ಮೊದಲ ದಿನ ವಿದೇಶದಲ್ಲಿ 50 ಕೋಟಿ ರೂ. ಕಲೆಕ್ಷನ್​ ಮಾಡುತ್ತಾ ‘ಜವಾನ್​’? ಜೋರಾಗಿದೆ ಲೆಕ್ಕಾಚಾರ

ಶಾರುಖ್​ ಖಾನ್​ ನಟನೆಯ ಬಹುನಿರೀಕ್ಷಿತ ‘ಜವಾನ್​’ ಸಿನಿಮಾ ಬಿಡುಗಡೆ ಆಗಲು ಇನ್ನೂ ಒಂದಷ್ಟು ದಿನ ಬಾಕಿ ಇದೆ. ಈಗಾಗಲೇ ವಿದೇಶದಲ್ಲಿ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಆರಂಭ ಆಗಿದೆ. ಮೂಲಗಳ ಪ್ರಕಾರ ಅಮೆರಿಕದಲ್ಲಿ ಸಾವಿರಾರು ಟಿಕೆಟ್​ಗಳು ಸೋಲ್ಡ್​ ​ಔಟ್​ ಆಗಿವೆ. ಸೆಪ್ಟೆಂಬರ್​ 7ರ ವೇಳೆಗೆ ದೊಡ್ಡ ಬಿಸ್ನೆಸ್​ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ಮೊದಲ ದಿನ ವಿದೇಶದಲ್ಲಿ 50 ಕೋಟಿ ರೂ. ಕಲೆಕ್ಷನ್​ ಮಾಡುತ್ತಾ ‘ಜವಾನ್​’? ಜೋರಾಗಿದೆ ಲೆಕ್ಕಾಚಾರ
ಶಾರುಖ್​ ಖಾನ್​

Updated on: Aug 18, 2023 | 3:37 PM

ಬಾಲಿವುಡ್​ ಬಾದ್​ಷಾ ಶಾರುಖ್ ಖಾನ್​​ (Shah Rukh Khan) ಅವರು ‘ಜವಾನ್​’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸುವ ಸಾಧ್ಯತೆ ಇದೆ. ಈ ಹಿಂದಿನ ಎಲ್ಲ ದಾಖಲೆಗಳು ಉಡೀಸ್​ ಆಗಲಿವೆ ಎಂದು ಅಂದಾಜಿಸಲಾಗುತ್ತಿದೆ. ಈ ವರ್ಷ ಆರಂಭದಲ್ಲಿ ಬಿಡುಗಡೆ ಆಗಿದ್ದ ‘ಪಠಾಣ್​’ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆ ಚಿತ್ರಕ್ಕಿಂತಲೂ ಹೆಚ್ಚಿನ ಕಮಾಯಿಯನ್ನು ‘ಜವಾನ್​’ ಸಿನಿಮಾ (Jawan Movie) ಮಾಡಬಹುದು ಎಂದು ಬಾಕ್ಸ್ ಆಫೀಸ್​ ಪಂಡಿತರು ಊಹಿಸುತ್ತಿದ್ದಾರೆ. ವಿದೇಶದಲ್ಲಿ ಮೊದಲ ದಿನ ಈ ಚಿತ್ರಕ್ಕೆ ಬರೋಬ್ಬರಿ 50 ಕೋಟಿ ರೂಪಾಯಿ ಕಲೆಕ್ಷನ್​ (Box Office Collection) ಆಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಶಾರುಖ್​ ಖಾನ್​ ಅವರ ಅಭಿಮಾನಿಗಳ ಈ ಸಿನಿಮಾಗಾಗಿ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

‘ಜವಾನ್​’ ಸಿನಿಮಾದ ಮೇಲೆ ಇಷ್ಟೆಲ್ಲ ಹೈಪ್​ ಕ್ರಿಯೇಟ್​ ಆಗಲು ಅನೇಕ ಕಾರಣಗಳಿವೆ. ಸ್ಟಾರ್​ ಕಲಾವಿದರ ದಂಡು, ಪ್ರತಿಭಾವಂತ ತಂತ್ರಜ್ಞರ ಸಮಾಗಮ, ಅದ್ದೂರಿ ಮೇಕಿಂಗ್​ ಸೇರಿದಂತೆ ಹಲವು ಅಂಶಗಳಿಂದಾಗಿ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಅಟ್ಲಿ ಮತ್ತು ಶಾರುಖ್​ ಖಾನ್​ ಅವರು ಜಂಟಿಯಾಗಿ ಕೆಲಸ ಮಾಡಿರುವುದರಿಂದ ಅಭಿಮಾನಿಗಳ ಕಾತರ ಹೆಚ್ಚಾಗಿದೆ. ಇನ್ನೂ ಅನೇಕ ಸರ್ಪ್ರೈಸ್​ಗಳು ಈ ಚಿತ್ರದಲ್ಲಿ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಜವಾನ್​’ ಚಿತ್ರಕ್ಕಾಗಿ ತಮ್ಮದೇ ಹಳೇ ನಿಯಮ ಮುರಿದುಕೊಂಡ್ರಾ ನಯನತಾರಾ?

‘ಪಠಾಣ್​’ ಸಿನಿಮಾ ಮೊದಲ ದಿನ ವಿಶ್ವಾದ್ಯಂತ 37 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಆ ಮೂಲಕ ವಿದೇಶಿ ಬಾಕ್ಸ್​ ಆಫೀಸ್​ನಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ಆ ಚಿತ್ರ ಒಳಗಾಗಿತ್ತು. ಒಂದು ವೇಳೆ ‘ಜವಾನ್’ ಸಿನಿಮಾ 50 ಕೋಟಿ ರೂಪಾಯಿ ಗಳಿಸಿದರೆ ‘ಪಠಾಣ್​’ ಚಿತ್ರದ ದಾಖಲೆಯನ್ನು ಮುರಿದಂತಾಗುತ್ತದೆ. ಸೆಪ್ಟೆಂಬರ್​ 7ರಂದು ‘ಜವಾನ್’ ಬಿಡುಗಡೆ ಆಗಲಿದೆ. ಅಂದು ಶಾರುಖ್​ ಖಾನ್​ ಅಭಿಮಾನಿಗಳ ಪಾಲಿಗೆ ಹಬ್ಬದ ವಾತಾವರಣ ನಿರ್ಮಾಣ ಆಗಲಿದೆ.

ಇದನ್ನೂ ಓದಿ: ‘ಜವಾನ್​’ ತಂಡದವರ ವಿರುದ್ಧವೇ ಕೇಸ್ ಹಾಕಿದ ಶಾರುಖ್ ಖಾನ್; ಏನು ಕಾರಣ?

‘ಜವಾನ್​’ ಬಿಡುಗಡೆ ಆಗಲು ಇನ್ನೂ ಒಂದಷ್ಟು ದಿನ ಬಾಕಿ ಇದೆ. ಈಗಾಗಲೇ ವಿದೇಶದಲ್ಲಿ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಆರಂಭ ಆಗಿದೆ. ಮೂಲಗಳ ಪ್ರಕಾರ ಅಮೆರಿಕದಲ್ಲಿ ಸಾವಿರಾರು ಟಿಕೆಟ್​ಗಳು ಸೋಲ್ಡ್ಔಟ್​ ಆಗಿವೆ. 61 ಲಕ್ಷ ರೂಪಾಯಿ ಮೌಲ್ಯದ ಟಿಕೆಟ್​ಗಳು ಮಾರಾಟ ಆಗಿವೆ. ದಿನದಿಂದ ದಿನಕ್ಕೆ ಕ್ರೇಜ್​ ಹೆಚ್ಚಾಗುತ್ತಿದ್ದು ಸೆಪ್ಟೆಂಬರ್​ 7ರ ವೇಳೆಗೆ ದೊಡ್ಡ ಬಿಸ್ನೆಸ್​ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ದೀಪಿಕಾ ಪಡುಕೋಣೆ, ನಯನತಾರಾ, ಸಾನ್ಯಾ ಮಲ್ಹೋತ್ರಾ, ವಿಜಯ್​ ಸೇತುಪತಿ ಮುಂತಾದವರು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us