ವಿಶ್ವಾದ್ಯಂತ 444 ಕೋಟಿ ರೂಪಾಯಿ ಗಳಿಸಿದ ‘ಡಂಕಿ’; ಶಾರುಖ್​ಗೆ ಹ್ಯಾಟ್ರಿಕ್ ಗೆಲುವು

‘ಡಂಕಿ’ ಸಿನಿಮಾ ಕ್ಲಾಸ್​ ಆಗಿ ಮೂಡಿಬಂದಿದೆ. ಹಾಗಾಗಿ ಈ ಸಿನಿಮಾ ಮೊದಲ ದಿನ ದೊಡ್ಡ ಓಪನಿಂಗ್​ ಪಡೆದುಕೊಳ್ಳಲಿಲ್ಲ. ‘ಪಠಾಣ್​’ ಮತ್ತು ‘ಜವಾನ್​’ ಸಿನಿಮಾಗಳ ರೀತಿ ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಕೂಡ ಮಾಡಲಿಲ್ಲ. ಆದರೂ ವಿಶ್ವಾದ್ಯಂತ 444 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿದೆ.

ವಿಶ್ವಾದ್ಯಂತ 444 ಕೋಟಿ ರೂಪಾಯಿ ಗಳಿಸಿದ ‘ಡಂಕಿ’; ಶಾರುಖ್​ಗೆ ಹ್ಯಾಟ್ರಿಕ್ ಗೆಲುವು
ಶಾರುಖ್​ ಖಾನ್​

Updated on: Jan 09, 2024 | 10:57 AM

2023ರಲ್ಲಿ ಶಾರುಖ್​ ಖಾನ್​ (Shah Rukh Khan) ಅವರು ‘ಪಠಾಣ್​’ ಮತ್ತು ‘ಜವಾನ್​’ ಸಿನಿಮಾ ಮೂಲಕ ಭರ್ಜರಿ ಗೆಲುವು ಕಂಡಿದ್ದರು. ಆದರೆ ಮೂರನೇ ಸಿನಿಮಾ ‘ಡಂಕಿ’ ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್​ ಮಾಡಲಿಲ್ಲ. ಹಾಗಂತ ಈ ಸಿನಿಮಾ ಸೋತಿಲ್ಲ. 19 ದಿನಗಳ ಕಾಲ ಪ್ರದರ್ಶನ ಕಂಡಿರುವ ಡಂಕಿ’ ಸಿನಿಮಾ (Dunki Movie) ವಿಶ್ವಾದ್ಯಂತ ಉತ್ತಮವಾಗಿ ಗಳಿಕೆ ಮಾಡಿದೆ. ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾದ ಕಲೆಕ್ಷನ್​ (Dunki Box Office Collection) 444 ಕೋಟಿ ರೂಪಾಯಿ ಆಗಿದೆ. ಈ ಮಾಹಿತಿಯನ್ನು ಸ್ವತಃ ‘ಡಂಕಿ’ ಚಿತ್ರತಂಡವೇ ಹಂಚಿಕೊಂಡಿದೆ. ಈ ಗೆಲುವಿನ ಮೂಲಕ ಶಾರುಖ್​ ಖಾನ್​ ಅವರಿಗೆ 2023ರಲ್ಲಿ ಹ್ಯಾಟ್ರಿಕ್​ ಯಶಸ್ಸು ಸಿಕ್ಕಂತೆ ಆಗಿದೆ.

‘ಡಂಕಿ’ ಸಿನಿಮಾ ಕ್ಲಾಸ್​ ಆಗಿ ಮೂಡಿಬಂದಿದೆ. ಹಾಗಾಗಿ ಈ ಸಿನಿಮಾ ಮೊದಲ ದಿನ ದೊಡ್ಡ ಓಪನಿಂಗ್​ ಪಡೆದುಕೊಳ್ಳಲಿಲ್ಲ. ‘ಪಠಾಣ್​’ ಮತ್ತು ‘ಜವಾನ್​’ ಸಿನಿಮಾಗಳ ರೀತಿ ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಕೂಡ ಮಾಡಲಿಲ್ಲ. ಆದರೆ ಹಾಕಿದ ಬಂಡವಾಳಕ್ಕೆ ಮೋಸ ಆಗಿಲ್ಲ. ವಿಶ್ವಾದ್ಯಂತ ಬಿಡುಗಡೆ ಆದ ಈ ಸಿನಿಮಾ 444 ಕೋಟಿ ರೂಪಾಯಿ ಗಳಿಸುವಲ್ಲಿ ಸಫಲವಾಗಿದೆ.

ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಕಳ್ಳದಾರಿಯ ಮೂಲಕ ವಿದೇಶಕ್ಕೆ ಪ್ರಯಾಣ ಮಾಡುವ ಯುವಕರ ಕಥೆಯನ್ನು ‘ಡಂಕಿ’ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾಗೆ ರಾಜ್​ಕುಮಾರ್​ ಹಿರಾನಿ ಅವರು ನಿರ್ದೇಶನ ಮಾಡಿದ್ದಾರೆ. ಶಾರುಖ್​ ಖಾನ್​, ಬೊಮನ್​ ಇರಾನಿ, ವಿಕ್ಕಿ ಕೌಶಲ್​, ತಾಪ್ಸಿ ಪನ್ನು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ವಿಮರ್ಶಕರಿಂದ ಈ ಚಿತ್ರ ಮೆಚ್ಚುಗೆ ಪಡೆದಿದೆ.

ಇದನ್ನೂ ಓದಿ: ‘ವಯಸ್ಸಿಗೆ ತಕ್ಕ ಪಾತ್ರ ಮಾಡ್ತೀನಿ’: ಮುಂದಿನ ಪ್ಲ್ಯಾನ್​ ತಿಳಿಸಿದ ಶಾರುಖ್ ಖಾನ್​

ಶಾರುಖ್​ ಖಾನ್​ ಅವರ ಮೂರು ಸಿನಿಮಾಗಳು 2023ರಲ್ಲಿ ಬಂಗಾರದ ಬೆಳೆ ತೆಗೆದಿವೆ. 2024ರಲ್ಲಿ ಅವರ ಸಿನಿಮಾಗಳ ಸಂಖ್ಯೆ ಕಡಿಮೆ ಆಗಬಹುದು. ಯಾಕೆಂದರೆ, ಇನ್ನೂ ಅವರು ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಸ್ಕ್ರಿಪ್ಟ್​ ಆಯ್ಕೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ. ವಯಸ್ಸಿಗೆ ತಕ್ಕ ಪಾತ್ರ ಮಾಡುವುದಾಗಿ ಅವರು ಇತ್ತೀಚಿನ ಸಂದರ್ಶನದಲ್ಲಿ ಸುಳಿವು ನೀಡಿದ್ದರು. ಹಾಗಾಗಿ ಅವರ ಮುಂದಿನ ಪ್ರಾಜೆಕ್ಟ್​ ಬಗ್ಗೆ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us