ವನಟ ಶಾರುಖ್ ಖಾನ್ (Shah Rukh Khan) ಅವರು ದೊಡ್ಡ ಹೆಸರು ಮಾಡಿದ್ದಾರೆ. ಅವರ ಸಿನಿಮಾಗಳು ಸತತವಾಗಿ ಸೋಲು ಕಂಡರೂ ಈಗಲೂ ಪ್ರತಿ ಸಿನಿಮಾಗೆ 100 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಅವರು ಈಗ ಮೂರು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಶಾರುಖ್ ಅವರ ವಯಸ್ಸು ಈಗ 56. ಆದರೆ, ಅವರ ಅಸಲಿ ವಯಸ್ಸಿನ ಬಗ್ಗೆ ಫ್ಯಾನ್ಸ್ಗೆ ಅನುಮಾನ ಮೂಡಿದೆ. ಇದಕ್ಕೆ ಕಾರಣವಾಗಿದ್ದು ಹೊಸ ಜಾಹೀರಾತು.
ಶಾರುಖ್ ಖಾನ್ ಅವರ ನಟನೆಯ ‘ಜೀರೋ’ ಸಿನಿಮಾ ಮಕಾಡೆ ಮಲಗಿತು. ಈ ಚಿತ್ರ ತೆರೆಗೆ ಬಂದಿದ್ದು 2018ರಲ್ಲಿ. ಆ ಬಳಿಕ ಶಾರುಖ್ ಖಾನ್ ಅವರು ನಾಲ್ಕು ವರ್ಷ ಬ್ರೇಕ್ ತೆಗೆದುಕೊಂಡರು. ಈಗ ಒಟ್ಟೊಟ್ಟಿಗೆ ‘ಪಠಾಣ್’, ‘ಡಂಕಿ’ ಹಾಗೂ ‘ಜವಾನ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಹಲವು ಜಾಹೀರಾತುಗಳಲ್ಲಿ ಶಾರುಖ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅವರ ಹೊಸ ಜಾಹೀರಾತು ಪ್ರಸಾರ ಕಂಡಿದ್ದು, ಇದರಲ್ಲಿ ಅವರು ಸಖತ್ ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ.
ಗೋದ್ರೆಜ್ ಶ್ಯಾಂಪೂ ಜಾಹೀರಾತಿನಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಯಾರೂ ಅವರ ವಯಸ್ಸು 55 ದಾಟಿದೆ ಎಂದು ಹೇಳುವುದಿಲ್ಲ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಶಾರುಖ್ ಖಾನ್ ವಯಸ್ಸು 56 ಎಂದು ವಿಕಿಪೀಡಿಯಾದಲ್ಲಿದೆ. ಆದರೆ, ಅವರ ವಯಸ್ಸು ಇನ್ನೂ ಕಡಿಮೆ ಇರಬಹುದು ಎನ್ನುವ ಅನುಮಾನ ನನಗೆ ಮೂಡಿದೆ’ ಎಂದು ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ.
ಶಾರುಖ್ ಖಾನ್ ಈ ವಯಸ್ಸಿನಲ್ಲೂ ಯಂಗ್ ಆಗಿ ಕಾಣಿಸುತ್ತಾರೆ. ಈಗಲೂ ಅವರು 6 ಪ್ಯಾಕ್, 8 ಪ್ಯಾಕ್ ಮೂಲಕ ಮಿಂಚುತ್ತಾರೆ. ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುವ ಅವರು ನಿತ್ಯ ಹಲವು ಗಂಟೆಗಳ ಕಾಲ ಜಿಮ್ನಲ್ಲಿ ಕಳೆಯುತ್ತಾರೆ.
ಇದನ್ನೂ ಓದಿ: ಮುಂಬೈ ಡ್ರಗ್ಸ್ ಪ್ರಕರಣ; ಶಾರುಖ್ ಖಾನ್ ಮಗ ಆರ್ಯನ್ ಖಾನ್ಗೆ ಎನ್ಸಿಬಿಯಿಂದ ಕ್ಲೀನ್ ಚಿಟ್
‘ಪಠಾಣ್’ ಚಿತ್ರಕ್ಕೆ ವಾರ್ ಖ್ಯಾತಿಯ ಸಿದ್ದಾರ್ಥ್ ಆನಂದ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ. ಸಲ್ಮಾನ್ ಖಾನ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಡಂಕಿ’ ಚಿತ್ರಕ್ಕೆ ರಾಜ್ಕುಮಾರ್ ಹಿರಾನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಜವಾನ್’ ಸಿನಿಮಾಗೆ ತಮಿಳಿನ ಅಟ್ಲೀ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಮೂರು ಚಿತ್ರಗಳ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.
Published On - 1:14 pm, Sat, 9 July 22