ಒಟ್ಟಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ-ಕಾರ್ತಿಕ್ ಆರ್ಯನ್​; ಫ್ಯಾನ್ಸ್ ಇಟ್ರು ‘ಆಶಿಕಿ 3’ ಬೇಡಿಕೆ

ರಶ್ಮಿಕಾ ಹಾಗೂ ಕಾರ್ತಿಕ್ ಆರ್ಯನ್ ಅವರು ಕ್ರೀಮ್ ಒಂದರ ಪ್ರಮೋಷನ್​ಗೆ ಒಂದಾಗಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಒಟ್ಟಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ-ಕಾರ್ತಿಕ್ ಆರ್ಯನ್​; ಫ್ಯಾನ್ಸ್ ಇಟ್ರು ‘ಆಶಿಕಿ 3’ ಬೇಡಿಕೆ
ರಶ್ಮಿಕಾ
TV9kannada Web Team

| Edited By: Rajesh Duggumane

Sep 16, 2022 | 9:56 AM

ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ದೊಡ್ಡ ಬೇಡಿಕೆ ಸೃಷ್ಟಿ ಆಗಿದೆ. ಹಾಗಂತ ಈವರೆಗೆ ಅವರ ಯಾವುದೇ ಬಾಲಿವುಡ್​ ಸಿನಿಮಾ ರಿಲೀಸ್ ಆಗಿಲ್ಲ. ಆದರೂ ಅವರಿಗೆ ಇರುವ ಬೇಡಿಕೆ ಹೆಚ್ಚುತ್ತಲೇ ಇದೆ. ಇನ್ನು ಕಾರ್ತಿಕ್ ಆರ್ಯನ್ (Kartik Aryan) ಅವರು ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಏನೆಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಈಗ ಇವರಿಬ್ಬರೂ ಒಂದಾಗಿದ್ದಾರೆ. ಹೊಸ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಹಾಗಂತ ಇದು ಹೊಸ ಸಿನಿಮಾಗಾಗಿ ಅಲ್ಲ, ಬ್ರ್ಯಾಂಡ್ ಒಂದರ ಪ್ರಮೋಷನ್​ಗಾಗಿ.

ಅನೇಕ ಸೆಲೆಬ್ರಿಟಿಗಳು ನಟನೆಯ ಜತೆಗೆ ಬ್ರ್ಯಾಂಡ್ ಪ್ರಚಾರದಲ್ಲಿ ಭಾಗಿ ಆಗುತ್ತಾರೆ. ನಟಿ ರಶ್ಮಿಕಾ ಮಂದಣ್ಣ ಅವರಿಗಂತೂ ಈ ರೀತಿಯ ಹಲವು ಆಫರ್​ಗಳು ಬರುತ್ತಿವೆ. ಅವರ ಜನಪ್ರಿಯತೆ ಕಾರಣದಿಂದ ಸಾಕಷ್ಟು ಬ್ರ್ಯಾಂಡ್​ಗಳು ರಶ್ಮಿಕಾ ಅವರನ್ನು ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳುತ್ತಿವೆ. ಇದು ರಶ್ಮಿಕಾಗೆ ಖುಷಿ ನೀಡಿದೆ. ಅಲ್ಲದೆ, ಸಾಕಷ್ಟು ಹಣ ಕೂಡ ಅವರಿಗೆ ಸಿಗುತ್ತಿದೆ.

ರಶ್ಮಿಕಾ ಹಾಗೂ ಕಾರ್ತಿಕ್ ಆರ್ಯನ್ ಅವರು ಕ್ರೀಮ್ ಒಂದರ ಪ್ರಮೋಷನ್​ಗೆ ಒಂದಾಗಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇವರ ಜೋಡಿ ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಕಾರಣಕ್ಕೆ ‘ಆಶಿಕಿ 3’ ಸಿನಿಮಾದಲ್ಲಿ ಇವರು ಒಟ್ಟಾಗಿ ನಟಿಸುವಂತೆ ಫ್ಯಾನ್ಸ್ ಕೋರುತ್ತಿದ್ದಾರೆ.

‘ಆಶಿಕಿ 2’ ಸಿನಿಮಾ ಸೂಪರ್ ಹಿಟ್ ಆಯಿತು. ಆದಿತ್ಯ ರಾಯ್​ ಕಪೂರ್ ಹಾಗೂ ಶ್ರದ್ಧಾ ಕಪೂರ್ ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಸ್ಯಾಡ್ ಎಂಡಿಂಗ್ ಇತ್ತು. ಅನೇಕರು ಕ್ಲೈಮ್ಯಾಕ್ಸ್ ಇಷ್ಟಪಟ್ಟಿದ್ದೂ ಇದೆ. ಈ ಎಲ್ಲಾ ಕಾರಣದಿಂದ ಸಿನಿಮಾ ಹಿಟ್ ಆಗಿತ್ತು. ಈಗ ‘ಆಶಿಕಿ 3’ ಸಿನಿಮಾಗೆ ಪ್ಲ್ಯಾನ್ ನಡೆಯುತ್ತಿದೆ ಎನ್ನಲಾಗಿದೆ. ಈ ಕಾರಣಕ್ಕೆ ರಶ್ಮಿಕಾ-ಕಾರ್ತಿಕ್ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದರೆ ಉತ್ತಮ ಎಂಬುದು ಫ್ಯಾನ್ಸ್ ಕೋರಿಕೆ.

ಇದನ್ನೂ ಓದಿ: ಶೂಟಿಂಗ್​ ಮುಗಿಯೋದಕ್ಕೂ ಮುನ್ನವೇ 120 ಕೋಟಿ ರೂಪಾಯಿ ಬಿಸ್ನೆಸ್​ ಮಾಡಿದ ರಶ್ಮಿಕಾ ಹೊಸ ಸಿನಿಮಾ

ಇದನ್ನೂ ಓದಿ

ರಶ್ಮಿಕಾ ಮಂದಣ್ಣ ನಟನೆಯ ‘ಗುಡ್​ಬೈ’ ಚಿತ್ರ ರಿಲೀಸ್​ಗೆ ರೆಡಿ ಇದೆ. ಅಮಿತಾಭ್ ಬಚ್ಚನ್ ಜತೆ ರಶ್ಮಿಕಾ ತೆರೆಹಂಚಿಕೊಂಡಿದ್ದಾರೆ. ಹೋದಲ್ಲಿ ಬಂದಲ್ಲಿ ಈ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ ಅವರು. ಇದಲ್ಲದೆ, ‘ಮಿಷನ್​ ಮಜ್ನು’, ‘ಅನಿಮಲ್​’, ‘ಪುಷ್ಪ 2’, ‘ವಾರಿಸು’ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada