‘ಜವಾನ್’ ಚಿತ್ರದಲ್ಲಿ ಆರು ಸ್ಟಂಟ್ ಮಾಸ್ಟರ್ಸ್​; ಹಾಲಿವುಡ್​ನಿಂದ ಬಂದ ಸಾಹಸ ನಿರ್ದೇಶಕರು

‘ಪಠಾಣ್’ ಸಿನಿಮಾ ಹಿಟ್ ಆದ ಬಳಿಕ ಶಾರುಖ್ ಖಾನ್ ಅವರ ಖ್ಯಾತಿ ಹೆಚ್ಚಿದೆ. ಈ ಚಿತ್ರ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿದೆ. ಇದು ಅವರ ಮುಂದಿನ ಸಿನಿಮಾಗಳ ಮೇಲೆ ಪ್ರಭಾವ ಬೀರಲಿದೆ. ಇತ್ತೀಚೆಗೆ ರಿಲೀಸ್ ಆದ ‘ಜವಾನ್’ ಪ್ರಿವ್ಯೂ ವಿಡಿಯೋ ಗಮನ ಸೆಳೆದಿದೆ.

‘ಜವಾನ್’ ಚಿತ್ರದಲ್ಲಿ ಆರು ಸ್ಟಂಟ್ ಮಾಸ್ಟರ್ಸ್​; ಹಾಲಿವುಡ್​ನಿಂದ ಬಂದ ಸಾಹಸ ನಿರ್ದೇಶಕರು
‘ಜವಾನ್’ ಚಿತ್ರದಲ್ಲಿ ಆರು ಸ್ಟಂಟ್ ಮಾಸ್ಟರ್ಸ್

Updated on: Aug 22, 2023 | 8:58 AM

‘ಜವಾನ್’ ಸಿನಿಮಾ (Jawan Movie) ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರ ಸೆಪ್ಟೆಂಬರ್ 7ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್ ರಿಲೀಸ್​ಗಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಮಧ್ಯೆ ಸಿನಿಮಾ ಬಗ್ಗೆ ಹೊಸ ಹೊಸ ಅಪ್​​ಡೇಟ್​ ಕೇಳಿ ಬರುತ್ತಲೇ ಇದೆ. ಈ ಚಿತ್ರದಲ್ಲಿ ಒಂದಲ್ಲ, ಎರಡಲ್ಲ ಆರು ಸ್ಟಂಟ್ ಮಾಸ್ಟರ್ಸ್ ಕೆಲಸ ಮಾಡಿದ್ದಾರೆ. ಈ ವಿಚಾರ ಕೇಳಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಸಿನಿಮಾದಲ್ಲಿ ಫೈಟ್​ಗಳು ಯಾವ ರೀತಿಯಲ್ಲಿ ಇರಬಹುದು ಎಂದು ಊಹಿಸಿಕೊಳ್ಳುತ್ತಿದ್ದಾರೆ.

‘ಪಠಾಣ್’ ಸಿನಿಮಾ ಹಿಟ್ ಆದ ಬಳಿಕ ಶಾರುಖ್ ಖಾನ್ ಅವರ ಖ್ಯಾತಿ ಹೆಚ್ಚಿದೆ. ಈ ಚಿತ್ರ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿದೆ. ಇದು ಅವರ ಮುಂದಿನ ಸಿನಿಮಾಗಳ ಮೇಲೆ ಪ್ರಭಾವ ಬೀರಲಿದೆ. ಇತ್ತೀಚೆಗೆ ರಿಲೀಸ್ ಆದ ‘ಜವಾನ್’ ಪ್ರಿವ್ಯೂ ವಿಡಿಯೋ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಯಾವ ರೀತಿಯ ಆ್ಯಕ್ಷನ್ ಇರಲಿದೆ ಎಂಬುದರ ಝಲಕ್​ ಅನ್ನು ಈ ವಿಡಿಯೋದಲ್ಲಿ ತೋರಿಸಲಾದೆ. ಈ ಚಿತ್ರಕ್ಕಾಗಿ ಆರು ಸ್ಟಂಟ್ ಮಾಸ್ಟರ್ಸ್ ಕೆಲಸ ಮಾಡಿದ್ದಾರೆ ಎಂಬ ವಿಚಾರ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಸ್ಪಿರೋ, ಯಾನಿಕ್ ಬಾನ್, ಕ್ರೇಗ್ ಮೆಕ್​ರೆ, ಕೀಚಾ ಕಂಪಾಕ್ಡಿ, ಸುನಿಲ್ ರಾಡ್ರಿಗ್ಸ್ ಮತ್ತು ಅನಲ್ ಅರಸು ‘ಜವಾನ್’ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ. ‘ಜವಾನ್’ ಸಿನಿಮಾದಲ್ಲಿ ಹಲವು ಆ್ಯಕ್ಷನ್ ದೃಶ್ಯಗಳಿವೆ. ಭಿನ್ನ ರೀತಿಯ ಫೈಟ್​ಗಳು ಇದರಲ್ಲಿ ಬರಲಿವೆ. ಹೀಗಾಗಿ, ಎಲ್ಲಾ ಸಾಹಸ ನಿರ್ದೇಶಕರು ಒಂದೊಂದು ವಿಭಾಗದಲ್ಲಿ ಪರಿಣಿತಿ ಹೊಂದಿದ್ದಾರೆ. ವಿಶ್ವದ ಹಲವು ಆ್ಯಕ್ಷನ್ ಸಿನಿಮಾಗಳಿಗೆ ಇವರು ಸಾಹಸ ಸಂಯೋಜನೆ ಮಾಡಿದ್ದಾರೆ.

ಸ್ಪಿರೋ ಅವರು ಈ ಮೊದಲು ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’, ‘ಕ್ಯಾಪ್ಟನ್ ಅಮೆರಿಕಾ’ ಮೊದಲಾದ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಶಾರುಖ್ ಖಾನ್ ನಟನೆಯ ‘ರಾ ಒನ್’ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದರು. ಇನ್ನು ಯಾನಿಕ್ ಬಾನ್ ಪಾರ್ಕರ್ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ಪಳಗಿದ್ದಾರೆ. ಸುನಿಲ್ ರಾಡ್ರಿಗ್ಸ್, ಅನಲ್ ಅರಸು ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇವರ ಸಾಹಸ ಸಂಯೋಜನೆ ಮೈ ನವಿರೇಳಿಸಲಿದೆ.

ಇದನ್ನೂ ಓದಿ:ಮೊದಲ ದಿನ ವಿದೇಶದಲ್ಲಿ 50 ಕೋಟಿ ರೂ. ಕಲೆಕ್ಷನ್​ ಮಾಡುತ್ತಾ ‘ಜವಾನ್​’? ಜೋರಾಗಿದೆ ಲೆಕ್ಕಾಚಾರ

‘ಜವಾನ್’ ಚಿತ್ರಕ್ಕೆ ಅಟ್ಲಿ ನಿರ್ದೇಶನ ಇದೆ. ನಯನತಾರಾ, ಶಾರುಖ್ ಖಾನ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ರೆಡ್​ ಚಿಲ್ಲೀಸ್ ಎಂಟರ್​ಟೇನ್​ಮೆಂಟ್ ಮೂಲಕ ಸಿನಿಮಾ ನಿರ್ಮಾಣ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:50 am, Tue, 22 August 23

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us