AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aryan Khan: ಬಟ್ಟೆ ವ್ಯಾಪಾರ ಶುರು ಮಾಡಿದ ಆರ್ಯನ್​ ಖಾನ್​ಗೆ ಭರ್ಜರಿ ಲಾಭ; ಮಗನ ಬಗ್ಗೆ ಶಾರುಖ್​ ಖಾನ್​ಗೆ ಹೆಮ್ಮೆ

Shah Rukh Khan: ಆರ್ಯನ್​ ಖಾನ್​ ಅವರು ಮಾರಾಟ ಮಾಡುತ್ತಿರುವ ಬಟ್ಟೆಗಳ ಬೆಲೆ ಸಿಕ್ಕಾಪಟ್ಟೆ ದುಬಾರಿ. ಹಾಗಿದ್ದರೂ ಕೂಡ ಜನರು ಇದನ್ನು ಮುಗಿಬಿದ್ದು ಖರೀದಿಸಿದ್ದಾರೆ.

Aryan Khan: ಬಟ್ಟೆ ವ್ಯಾಪಾರ ಶುರು ಮಾಡಿದ ಆರ್ಯನ್​ ಖಾನ್​ಗೆ ಭರ್ಜರಿ ಲಾಭ; ಮಗನ ಬಗ್ಗೆ ಶಾರುಖ್​ ಖಾನ್​ಗೆ ಹೆಮ್ಮೆ
ಆರ್ಯನ್ ಖಾನ್
ಮದನ್​ ಕುಮಾರ್​
|

Updated on:May 02, 2023 | 11:36 AM

Share

ಸ್ಟಾರ್​ ಮಕ್ಕಳಿಗೆ ಅವಕಾಶಗಳು ಸುಲಭವಾಗಿ ಸಿಗುತ್ತದೆ. ಹಾಗಾಗಿ ಅನೇಕ ಹೀರೋಗಳ ಮಕ್ಕಳು ನೇರವಾಗಿ ಚಿತ್ರರಂಗಕ್ಕೆ ಎಂಟ್ರಿ ಪಡೆಯುತ್ತಾರೆ. ಬಾಲಿವುಡ್​ನಲ್ಲಿ ಅನೇಕ ಸ್ಟಾರ್​ ಕಿಡ್​ಗಳು ತೆರೆಮೇಲೆ ಮಿಂಚುತ್ತಿದ್ದಾರೆ. ಆದರೆ ಶಾರುಖ್​ ಖಾನ್​ (Shah Rukh Khan) ಮಗ ಆರ್ಯನ್​ ಖಾನ್​ ಈ ವಿಚಾರದಲ್ಲಿ ಕೊಂಚ ಭಿನ್ನ. ನಟನೆಗಿಂತಲೂ ಹೆಚ್ಚಾಗಿ ಬೇರೆ ವಿಚಾರಗಳಲ್ಲಿ ಅವರಿಗೆ ಆಸಕ್ತಿ ಇದೆ. ನಿರ್ದೇಶನದಲ್ಲಿ ಅವರು ವೃತ್ತಿಜೀವನ ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ. ಇನ್ನು, ಬಿಸ್ನೆಸ್​ ಬಗ್ಗೆಯೂ ಅವರು ಇಂಟರೆಸ್ಟ್​ ತೋರಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಆರ್ಯನ್​ ಖಾನ್​ (Aryan Khan) ಅವರು ಬಟ್ಟೆ ವ್ಯಾಪಾರ ಆರಂಭಿದರು. ಅಂದರೆ, ತಮ್ಮದೇ ಹೊಸ ಬ್ರ್ಯಾಂಡ್​ನ ಕಾಸ್ಟ್ಯೂಮ್​ಗಳನ್ನು ಅವರು ಮಾರುಕಟ್ಟೆಗೆ ಪರಿಚಯಿಸಿದರು. ಆ ಕ್ಷೇತ್ರದಲ್ಲಿ ಅವರಿಗೆ ಭರ್ಜರಿ ಲಾಭ ಆಗುತ್ತಿದೆ. ಮಗನ ವ್ಯಾಪಾರ ಕಂಡು ಶಾರುಖ್​ ಖಾನ್​ಗೆ ಖುಷಿ ಆಗಿದೆ.

ಸಲ್ಮಾನ್​ ಖಾನ್​, ದೀಪಿಕಾ ಪಡುಕೋಣೆ, ಆಲಿಯಾ ಭಟ್​, ಹೃತಿಕ್​ ರೋಷನ್​, ಸೈಫ್​ ಅಲಿ ಖಾನ್​ ಮುಂತಾದ ಸೆಲೆಬ್ರಿಟಿಗಳು ತಮ್ಮ ಬಟ್ಟೆ ಬ್ರ್ಯಾಂಡ್​ ಹೊಂದಿದ್ದಾರೆ. ಅದಕ್ಕೆ ಆರ್ಯನ್​ ಖಾನ್​ ಕೂಡ ಸೇರ್ಪಡೆ ಆಗಿದ್ದಾರೆ. ಕೇವಲ ಆನ್​ಲೈನ್​ನಲ್ಲಿ ಮಾತ್ರ ಅವರು ಮಾರಾಟ ಮಾಡುತ್ತಿದ್ದಾರೆ. ಮೊದಲ ದಿನವೇ ಅವರಿಗೆ ಸಖತ್​ ಲಾಭ ಆಗಿದೆ.

ಇದನ್ನೂ ಓದಿ
Image
ಫ್ಯಾಮಿಲಿ ಜೊತೆ ಖುಷಿಖುಷಿಯಾಗಿ ಫೋಟೋಶೂಟ್​ ಮಾಡಿಸಿದ ಶಾರುಖ್​ ಖಾನ್​
Image
Aryan Khan: ನಿಜಕ್ಕೂ ಆರ್ಯನ್ ಖಾನ್ ವ್ಯಕ್ತಿತ್ವ ಹೇಗೆ? ಶಾರುಖ್ ಮಗನ ನಿಜವಾದ ಮುಖ ತೆರೆದಿಟ್ಟ ಯುವ ನಟಿ
Image
Suhana Khan: ‘ಮಗಳನ್ನು ಸರಿಯಾಗಿ ಬೆಳೆಸಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡ ಶಾರುಖ್​ ಖಾನ್​
Image
ಶಾರುಖ್ ಖಾನ್ ಪುತ್ರ ಆರ್ಯನ್​ ಬಿಡುಗಡೆಗೆ ಜಾಮೀನು ಬಾಂಡ್ ನೀಡಿದ ಬಗ್ಗೆ ಜೂಹಿ ಚಾವ್ಲಾ ಮಾತು

ಇದನ್ನೂ ಓದಿ: ​Aryan Khan: ಚಿತ್ರರಂಗಕ್ಕೆ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಎಂಟ್ರಿ; ಬ್ರೇಕಿಂಗ್​ ನ್ಯೂಸ್​ ನೀಡಿದ ಸ್ಟಾರ್​ ಕಿಡ್​

ಆರ್ಯನ್​ ಖಾನ್​ ಅವರು ಮಾರಾಟ ಮಾಡುತ್ತಿರುವ ಬಟ್ಟೆಗಳ ಬೆಲೆ ಸಿಕ್ಕಾಪಟ್ಟೆ ದುಬಾರಿ ಆಗಿವೆ. ಒಂದು ಜಾಕೆಟ್​ನ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ. ಟಿ-ಶರ್ಟ್​ ಬೆಲೆ 24 ಸಾವಿರ ರೂಪಾಯಿ. ಹಾಗಿದ್ದರೂ ಕೂಡ ಜನರು ಇದನ್ನು ಮುಗಿಬಿದ್ದು ಖರೀದಿಸಿದ್ದಾರೆ. ಗ್ರಾಹಕರು ತೋರಿಸಿದ ಪ್ರೀತಿಗೆ ಆರ್ಯನ್​ ಖಾನ್​ ಫಿದಾ ಆಗಿದ್ದಾರೆ. ಈ ಬಗ್ಗೆ ಅವರು ಇನ್​ಸ್ಟಾಗ್ರಾಮ್​ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

View this post on Instagram

A post shared by @dyavol.x

ಮಗನ ಬಿಸ್ನೆಸ್​ಗೆ ಶಾರುಖ್​ ಖಾನ್​ ಅವರು ಬೆಂಬಲವಾಗಿ ನಿಂತಿದ್ದಾರೆ. ಈ ಬ್ರ್ಯಾಂಡ್​ನ ಜಾಹೀರಾತಿನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದು ಆರ್ಯನ್​ ಖಾನ್​ಗೆ ಸಹಕಾರಿ ಆಗಿದೆ. ಈ ಹಿಂದೆ ಡ್ರಗ್ಸ್​ ಪಾರ್ಟಿ ಆರೋಪದ ಮೇಲೆ ಆರ್ಯನ್​ ಖಾನ್​ ಅರೆಸ್ಟ್​ ಆಗಿದ್ದರು. ಆಗ ಮಗನ ಭವಿಷ್ಯದ ಬಗ್ಗೆ ಶಾರುಖ್​ಗೆ ಚಿಂತೆ ಆಗಿತ್ತು. ಆದರೆ ಈಗ ಪುತ್ರನ ಬಗ್ಗೆ ಅವರು ಹೆಮ್ಮೆಪಡುತ್ತಿದ್ದಾರೆ.

ಇದನ್ನೂ ಓದಿ: Aryan Khan: 25ರ ಪ್ರಾಯದ ಆರ್ಯನ್​ ಖಾನ್​ ಜತೆ 30ರ ನೋರಾ ಫತೇಹಿ ಡೇಟಿಂಗ್​? ಎಲ್ಲೆಲ್ಲೂ ಇವರದ್ದೇ ಗುಸುಗುಸು

ನಿರ್ದೇಶನದಲ್ಲಿ ಆರ್ಯನ್​ ಖಾನ್​ಗೆ ಆಸಕ್ತಿ ಇದೆ. ಈಗಾಗಲೇ ಅವರು ಸ್ಕ್ರಿಪ್ಟ್​ ಕೆಲಸ ಶುರು ಮಾಡಿದ್ದಾರೆ. ಅವರ ಈ ಪ್ರಾಜೆಕ್ಟ್​ಗೆ ಶಾರುಖ್​ ಖಾನ್​ ಒಡೆತನದ ರೆಡ್ ಚಿಲ್ಲೀಸ್​ ಎಂಟರ್​ಟೇನ್ಮೆಂಟ್ ಸಂಸ್ಥೆ ಬಂಡವಾಳ ಹೂಡುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗ ಆಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:36 am, Tue, 2 May 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್