
ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ (Jawan Movie) ಸೋಮವಾರದ (ಸೆಪ್ಟೆಂಬರ್ 11) ಪರೀಕ್ಷೆಯಲ್ಲಿ ಪಾಸ್ ಆಗಿದೆ. ಈ ಚಿತ್ರ ವಾರದ ಮೊದಲ ದಿನ 30 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಅಬ್ಬರ ಮುಂದುವರಿದಿದೆ. ಮುಂದಿನ ವಾರ ಗಣೇಶ ಚತುರ್ಥಿ ಪ್ರಯಕ್ತ ಸಾಲು ಸಾಲು ರಜೆಗಳು ಬರುತ್ತಿವೆ. ಇದು ಚಿತ್ರತಂಡಕ್ಕೆ ಸಹಕಾರಿ ಆಗಲಿದೆ. ಈ ಚಿತ್ರ ಅನಾಯಾಸವಾಗಿ 500 ಕೋಟಿ ಕ್ಲಬ್ ಸೇರಲಿದೆ. ಈ ಚಿತ್ರದ ಮೂಲಕ ಶಾರುಖ್ ಖಾನ್ (Shah Rukh Khan) ಅವರು ಮತ್ತೊಂದು ಗೆಲುವು ಕಂಡಿದ್ದಾರೆ.
ಹೈ ಬಜೆಟ್ ಸಿನಿಮಾಗಳು ಬಿಡುಗಡೆ ಆದ ದಿನ, ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತವೆ. ಆದರೆ, ಸೋಮವಾರ ಚಿತ್ರ ಎಷ್ಟು ಗಳಿಕೆ ಮಾಡಿತು ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ‘ಜವಾನ್’ ಸಿನಿಮಾ ವಾರದ ಮೊದಲ ದಿನವಾದ ಸೋಮವಾರ 30 ಕೋಟಿ ರೂಪಾಯಿ ಬಾಚಿಕೊಂಡು ನಿರ್ಮಾಪಕರ ಮೊಗದಲ್ಲಿ ನಗು ಮೂಡಿಸಿದೆ. ಈ ಸಿನಿಮಾ ಸೋಮವಾರ ಹಿಂದಿ, ತಮಿಳು ಹಾಗೂ ತೆಲುಗು ವರ್ಷನ್ನಿಂದ 30 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 316 ಕೋಟಿ ರೂಪಾಯಿ ಆಗಿದೆ.
ಗುರುವಾರ (ಸೆಪ್ಟೆಂಬರ್ 7): 75 ಕೋಟಿ ರೂಪಾಯಿ. (ಹಿಂದಿ 65 ಕೋಟಿ ರೂಪಾಯಿ. ತಮಿಳು-ತೆಲುಗು 10 ಕೋಟಿ ರೂಪಾಯಿ)
ಶುಕ್ರವಾರ (ಸೆಪ್ಟೆಂಬರ್ 8): 53.23ಕೋಟಿ ರೂಪಾಯಿ. (ಹಿಂದಿ 46.23 ಕೋಟಿ ರೂಪಾಯಿ. ತಮಿಳು-ತೆಲುಗು 7 ಕೋಟಿ ರೂಪಾಯಿ)
ಶನಿವಾರ (ಸೆಪ್ಟೆಂಬರ್ 9): 77.83 ಕೋಟಿ ರೂಪಾಯಿ. (ಹಿಂದಿ 68.72 ಕೋಟಿ ರೂಪಾಯಿ. ತಮಿಳು-ತೆಲುಗು 9.11 ಕೋಟಿ ರೂಪಾಯಿ)
ಇದನ್ನೂ ಓದಿ: ಅಂಡರ್ವಲ್ಡ್ ಮುಂದೆ ಮಂಡಿಯೂರದ ಏಕೈಕ ಬಾಲಿವುಡ್ ಸ್ಟಾರ್ ಶಾರುಖ್ ಖಾನ್
ಭಾನುವಾರ (ಸೆಪ್ಟೆಂಬರ್ 10): 80.1 ಕೋಟಿ ರೂಪಾಯಿ. (ಹಿಂದಿ 71.63 ಕೋಟಿ ರೂಪಾಯಿ. ತಮಿಳು-ತೆಲುಗು 8.47 ಕೋಟಿ ರೂಪಾಯಿ)
ಸೋಮವಾರ (ಸೆಪ್ಟೆಂಬರ್ 11): 30 ಕೋಟಿ ರೂಪಾಯಿ. ಒಟ್ಟೂ ಕಲೆಕ್ಷನ್ 316 ಕೋಟಿ ರೂಪಾಯಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ