ಸೂರ್ಯ ಬರ್ತ್ಡೇಗೆ ಸಿಕ್ತು ಅತಿ ದೊಡ್ಡ ಗಿಫ್ಟ್; ಇದನ್ನು ಎಂದಿಗೂ ಅವರು ಮರೆಯೋಕಾಗಲ್ಲ
Happy Birthday Suriya: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಜುಲೈ 22ರಂದು ಪ್ರಕಟ ಮಾಡಲಾಗಿದೆ. ‘ಸೂರರೈ ಪೋಟ್ರು’ ಚಿತ್ರದ ನಟನೆಗೆ ಸೂರ್ಯ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಬರ್ತ್ಡೇ ಹಿಂದಿನ ದಿನ ಈ ಘೋಷಣೆ ಆಗಿರುವುದು ಅವರ ಪಾಲಿಗೆ ಅತಿ ದೊಡ್ಡ ಗಿಫ್ಟ್.

ನಟ ಸೂರ್ಯ (Actor Suriya Birthday) ಅವರು ಇಂದು (ಜುಲೈ 23) 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಬರ್ತ್ಡೇ ವಿಶ್ಗಳು ಬರುತ್ತಿವೆ. ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಸೂರ್ಯ ಅವರ ಫೋಟೋವನ್ನು ಪೋಸ್ಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಸೂರ್ಯ ಅವರು ಕುಟುಂಬದ ಜತೆ ಮಧ್ಯರಾತ್ರಿಯೇ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಮಯದಲ್ಲಿ ಸೂರ್ಯ ಅವರಿಗೆ ಅತಿ ದೊಡ್ಡ ಗಿಫ್ಟ್ ಸಿಕ್ಕಿದೆ. ಇದನ್ನು ಅವರು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ಫ್ಯಾನ್ಸ್ ಪಾಲಿಗಂತೂ ಈ ಉಡುಗೊರೆ ತುಂಬಾನೇ ಅತ್ಯಮೂಲ್ಯವಾದದ್ದು.
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಜುಲೈ 22ರಂದು ಪ್ರಕಟ ಮಾಡಲಾಗಿದೆ. ‘ಸೂರರೈ ಪೋಟ್ರು’ ಚಿತ್ರದ ನಟನೆಗೆ ಸೂರ್ಯ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಬರ್ತ್ಡೇ ಹಿಂದಿನ ದಿನ ಈ ಘೋಷಣೆ ಆಗಿರುವುದು ಅವರ ಪಾಲಿಗೆ ಅತಿ ದೊಡ್ಡ ಗಿಫ್ಟ್. ಇದನ್ನು ಫ್ಯಾನ್ಸ್ ಕೂಡ ಸಂಭ್ರಮಿಸುತ್ತಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿ ಸಾಕಷ್ಟು ಮಂದಿ ಸೂರ್ಯ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ಇನ್ನೊಂದು ಕಾರಣಕ್ಕೆ ಸೂರ್ಯ ಅವರಿಗೆ ಬರ್ತ್ಡೇ ವಿಶೇಷವಾಗಿದೆ. ಅವರ ನಟನೆಯ ‘ವಿಕ್ರಮ್’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಈ ಸಿನಿಮಾದಲ್ಲಿ ಸೂರ್ಯ ಅವರು ರೊಲೆಕ್ಸ್ ಹೆಸರಿನ ಪಾತ್ರ ಮಾಡಿದ್ದಾರೆ. ಇದು ಅತಿಥಿ ಪಾತ್ರ. ಆದರೆ, ಅವರ ಪಾತ್ರ ಬೀರಿರುವ ಪ್ರಭಾವ ತುಂಬಾನೇ ದೊಡ್ಡದು. ‘ವಿಕ್ರಮ್’ ಸಿನಿಮಾದ ಗೆಲುವಿನಲ್ಲಿ ಅವರ ಪಾತ್ರವೂ ದೊಡ್ಡದಿದೆ. ಗೆಲುವಿನೊಂದಿಗೆ ಅವರು ಬರ್ತ್ಡೇ ಆಚರಿಸಿಕೊಳ್ಳುತ್ತಿರುವುದು ವಿಶೇಷ.
ಇದನ್ನೂ ಓದಿ: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ‘ಡೊಳ್ಳು’ ಕನ್ನಡದ ಅತ್ಯುತ್ತಮ ಚಿತ್ರ
ಇತ್ತೀಚಿನ ವರ್ಷಗಳಲ್ಲಿ ಸೂರ್ಯ ಅವರು ಭಿನ್ನ ಕಥಾಹಂದರದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಅವರು ತಮಿಳಿನ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ‘ವಿಕ್ರಮ್’ ಚಿತ್ರದ ಸೀಕ್ವೆಲ್ನಲ್ಲಿ ಸೂರ್ಯ ಅವರು ಪ್ರಮುಖ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಬರ್ತ್ಡೇ ದಿನ ಈ ಬಗ್ಗೆ ಅಪ್ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಬಗ್ಗೆ ಯಾವುದಾದರೂ ಘೋಷಣೆ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದಲ್ಲದೆ, ‘ಸೂರರೈ ಪೋಟ್ರು’ ಚಿತ್ರದ ಹಿಂದಿ ರಿಮೇಕ್ಗೆ ಸೂರ್ಯ ಅವರು ಬಂಡವಾಳ ಹೂಡುತ್ತಿದ್ದಾರೆ. ಅಕ್ಷಯ್ ಕುಮಾರ್ ಈ ಚಿತ್ರಕ್ಕೆ ಹೀರೋ.








