ಅನಾರೋಗ್ಯದಿಂದ ಹೆಚ್ಚಿತು ದೇಹದ ತೂಕ: ಖ್ಯಾತ ನಟಿಗೆ ಬಾಡಿ ಶೇಮಿಂಗ್

ನಟ-ನಟಿಯರು ದೇಹದ ಫಿಟ್​​ನೆಸ್ ಕಾಯ್ದುಕೊಳ್ಳಲು ಹೆಚ್ಚು ಆದ್ಯತೆ ನೀಡುತ್ತಾರೆ. ಆದರೆ, ಕೆಲವೊಮ್ಮೆ ಇದು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದರೆ ತೀವ್ರ ಟೀಕೆ ಎದುರಿಸಬೇಕಾಗುತ್ತದೆ.

ಅನಾರೋಗ್ಯದಿಂದ ಹೆಚ್ಚಿತು ದೇಹದ ತೂಕ: ಖ್ಯಾತ ನಟಿಗೆ ಬಾಡಿ ಶೇಮಿಂಗ್
ಅಪರ್ಣಾ
TV9kannada Web Team

| Edited By: Rajesh Duggumane

Sep 16, 2022 | 8:35 AM

ಸೂರ್ಯ (Suriya) ನಟನೆಯ ‘ಸೂರರೈ ಪೋಟ್ರು’ ಚಿತ್ರ ಗಳಿಸಿದ ಜನಪ್ರಿಯತೆ ತುಂಬಾನೇ ದೊಡ್ಡದು. ಈ ಚಿತ್ರದಲ್ಲಿ ನಟಿಸಿದ ಅನೇಕ ಕಲಾವಿದರ ವೃತ್ತಿ ಬದುಕು ಬದಲಾಗಿದೆ. ನಟಿ ಅಪರ್ಣಾ ಬಾಲಮುರಳಿ (Aparna Balamurali) ಅವರ ವೃತ್ತಿ ಜೀವನದಲ್ಲೂ ಈ ಸಿನಿಮಾ ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಚಿತ್ರದ ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ. ಆದರೆ, ಈಗ ಈ ನಟಿಗೆ ದೇಹದ ತೂಕ ಹೆಚ್ಚುತ್ತಿದೆ. ಕೆಲ ಅನಾರೋಗ್ಯ ಸಮಸ್ಯೆಯಿಂದಾಗಿ ಅವರಿಗೆ ದೇಹದ ತೂಕ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಅವರು ದಪ್ಪ ಆಗುತ್ತಿದ್ದಾರೆ ಎಂಬ ಕಾರಣಕ್ಕೆ ಟೀಕೆಗಳನ್ನು ಎದುರಿಸುವಂತಾಗಿದೆ.

ನಟ-ನಟಿಯರು ದೇಹದ ಫಿಟ್​​ನೆಸ್ ಕಾಯ್ದುಕೊಳ್ಳಲು ಹೆಚ್ಚು ಆದ್ಯತೆ ನೀಡುತ್ತಾರೆ. ಆದರೆ, ಕೆಲವೊಮ್ಮೆ ಇದು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದರೆ ತೀವ್ರ ಟೀಕೆ ಎದುರಿಸಬೇಕಾಗುತ್ತದೆ. ತಮ್ಮದಲ್ಲದ ತಪ್ಪಿಗೆ ಬಾಡಿ ಶೇಮಿಂಗ್​ ಎದುರಿಸಬೇಕಾಗುತ್ತದೆ. ನಟಿ ಅಪರ್ಣಾ ಅವರಿಗೂ ಇದೇ ರೀತಿ ಆಗಿದೆ.

ನಟಿ ಅಪರ್ಣಾ ಅವರು ನಟನೆ ಮೂಲಕ ತಾವು ಯಾರು ಎಂಬುದನ್ನು ಸಾಬೀತುಪಡಿಸಿದ್ದಾರೆ. ‘ಸೂರರೈ ಪೋಟ್ರು’ ಸಿನಿಮಾ ಯಶಸ್ಸಿನ ನಂತರದಲ್ಲಿ ಅವರಿಗೆ ಹಲವು ಆಫರ್​ಗಳು ಬರುತ್ತಿವೆ. ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಈಗ ಅವರು ‘ಆಕಾಶಂ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಶೋಕ್ ಸೆಲ್ವನ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ನಟಿಯ ದೇಹದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಲಾಗುತ್ತಿದೆ. ಇದು ಅವರಿಗೆ ಬೇಸರ ಮೂಡಿಸಿದೆ. ದೇಹದ ಗಾತ್ರಕ್ಕೂ ವ್ಯಕ್ತಿಯಲ್ಲಿರುವ ಟ್ಯಾಲೆಂಟ್​ಗೂ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ಈ ಫೋಟೋದಲ್ಲಿರುವ ಸ್ಟಾರ್ ನಟರು ಯಾರು ಎಂದು ಗುರುತಿಸುತ್ತೀರಾ?

‘ಕೆಲ ದೇಹದ ಸಮಸ್ಯೆಯಿಂದ ನನ್ನ ತೂಕ ಹೆಚ್ಚಿದೆ. ಕೆಲವರು ತಾಯಿ ರೋಲ್ ಮಾಡುವಂತೆ ನನಗೆ ಆಫರ್ ನೀಡಿದರು. ತಾಯಿ ಪಾತ್ರ ಮಾಡುವಷ್ಟು ವಯಸ್ಸು ನನಗೆ ಆಗಿಲ್ಲ ಎಂದು ಹೇಳಿದ್ದೇನೆ. ಅನೇಕರು ನಾನು ಹೇಗಿದ್ದೀನೋ ಹಾಗೆಯೇ ಒಪ್ಪಿಕೊಂಡಿದ್ದಾರೆ. ತೆಳ್ಳಗಿರುವುದು ನಟಿಯಾಗಲು ಇರಬೇಕಾದ ಅರ್ಹತೆಗಳಲ್ಲಿ ಒಂದಲ್ಲ’ ಎಂದು ನೇರ ಮಾತುಗಳಿಂದ ಅಪರ್ಣಾ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada