Suhana Khan: ‘ಮಗಳನ್ನು ಸರಿಯಾಗಿ ಬೆಳೆಸಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡ ಶಾರುಖ್​ ಖಾನ್​

Shah Rukh Khan: ಖಾಸಗಿ ಕಾರ್ಯಕ್ರಮದಲ್ಲಿ ಸುಹಾನಾ ಖಾನ್​ ಅವರು ಗೌರವದಿಂದ ನಡೆದುಕೊಂಡ ರೀತಿ ಗಮನ ಸೆಳೆದಿದೆ. ಅವರು ಆಡಿದ ಮಾತುಗಳು ಸಹ ಎಲ್ಲರಿಗೂ ಮೆಚ್ಚುಗೆ ಆಗಿವೆ.

Suhana Khan: ‘ಮಗಳನ್ನು ಸರಿಯಾಗಿ ಬೆಳೆಸಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡ ಶಾರುಖ್​ ಖಾನ್​
ಶಾರುಖ್ ಖಾನ್, ಸುಹಾನಾ ಖಾನ್
Follow us
ಮದನ್​ ಕುಮಾರ್​
|

Updated on:Apr 13, 2023 | 12:43 PM

ಖ್ಯಾತ ನಟ ಶಾರುಖ್​ ಖಾನ್​ (Shah Rukh Khan) ಅವರ ಪುತ್ರಿ ಸುಹಾನಾ ಖಾನ್​ ಇನ್ನೂ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿಲ್ಲ. ಅಷ್ಟರಲ್ಲಾಗಲೇ ಅವರು ದೊಡ್ಡ ದೊಡ್ಡ ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಸ್ಟಾರ್​ ಕಿಡ್​ ಎಂಬ ಕಾರಣಕ್ಕೆ ಅವರಿಗೆ ಒಳ್ಳೊಳ್ಳೆಯ ಅವಕಾಶಗಳು ಸಿಗುತ್ತಿವೆ. ಸುಹಾನಾ ಖಾನ್​ (Suhana Khan) ಒಪ್ಪಿಕೊಂಡಿರುವ ಮೊದಲ ಸಿನಿಮಾ ‘ದಿ ಆರ್ಚೀಸ್​’ ಇನ್ನೂ ರಿಲೀಸ್​ ಆಗಿಲ್ಲ. ಅದಕ್ಕೂ ಮುನ್ನವೇ ಅವರು ಸೆಲೆಬ್ರಿಟಿ ಆಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ ಹೆಚ್ಚಾಗಿದೆ. ಎಲ್ಲರ ಎದುರು ಮಗಳು ನಡೆದುಕೊಳ್ಳುತ್ತಿರುವ ರೀತಿ ಕಂಡು ಶಾರುಖ್​ ಖಾನ್​ಗೆ ಹೆಮ್ಮೆ ಆಗಿದೆ. ಮಗಳನ್ನು ಸರಿಯಾದ ರೀತಿಯಲ್ಲಿ ಬೆಳೆಸಿದ್ದೇನೆ ಎಂದು ಅವರು ಹಿರಿಹಿರಿ ಹಿಗ್ಗುತ್ತಿದ್ದಾರೆ. ಈ ಕುರಿತು ಅವರು ಮಾಡಿರುವ ಪೋಸ್ಟ್​ ವೈರಲ್​ ಆಗಿದೆ. ಅದಕ್ಕೆ ಅನೇಕ ಸೆಲೆಬ್ರಿಟಿಗಳ ಜೊತೆಯಲ್ಲಿ ಸುಹಾನಾ ಖಾನ್​ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಸೆಲೆಬ್ರಿಟಿಗಳ ಮಕ್ಕಳು ಹೋದಲ್ಲಿ ಬಂದಲ್ಲಿ ಕಿರಿಕ್​ ಮಾಡಿಕೊಳ್ಳುವುದು ಕಾಮನ್​. ಆದರೆ ಸುಹಾನಾ ಖಾನ್​ ಅವರು ಅಂಥವರ ಪಟ್ಟಿಗೆ ಸೇರಿಲ್ಲ. ಇತ್ತೀಚೆಗೆ ಅವರು ಜಾಗತಿಕ ಮಟ್ಟದ ಫ್ಯಾಷನ್​ ಬ್ರ್ಯಾಂಡ್​ಗೆ ರಾಯಭಾರಿಯಾಗಿ ಆಯ್ಕೆಯಾದರು. ಅದರ ಕಾರ್ಯಕ್ರಮದಲ್ಲಿ ಎಲ್ಲರ ಜೊತೆ ಅವರು ಗೌರವದಿಂದ ನಡೆದುಕೊಂಡ ರೀತಿ ಗಮನ ಸೆಳೆದಿದೆ. ಸುಹಾನಾ ಆಡಿದ ಮಾತುಗಳು ಸಹ ಎಲ್ಲರಿಗೂ ಮೆಚ್ಚುಗೆ ಆಗಿವೆ. ಇನ್ನು ಅವರು ಡ್ರೆಸ್​ ಮಾಡಿಕೊಂಡ ಪರಿಯೂ ಪ್ರಶಂಸೆಗೆ ಒಳಗಾಗಿದೆ. ಮಗಳ ಈ ಬೆಳವಣಿಗೆ ಕಂಡು ಶಾರುಖ್​ ಖಾನ್​ಗೆ ಖುಷಿ ಆಗಿದೆ.

ಇದನ್ನೂ ಓದಿ
Image
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Image
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Image
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
Image
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ
View this post on Instagram

A post shared by Shah Rukh Khan (@iamsrk)

ಖಾಸಗಿ ಕಾರ್ಯಕ್ರಮದಲ್ಲಿ ಸುಹಾನಾ ಖಾನ್​ ಅವರು ಭಾಗವಹಿಸಿದ ಫೋಟೋ ಮತ್ತು ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಶಾರುಖ್​ ಖಾನ್​ ಶೇರ್​ ಮಾಡಿಕೊಂಡಿದ್ದಾರೆ. ‘ಈ ಅವಕಾಶ ಪಡೆದಿದ್ದಕ್ಕಾಗಿ ಅಭಿನಂದನೆಗಳು ಮಗಳೆ. ಬಟ್ಟೆ, ನಡೆ-ನುಡಿ ಎಲ್ಲವೂ ಚೆನ್ನಾಗಿದೆ. ಸರಿಯಾಗಿ ಬೆಳೆಸಿದ್ದಕ್ಕೆ ನಾನು ಕ್ರಿಡಿಟ್​ ತೆಗೆದುಕೊಳ್ಳಲೇ? ಲವ್​ ಯೂ’ ಎಂದು ಶಾರುಖ್​ ಖಾನ್​ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: Suhana Khan: ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ಗೆ ಏನು ಚಿಂತೆ? ಗಡಿಬಿಡಿಯಲ್ಲಿ ಹೊರಟ ಸ್ಟಾರ್​ ಕಿಡ್​

ಸುಹಾನಾ ಖಾನ್​ ಅವರಿಗೆ ಅನೇಕ ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಶಾರುಖ್​ ಖಾನ್​ ಅವರ ಈ ಪೋಸ್ಟ್​ಗೆ 23 ಲಕ್ಷಕ್ಕೂ ಅಧಿಕ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಮಗಳನ್ನು ಪ್ರೋತ್ಸಾಹಿಸುವ ಅವರ ಗುಣವನ್ನು ಕಂಡು ಫ್ಯಾನ್ಸ್​ ಚಪ್ಪಾಳೆ ತಟ್ಟಿದ್ದಾರೆ. 16 ಸಾವಿರಕ್ಕೂ ಅಧಿಕ ಕಮೆಂಟ್​ಗಳು ಬಂದಿವೆ. ಇದರಿಂದ ಸುಹಾನಾ ಖಾನ್​ ಅಭಿಮಾನಿಗಳಿಗೆ ಖುಷಿ ಆಗಿದೆ.

ಇದನ್ನೂ ಓದಿ: ಶಾರುಖ್​ ಪುತ್ರಿ ಸುಹಾನಾ ಖಾನ್​ ಹಾಟ್​ ಫೋಟೋಶೂಟ್ ವೈರಲ್​; ಅಪ್ಪನ ಕಮೆಂಟ್​ ಏನು?​

ಇನ್ನು, ಶಾರುಖ್​ ಖಾನ್​ ಅವರ ಪುತ್ರ ಆರ್ಯನ್​ ಖಾನ್​ 2021ರಲ್ಲಿ ಡ್ರಗ್ಸ್​ ಪಾರ್ಟಿ ಆರೋಪದ ಮೇಲೆ ಅರೆಸ್ಟ್​ ಆಗಿದ್ದರು. ಅದು ಕಿಂಗ್​ ಖಾನ್​ ಕುಟುಂಬಕ್ಕೆ ಬೇಸರ ಮೂಡಿಸಿತ್ತು. ಈಗ ಆರ್ಯನ್​ ಖಾನ್​ ಅವರು ನಿರ್ದೇಶನದಲ್ಲಿ ಆಸಕ್ತಿ ತೋರಿಸಿದ್ದಾರೆ. ಅವರ ಪ್ರಾಜೆಕ್ಟ್​ ಬಗ್ಗೆ ಶೀಘ್ರದಲ್ಲೇ ಅಪ್​ಡೇಟ್​ ಸಿಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:43 pm, Thu, 13 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ