ಜೋರಾಯ್ತು ‘ಜವಾನ್​’ ಚಿತ್ರದ ಹವಾ; ಕೆಲವೇ ನಿಮಿಷಗಳಲ್ಲಿ ಮಿಲಿಯನ್​ ದಾಟಿದ ‘ಜಿಂದಾ ಬಂದಾ’ ಹಾಡಿನ ವೀಕ್ಷಣೆ

Jawan Movie Song: ‘ಜವಾನ್​’ ಚಿತ್ರಕ್ಕೆ ಅನಿರುದ್ಧ್​ ರವಿಚಂದರ್​ ಸಂಗೀತ ನೀಡಿದ್ದಾರೆ. ಬಹಳ ಮಾಸ್​ ಆಗಿ ‘ಜಿಂದಾ ಬಂದಾ’ ಹಾಡು ಮೂಡಿಬಂದಿದೆ. ಅದ್ದೂರಿಯಾಗಿ ಇದನ್ನು ಶೂಟ್​ ಮಾಡಲಾಗಿದೆ.

ಜೋರಾಯ್ತು ‘ಜವಾನ್​’ ಚಿತ್ರದ ಹವಾ; ಕೆಲವೇ ನಿಮಿಷಗಳಲ್ಲಿ ಮಿಲಿಯನ್​ ದಾಟಿದ ‘ಜಿಂದಾ ಬಂದಾ’ ಹಾಡಿನ ವೀಕ್ಷಣೆ
ಶಾರುಖ್​ ಖಾನ್​

Updated on: Jul 31, 2023 | 4:17 PM

ಸೆಪ್ಟೆಂಬರ್​ 7ರಂದು ‘ಜವಾನ್​’ ಸಿನಿಮಾ (Jawan Movie) ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡಿ ಎಂಜಾಯ್​ ಮಾಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಶಾರುಖ್​ ಖಾನ್​ (Shah Rukh Khan) ಅವರು ‘ಜವಾನ್​’ ಮೂಲಕ ಭರ್ಜರಿ ಯಶಸ್ಸು ಕಾಣುವ ಸಾಧ್ಯತೆ ದಿನದಿನಕ್ಕೂ ದಟ್ಟವಾಗುತ್ತಿದೆ. ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ಪ್ರಿವ್ಯೂ ವಿಡಿಯೋ ವೈರಲ್​ ಆಗಿತ್ತು. ಈಗ ಈ ಸಿನಿಮಾದ ಮೊದಲ ಸಾಂಗ್​ ಬಿಡುಗಡೆ ಆಗಿದೆ. ‘ಜಿಂದಾ ಬಂದಾ..’ (Zinda Banda) ಎಂಬ ಈ ಹಾಡಿನಲ್ಲಿ ಶಾರುಖ್​ ಖಾನ್​ ಅವರು ಬಿಂದಾಸ್​ ಆಗಿ ಸ್ಟೆಪ್ಸ್​ ಹಾಕಿದ್ದಾರೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಸಾಂಗ್​ ಸೂಪರ್​ ಹಿಟ್​ ಆಗಿದೆ.

ಶಾರುಖ್​ ಖಾನ್​ ಅವರ ಸಿನಿಮಾಗಳಲ್ಲಿ ಹಾಡಿಗೆ ಬಹಳ ಮಹತ್ವ ನೀಡಲಾಗುತ್ತದೆ. ಅದು ‘ಜವಾನ್​’ ಸಿನಿಮಾದಲ್ಲೂ ಮುಂದುವರಿದಿದೆ. ಈ ಚಿತ್ರಕ್ಕೆ ಅನಿರುದ್ಧ್​ ರವಿಚಂದರ್​ ಅವರು ಸಂಗೀತ ನೀಡಿದ್ದಾರೆ. ಬಹಳ ಮಾಸ್​ ಆಗಿ ‘ಜಿಂದಾ ಬಂದಾ’ ಹಾಡು ಮೂಡಿಬಂದಿದೆ. ತುಂಬ ಅದ್ದೂರಿಯಾಗಿ ಇದನ್ನು ಶೂಟ್​ ಮಾಡಲಾಗಿದೆ. ಮೂಲಗಳ ಪ್ರಕಾರ ಬರೋಬ್ಬರಿ 15 ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಶಾರುಖ್​ ಖಾನ್​ ಜೊತೆ ಸಾವಿರಾರು ಹುಡುಗಿಯರು ಡ್ಯಾನ್ಸ್​ ಮಾಡಿರುವುದು ಈ ಹಾಡಿನ ವಿಶೇಷ. ರಿಲೀಸ್​ ಆಗಿ ಕೆಲವೇ ನಿಮಿಷಗಳು ಕಳೆಯುವುದರಲ್ಲಿ ಈ ಹಾಡು 20 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ಒಂದಷ್ಟು ವರ್ಷಗಳ ಕಾಲ ಶಾರುಖ್​ ಖಾನ್​ ಅವರು ಬ್ಯಾಕ್​ ಟು ಬ್ಯಾಕ್​ ಸೋಲು ಕಾಣುತ್ತಿದ್ದರು. ಆದರೆ ಈ ವರ್ಷ ಆರಂಭದಲ್ಲಿ ‘ಪಠಾಣ್​’ ಸಿನಿಮಾದ ಮೂಲಕ ಅವರು ಗ್ರ್ಯಾಂಡ್​ ಆಗಿ ಕಮ್​ಬ್ಯಾಕ್​ ಮಾಡಿ ಗೆಲುವು ಕಂಡರು. ಅದೇ ರೀತಿ ‘ಜವಾನ್​’ ಸಿನಿಮಾ ಕೂಡ ಸೂಪರ್​ ಹಿಟ್​ ಆಗುತ್ತದೆ ಎಂಬ ನಿರೀಕ್ಷೆ ಇದೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: Jawan Movie: ‘ಜವಾನ್​’ ಚಿತ್ರದಲ್ಲಿ ದಳಪತಿ ವಿಜಯ್​ ನಟಿಸಿದ್ದಕ್ಕೆ ಸಿಕ್ತು ಬಲವಾದ ಸಾಕ್ಷಿ; ಸ್ಟಾರ್​ ನಟನ ಸಂಭಾವನೆ ಎಷ್ಟು?

‘ಜವಾನ್​’ ಸಿನಿಮಾದಲ್ಲಿ ಶಾರುಖ್​ ಖಾನ್​ ಅವರಿಗೆ ಬೇರೆ ಬೇರೆ ಗೆಟಪ್​ ಇದೆ. ಪ್ರಿವ್ಯೂ ವಿಡಿಯೋದಲ್ಲಿ ಅದು ರಿವೀಲ್​ ಆಗಿದೆ. ಅವರ ಬೋಳುತಲೆ ಗೆಟಪ್​ ಸಖತ್​ ವೈರಲ್​ ಆಗಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ, ಸಾನ್ಯಾ ಮಲ್ಹೋತ್ರಾ ಮುಂತಾದವರು ನಟಿಸಿದ್ದಾರೆ. ಶಾರುಖ್​ ಖಾನ್​ ಅವರ ಪತ್ನಿ ಗೌರಿ ಖಾನ್​ ನಿರ್ಮಾಣ ಮಾಡಿದ್ದಾರೆ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:16 pm, Mon, 31 July 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us