AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ನಟ ಶರದ್ ಕಪೂರ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

Sharadh Kapoor: ಬಾಲಿವುಡ್​ನ ಜನಪ್ರಿಯ ಮತ್ತು ಹಿರಿಯ ನಟರಾದ ಶರದ್​ ಕಪೂರ್ ವಿರುದ್ಧ 32 ವರ್ಷದ ನಟಿ, ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ಒಬ್ಬಾಕೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದು, ಶರದ್ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಖ್ಯಾತ ನಟ ಶರದ್ ಕಪೂರ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು
Sharadh Kapoor
ಮಂಜುನಾಥ ಸಿ.
|

Updated on: Nov 30, 2024 | 6:01 PM

Share

ಬಾಲಿವುಡ್​ನ ಹಿರಿಯ ಮತ್ತು ಖ್ಯಾತ ನಟ ಶರದ್ ಕಪೂರ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. 32 ವರ್ಷದ ಬಾಲಿವುಡ್ ನಟಿಯೊಬ್ಬರು ಶರದ್ ಕಪೂರ್ ವಿರುದ್ಧ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಶರದ್ ಕಪೂರ್ ಮೇಲೆ ಎಫ್​ಐಆರ್ ದಾಖಲಾಗಿದೆ. ನವೆಂಬರ್ 27 ರಂದು ಶರದ್ ಕಪೂರ್, ದೂರು ನೀಡಿರುವ ಮಹಿಳೆಯ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ನಟಿ ನೀಡಿರುವ ದೂರಿನನ್ವಯ, ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್​ನಲ್ಲಿ ವಿಡಿಯೋಗಳನ್ನು ಅಪ್​ಲೋಡ್ ಮಾಡುವ 32 ವರ್ಷದ ನಟಿಯೊಬ್ಬರಿಗೆ ಶರದ್ ಕಪೂರ್ ಮೂರು ತಿಂಗಳ ಹಿಂದೆ ಮೆಸೇಜ್ ಮಾಡಿದ್ದರಂತೆ. ಆದರೆ ನಟಿ ಇತ್ತೀಚೆಗೆ ಪ್ರತಿಕ್ರಿಯೆ ನೀಡಿ ವಿಡಿಯೋ ಕಾಲ್ ಮಾಡಲು ಹೇಳಿದ್ದರಂತೆ. ಅದರಂತೆ ಶರದ್ ವಿಡಿಯೋ ಕಾಲ್ ಮಾಡಿ, ಮೆಸೆಜ ಮಾಡಿದ್ದು ತಾನೇ ಎಂದು ಕನ್​ಫರ್ಮ್ ಮಾಡಿದ್ದಾರೆ. ಅಲ್ಲದೆ ತಮ್ಮೊಟ್ಟಿಗೆ ಸೇರಿ ವಿಡಿಯೋ ಮಾಡುವಂತೆ ಹೇಳಿದ್ದಾರೆ.

ಈ ಬಗ್ಗೆ ಚರ್ಚಿಸಲು ಕಚೇರಿಗೆ ಬರುವಂತೆ ಹೇಳಿ ಗೂಗಲ್ ಮ್ಯಾಪ್​ನಲ್ಲಿ ಲೊಕೇಶನ್ ಸಹ ಕಳಿಸಿದ್ದಾರೆ. ಆದರೆ ನಟಿ ಲೊಕೇಶನ್ ತಲುಪಿ ನೋಡಿದರೆ ಅದು ಶರದ್ ಕಪೂರ್ ಮನೆಯಾಗಿತ್ತಂತೆ. ಮನೆಯ ಒಳಗೆ ಹೋದಾಗ ನಟಿಯನ್ನು ಶರದ್ ಕಪೂರ್​ರ ರೂಂಗೆ ಹೋಗುವಂತೆ ಸಿಬ್ಬಂದಿ ಹೇಳಿದ್ದಾರೆ. ಅಲ್ಲಿ ಹೋಗಿ ನೋಡಿದರೆ ಶರದ್ ಕಪೂರ್ ಬೆತ್ತಲೆಯಾಗಿದ್ದರಂತೆ. ಇದನ್ನು ನೋಡಿ ಶಾಕ್ ಆದ ನಟಿ, ಹೀಗಿದ್ದರೆ ನನಗೆ ಸರಿ ಆಗುವುದಿಲ್ಲ. ಬಟ್ಟೆ ಹಾಕಿಕೊಂಡರಷ್ಟೆ ಮಾತನಾಡುವೆ ಎಂದರಂತೆ.

ಇದನ್ನೂ ಓದಿ:ಬಾಲಿವುಡ್ ನಾಯಕಿಯಂತಿರುವ ಬಚ್ಚನ್ ಮೊಮ್ಮಗಳಿಗೆ ಸಿನಿಮಾಗಳ ಬಗ್ಗೆ ಆಸಕ್ತಿಯಿಲ್ಲ

ಆದರೆ ಶರದ್ ಕಪೂರ್, ಅದಕ್ಕೆ ಒಪ್ಪದೆ, ಬಲವಂತದಿಂದ ನಟಿಯನ್ನು ತಬ್ಬಿಕೊಂಡು ಮುತ್ತು ಕೊಟ್ಟಿದ್ದಾರೆ. ಆ ನಟಿ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಅದಾದ ಬಳಿಕವೂ ಸಹ ಶರದ್ ಕಪೂರ್, ನಟಿಯ ವಾಟ್ಸ್​ಆಪ್​ಗೆ ಸಂದೇಶ ಕಳಿಸಿ, ಕೆಲವು ಅಶ್ಲೀಲ ವಿಡಿಯೋಗಳನ್ನು ಕಳಿಸಿದ್ದರಂತೆ. ಇದೀಗ ನಟಿ ಶರದ್ ಕಪೂರ್ ವಿರುದ್ಧ ದೂರು ನೀಡಿದ್ದು, ಶರದ್ ವಿರುದ್ಧ ಲೈಂಗಿಕ ದೌರ್ಜನ್ಯ ಇನ್ನಿತರೆ ಪ್ರಕರಣಗಳು ದಾಖಲಾಗಿವೆ.

1995 ರಿಂದಲೂ ಶರದ್ ಕಪೂರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಲವಾರು ಸಿನಿಮಾಗಳಲ್ಲಿ ಅವರು ವಿಲನ್ ಆಗಿಯೇ ನಟಿಸಿರುವುದು ಹೆಚ್ಚು. ಶಾರುಖ್ ಖಾನ್ ನಟನೆಯ ‘ಜೋಶ್’, ಹೃತಿಕ್ ನಟನೆಯ ‘ಲಕ್ಷ್ಯ’ ಇನ್ನೂ ಕೆಲವು ಸಿನಿಮಾಗಳಲ್ಲಿ ಶರದ್ ನಿರ್ವಹಿಸಿರುವ ಪಾತ್ರ ಬಹಳ ಗಮನ ಸೆಳೆದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?