ್ದರು. ಈಗ ‘ಸತ್ಯಪ್ರೇಮ್​ ಕಿ ಕಥಾ’ ಸಿನಿಮಾ ಮೂಲಕ ಅವರು ಮತ್ತೊಂದು ಗೆಲುವು ಪಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಚಿತ್ರದ ಬುಕಿಂಗ್​ಗೆ ಪ್ರೇಕ್ಷಕರಿಗೆ ಉತ್ತಮ ರೆಸ್ಪಾನ್ಸ್​ ಬಂದಿದೆ. ಮೊದಲ ದಿನ ಈ ಚಿತ್ರಕ್ಕೆ 8ರಿಂದ 10 ಕೋಟಿ ರೂಪಾಯಿ ಕಲೆಕ್ಷನ್​ ಆಗುವ ನಿರೀಕ್ಷೆ ಇದೆ. ಎಲ್ಲರಿಂದ ಉತ್ತಮ ವಿಮರ್ಶೆ ಸಿಗುತ್ತಿದೆ.

‘ಈ ಸಿನಿಮಾದಲ್ಲಿ ಒಂದು ಶುದ್ಧವಾದ ಪ್ರೇಮ ಕಥೆ ಇದೆ. ಅದರ ಜೊತೆ ಒಂದು ಮಹತ್ವವಾದ ಸಂದೇಶ ಕೂಡ ಇದೆ. ಎಲ್ಲರಿಗೂ ಈ ಸಿನಿಮಾ ಇಷ್ಟ ಆಗಲಿದೆ’ ಎಂದು ಅಭಿಮಾನಿಯೊಬ್ಬರು ಟ್ವೀಟ್​ ಮಾಡಿದ್ದಾರೆ. ‘ಒಂದು ಸೀರಿಯಸ್​ ಆದ ವಿಚಾರವನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಇಂಥ ಒಂದು ಸಿನಿಮಾ ನೀಡಿದ್ದಕ್ಕೆ ನಿರ್ದೇಶಕ ಸಮೀರ್​ ವಿದ್ವಾಂಸ್​ ಅವರಿಗೆ ಹ್ಯಾಟ್ಸ್​ಆಫ್​’ ಎಂದು ಕೂಡ ಜನರು ಟ್ವೀಟ್​ ಮಾಡಿದ್ದಾರೆ.

ಕಾರ್ತಿಕ್​ ಆರ್ಯನ್​ ಅವರು ಬಾಲಿವುಡ್​ನಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಾಲಿವುಡ್​ ಮೂವೀ ಮಾಫಿಯಾವನ್ನು ಎದುರು ಹಾಕಿಕೊಂಡು ಅವರು ಬೆಳೆದಿದ್ದಾರೆ. ದೊಡ್ಡ ಯಶಸ್ಸು ಸಿಕ್ಕರೂ ಕೂಡ ಅವರ ಸರಳತೆ ಮರೆತಿಲ್ಲ. ಆ ಕಾರಣಕ್ಕಾಗಿ ಕಾರ್ತಿಕ್​ ಆರ್ಯನ್​ ಅವರನ್ನು ಫ್ಯಾನ್ಸ್​ ಇಷ್ಟಪಡುತ್ತಾರೆ. ಇನ್ನು, ಕಿಯಾರಾ ಅಡ್ವಾನಿ ಕೂಡ ಬಹುಬೇಡಿಕೆಯ ಹೀರೋಯಿನ್​ ಆಗಿದ್ದಾರೆ. ಮದುವೆ ಬಳಿಕವೂ ಅವರಿಗೆ ಒಳ್ಳೊಳ್ಳೆಯ ಆಫರ್​ಗಳು ಸಿಗುತ್ತಿವೆ. ‘ಸತ್ಯಪ್ರೇಮ್​ ಕಿ ಕಥಾ’ ಸಿನಿಮಾ ಗೆದ್ದರೆ ಅವರ ಡಿಮ್ಯಾಂಡ್​ ಇನ್ನಷ್ಟು ಹೆಚ್ಚಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.