
ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ (Aryan Khan) ಅವರು ಬಿಸ್ನೆಸ್ನಲ್ಲಿ ಆಸಕ್ತಿ ಹೊಂದಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಬಟ್ಟೆ ವ್ಯಾಪಾರ ಶುರು ಮಾಡಿದ್ದರು. D’YAVOL X ಎಂಬ ಬ್ರ್ಯಾಂಡ್ನ ಬಟ್ಟೆಗಳನ್ನು ಅವರು ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದ್ದಾರೆ. ಆದರೆ ಇವುಗಳ ಬೆಲೆ ಸಖತ್ ದುಬಾರಿ ಆಗಿದೆ. ಒಂದು ಜಾಕೆಟ್ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ. ಇದರಿಂದ ಸಾಮಾನ್ಯ ಜನರು ಈ ಬ್ರ್ಯಾಂಡ್ನ ಬಟ್ಟೆಗಳನ್ನು ಕೊಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವಿಚಾರವಾಗಿ ಕೆಲವರು ಶಾರುಖ್ ಖಾನ್ (Shah Rukh Khan) ಬಳಿ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಶಾರುಖ್ ನೀಡಿದ ಉತ್ತರ ಸಖತ್ ಫನ್ನಿ ಆಗಿದೆ. ಮಗನ ಬಟ್ಟೆ ವ್ಯಾಪಾರದಲ್ಲಿ ತಾವು ಕೂಡ ಚೌಕಾಸಿ ಮಾಡಲಾಗುತ್ತಿಲ್ಲ ಎಂದು ಶಾರುಖ್ ಹೇಳಿದ್ದಾರೆ.
ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಖಚಿತ ಪಡಿಸಲು ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಅದರ ಬೆನ್ನಲ್ಲೇ ಶಾರುಖ್ ಖಾನ್ ಅವರು ಟ್ವಿಟರ್ ಮೂಲಕ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದ್ದಾರೆ. ಆಗ ನೆಟ್ಟಿಗರೊಬ್ಬರು ಆರ್ಯನ್ ಖಾನ್ ಮಾರಾಟ ಮಾಡುತ್ತಿರುವ ಜಾಕೆಟ್ ಬೆಲೆಯ ಬಗ್ಗೆ ತಕರಾರು ತೆಗೆದಿದ್ದಾರೆ.
Aryan Khan: ಬಟ್ಟೆ ವ್ಯಾಪಾರ ಶುರು ಮಾಡಿದ ಆರ್ಯನ್ ಖಾನ್ಗೆ ಭರ್ಜರಿ ಲಾಭ; ಮಗನ ಬಗ್ಗೆ ಶಾರುಖ್ ಖಾನ್ಗೆ ಹೆಮ್ಮೆ
‘1000 ಅಥವಾ 2000 ರೂಪಾಯಿ ಬೆಲೆಯಲ್ಲೂ DYavol X ಬ್ರ್ಯಾಂಡ್ನ ಜಾಕೆಟ್ಗಳನ್ನು ತಯಾರು ಮಾಡಿ. ಈಗಿರುವ ಬೆಲೆಯ ಜಾಕೆಟ್ಗಳನ್ನು ಖರೀದಿಸಲು ಮನೆ ಮಾರಾಟ ಮಾಡಬೇಕಾಗುತ್ತದೆ’ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಅದಕ್ಕೆ ಉತ್ತರಿಸಿರುವ ಶಾರುಖ್ ಖಾನ್, ‘ಇವರು ನನಗೂ ಕಡಿಮೆ ಬೆಲೆಗೆ ಕೊಡುತ್ತಿಲ್ಲ. ಏನಾದರೂ ಮಾಡ್ತೀನಿ ಬಿಡಿ’ ಎಂದು ಪೋಸ್ಟ್ ಮಾಡಿದ್ದಾರೆ.
ಒಂದು ಜಾಕೆಟ್ನ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ ಹಾಗೂ ಟಿ-ಶರ್ಟ್ ಬೆಲೆ 24 ಸಾವಿರ ರೂಪಾಯಿ ಇದ್ದರೂ ಕೂಡ ಜನರು ಇದನ್ನು ಮುಗಿಬಿದ್ದು ಖರೀದಿಸಿದ್ದಾರೆ. ಗ್ರಾಹಕರು ತೋರಿಸಿದ ಪ್ರೀತಿಗೆ ಆರ್ಯನ್ ಖಾನ್ ಫಿದಾ ಆಗಿದ್ದಾರೆ. ಈ ಬಗ್ಗೆ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ ಮೂಲಕ ಮಾಹಿತಿ ಹಂಚಿಕೊಂಡು ಎಲ್ಲರಿಗೂ ಧನ್ಯವಾದ ತಿಳಿಸಿದ್ದರು. ಮಗನ ಬಿಸ್ನೆಸ್ಗೆ ಶಾರುಖ್ ಖಾನ್ ಅವರು ಬೆಂಬಲವಾಗಿ ನಿಂತಿದ್ದಾರೆ. ಈ ಬ್ರ್ಯಾಂಡ್ನ ಜಾಹೀರಾತಿನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದು ಆರ್ಯನ್ ಖಾನ್ಗೆ ಸಹಕಾರಿ ಆಗಿದೆ. ಈ ಹಿಂದೆ ಡ್ರಗ್ಸ್ ಪಾರ್ಟಿ ಆರೋಪದ ಮೇಲೆ ಆರ್ಯನ್ ಖಾನ್ ಅರೆಸ್ಟ್ ಆಗಿದ್ದರು. ಆಗ ಮಗನ ಭವಿಷ್ಯದ ಬಗ್ಗೆ ಶಾರುಖ್ಗೆ ಚಿಂತೆ ಆಗಿತ್ತು. ಆದರೆ ಈಗ ಪುತ್ರನ ಬಗ್ಗೆ ಅವರು ಹೆಮ್ಮೆಪಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.