‘ಆಶಿಕಿ 3’ ಬಗ್ಗೆ ಸಿಕ್ಕಿದೆ ಅಪ್ಡೇಟ್; ಕಾರ್ತಿಕ್ ಆರ್ಯನ್ಗೆ ಜೊತೆಯಾಗಲಿದ್ದಾರೆ ಕತ್ರಿನಾ ಅಥವಾ ದೀಪಿಕಾ?
‘ಆಶಿಕಿ 2’ ಸಿನಿಮಾ ಹಿಟ್ ಆಯಿತು. 2013ರಲ್ಲಿ ರಿಲೀಸ್ ಆದ ಈ ಚಿತ್ರಕ್ಕೆ 10 ವರ್ಷಗಳ ಬಳಿಕ ಸೀಕ್ವೆಲ್ ಸಿದ್ಧವಾಗುತ್ತಿದೆ.
ಕಾರ್ತಿಕ್ ಆರ್ಯನ್ ಬಾಲಿವುಡ್ನ ಬೇಡಿಕೆಯ ಹೀರೋ. ಜೀರೋದಿಂದ ಬಂದ ಅವರು ಈಗ ಸ್ಟಾರ್ ಹೀರೋ ಆಗಿದ್ದಾರೆ. ಬಾಲಿವುಡ್ನಲ್ಲಿ ಅವರನ್ನು ತುಳಿಯಲು ಕೆಲವರು ಪ್ರಯತ್ನಿಸಿದರು. ಅದೆಲ್ಲವನ್ನೂ ಕಾರ್ತಿಕ್ ಆರ್ಯನ್ (Kartik Aaryan) ಕೊಡವಿ ನಿಂತಿದ್ದಾರೆ. ಹಲವು ಆಫರ್ಗಳು ಅವರನ್ನು ಹುಡುಕಿ ಬರುತ್ತಿವೆ. ‘ಆಶಿಕಿ 3’ ಸಿನಿಮಾದಲ್ಲಿ (Aashiqui 3) ನಟಿಸೋಕೆ ಅವರಿಗೆ ಅವಕಾಶ ಸಿಕ್ಕಿದೆ. ಈಗ ಈ ಚಿತ್ರದಲ್ಲಿ ನಟಿಸೋ ನಾಯಕಿ ಯಾರು ಎನ್ನುವ ಹೆಸರು ರಿವೀಲ್ ಆಗಿದೆ. ಮೂಲಗಳ ಪ್ರಕಾರ ದೀಪಿಕಾ ಪಡುಕೋಣೆ ಅಥವಾ ಕತ್ರಿನಾ ಕೈಫ್ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ. ಈ ಸುದ್ದಿ ಕೇಳಿ ಫ್ಯಾನ್ಸ್ ಖುಷ್ ಆಗಿದ್ದಾರೆ.
‘ಆಶಿಕಿ 2’ ಸಿನಿಮಾ ಹಿಟ್ ಆಯಿತು. 2013ರಲ್ಲಿ ರಿಲೀಸ್ ಆದ ಈ ಚಿತ್ರಕ್ಕೆ 10 ವರ್ಷಗಳ ಬಳಿಕ ಸೀಕ್ವೆಲ್ ಸಿದ್ಧವಾಗುತ್ತಿದೆ. ಆದಿತ್ಯ ರಾಯ್ ಕಪೂರ್, ಶ್ರದ್ಧಾ ಕಪೂರ್, ಮಹೇಶ್ ಠಾಕೂರ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ನಿರ್ಮಾಣ ಮಾಡಿದ್ದ ಭೂಷಣ್ ಕುಮಾರ್ ಮೊದಲಾದವರು ಈಗ ‘ಆಶಿಕಿ 3’ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಅವರು ಅನುಭವಿ ನಾಯಕಿಯರಿಗೆ ಮಣೆ ಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಒಟ್ಟಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ-ಕಾರ್ತಿಕ್ ಆರ್ಯನ್; ಫ್ಯಾನ್ಸ್ ಇಟ್ರು ‘ಆಶಿಕಿ 3’ ಬೇಡಿಕೆ
ಕತ್ರಿನಾ ಕೈಫ್ ಹಾಗೂ ದೀಪಿಕಾ ಪಡುಕೋಣೆಗೆ ಬಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಇದೆ. ಈ ಇಬ್ಬರಲ್ಲಿ ಒಬ್ಬರು ‘ಆಶಿಕಿ 3’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಡಿಸೆಂಬರ್ ವೇಳೆಗೆ ಸಿನಿಮಾ ಶೂಟಿಂಗ್ ಆರಂಭ ಆಗಲಿದೆ.
ಇದನ್ನೂ ಓದಿ: ವೈಮನಸ್ಸು ಬದಿಗಿಟ್ಟು ಭೇಟಿ ಆದ ಕರಣ್ ಜೋಹರ್-ಕಾರ್ತಿಕ್ ಆರ್ಯನ್; ಆದರೂ ತಪ್ಪಲಿಲ್ಲ ಟೀಕೆ
ಭೂಷಣ್ ಕುಮಾರ್ ಹಾಗೂ ಕಾರ್ತಿಕ್ ಆರ್ಯನ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಭೂಷಣ್ ಕುಮಾರ್ ಬಂಡವಾಳ ಹೂಡಿದ್ದ ‘ಭೂಲ್ ಭುಲಯ್ಯ 2’ ಚಿತ್ರದಲ್ಲಿ ಕಾರ್ತಿಕ್ ನಟಿಸಿದ್ದರು. ಈ ಚಿತ್ರ ಗೆದ್ದಿತ್ತು. ಹೀಗಾಗಿ ಭೂಷಣ್ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಆಗಿದ್ದಾರೆ ಕಾರ್ತಿಕ್. ಇವರು ‘ಭೂಲ್ ಭುಲಯ್ಯ 3’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ‘ಆಶಿಕಿ 3’ ಅವಕಾಶ ಕೂಡ ಕಾರ್ತಿಕ್ ಆರ್ಯನ್ ಪಾಲಾಗಿದೆ. ಚಿತ್ರದ ನಾಯಕಿ ಯಾರು ಎಂಬುದು ಶೀಘ್ರವೇ ಘೋಷಣೆ ಆಗೋ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ