Shehzada: 2022ರಲ್ಲಿ ಗೆದಿದ್ದ ಕಾರ್ತಿಕ್​ ಆರ್ಯನ್​ಗೆ ಈ ವರ್ಷ ಆರಂಭದಲ್ಲೇ ಆಘಾತ? ಕಷ್ಟದಲ್ಲಿ ‘ಶೆಹಜಾದಾ’ ಭವಿಷ್ಯ

Shehzada Movie Box Office Collection: ಟ್ರೇಡ್​ ವಿಶ್ಲೇಷಕರ ಅಂದಾಜಿನ ಪ್ರಕಾರ ‘ಶೆಹಜಾದಾ’ ಸಿನಿಮಾ ಮೊದಲ ದಿನ ಕೇವಲ 6ರಿಂದ 7 ಕೋಟಿ ರೂಪಾಯಿ ಕಮಾಯಿ ಮಾಡಲಿದೆ. ಇದು ಒಬ್ಬ ಸ್ಟಾರ್​ ನಟನ ಚಿತ್ರಕ್ಕೆ ತೀರಾ ಕಳಪೆ ಕಲೆಕ್ಷನ್​.

Shehzada: 2022ರಲ್ಲಿ ಗೆದಿದ್ದ ಕಾರ್ತಿಕ್​ ಆರ್ಯನ್​ಗೆ ಈ ವರ್ಷ ಆರಂಭದಲ್ಲೇ ಆಘಾತ? ಕಷ್ಟದಲ್ಲಿ ‘ಶೆಹಜಾದಾ’ ಭವಿಷ್ಯ
ಕಾರ್ತಿಕ್ ಆರ್ಯನ್

Updated on: Feb 17, 2023 | 10:09 PM

ನಟ ಕಾರ್ತಿಕ್​ ಆರ್ಯನ್ (Kartik Aaryan)​ ಅವರು ಬಾಲಿವುಡ್​ನಲ್ಲಿ ಭರವಸೆಯ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಏಳು-ಬೀಳು ಕಂಡಿರುವ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. 2022ರಲ್ಲಿ ದೊಡ್ಡ ದೊಡ್ಡ ಸ್ಟಾರ್​ ನಟರ ಸಿನಿಮಾಗಳು ನೆಲ ಕಚ್ಚಿದ್ದವು. ಆದರೆ ಕಾರ್ತಿಕ್​ ಆರ್ಯನ್​ ಅಭಿನಯದ ‘ಭೂಲ್​ ಭುಲಯ್ಯ 2’ (Bhool Bhulaiyaa 2) ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಭಾರತದ ಬಾಕ್ಸ್​ ಆಫೀಸ್​ನಲ್ಲಿ ಆ ಚಿತ್ರ ಬರೋಬ್ಬರಿ 185 ಕೋಟಿ ರೂಪಾಯಿ ಗಳಿಸಿತ್ತು. ಅಷ್ಟು ದೊಡ್ಡ ಗೆಲುವು ಪಡೆದು ಬೀಗಿದ್ದ ಕಾರ್ತಿಕ್​ ಆರ್ಯನ್​ ಅವರು ಈಗ ‘ಶೆಹಜಾದಾ’ (Shehzada Movie) ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಆದರೆ ಈ ಚಿತ್ರಕ್ಕೆ ನೀರಸ ಓಪನಿಂಗ್​ ಸಿಕ್ಕಿದೆ.

‘ಶೆಹಜಾದಾ’ ಸಿನಿಮಾದಲ್ಲಿ ಕಾರ್ತಿಕ್​ ಆರ್ಯನ್​ ಮತ್ತು ಕೃತಿ ಸನೋನ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಫೆಬ್ರವರಿ 10ರಂದು ಬಿಡುಗಡೆ ಆಗಬೇಕಿತ್ತು. ಆದರೆ ‘ಪಠಾಣ್​’ ಚಿತ್ರದ ಅಬ್ಬರ ಜೋರಾಗಿ ಇದ್ದಿದ್ದರಿಂದ ‘ಶೆಹಜಾದಾ’ ರಿಲೀಸ್​ ದಿನಾಂಕ ಮುಂದೂಡಿಕೆ ಆಯಿತು. ಅಂತೂ ಫೆಬ್ರವರಿ 17ರಂದು ಈ ಸಿನಿಮಾ ರಿಲೀಸ್​ ಆಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡುವುದು ಕಷ್ಟ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಸಡನ್ನಾಗಿ ಮಾಜಿ ಲವರ್ ಸಿಕ್ಕರೆ? ಸಾರಾ ಅಲಿ ಖಾನ್​ ಕಂಡು ಕಾರ್ತಿಕ್​ ಆರ್ಯನ್​ ಏನ್​ ಮಾಡಿದ್ರು ನೋಡಿ..

ಇದನ್ನೂ ಓದಿ
ಬಾಲಿವುಡ್​ನವರೂ ಕೆಟ್ಟ ಸಿನಿಮಾ ಮಾಡ್ತಾರೆ, ನಾವ್ಯಾಕೆ ಅವರಿಗೆ ರೇಂಜ್​ ಕೊಡಬೇಕು? ಸುದೀಪ್ ನೇರ ಪ್ರಶ್ನೆ
ಬಾಲಿವುಡ್​ಗಿತ್ತು ಅಂಡರ್​​ವರ್ಲ್ಡ್​​ ಸಂಪರ್ಕ; ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ
ಬಾಲಿವುಡ್​ vs ಸೌತ್ ಎಂದರೆ ನನಗೆ ಸಿಟ್ಟೇ ಬರುತ್ತದೆ; ಅಕ್ಷಯ್ ಕುಮಾರ್ ನೇರ ನುಡಿ
ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

ಟ್ರೇಡ್​ ವಿಶ್ಲೇಷಕರ ಅಂದಾಜಿನ ಪ್ರಕಾರ ‘ಶೆಹಜಾದಾ’ ಸಿನಿಮಾ ಮೊದಲ ದಿನ ಕೇವಲ 6ರಿಂದ 7 ಕೋಟಿ ರೂಪಾಯಿ ಕಮಾಯಿ ಮಾಡಲಿದೆ. ಇದು ಒಬ್ಬ ಸ್ಟಾರ್​ ನಟನ ಚಿತ್ರಕ್ಕೆ ತೀರಾ ಕಳಪೆ ಕಲೆಕ್ಷನ್​. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸದೇ ಇದ್ದರೆ ಚಿತ್ರದ ಭವಿಷ್ಯ ಕಷ್ಟ ಆಗಲಿದೆ. ಇನ್ನೂ ಕೆಲವು ಕಡೆಗಳಲ್ಲಿ ‘ಪಠಾಣ್​’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಹಾಲಿವುಡ್​ ಚಿತ್ರಗಳು ರಿಲೀಸ್​ ಆಗಿ ಪೈಪೋಟಿ ನೀಡುತ್ತಿವೆ. ಇದರಿಂದ ‘ಶೆಹಜಾದಾ’ ಚಿತ್ರಕ್ಕೆ ಹಿನ್ನಡೆ ಆಗಿದೆ.

ಇದನ್ನೂ ಓದಿ: 175 ಕೋಟಿ ರೂ. ಗಳಿಕೆ​ ಮಾಡಿದ್ರೂ ಕಿಂಚಿತ್ತೂ ಗರ್ವ ಇಲ್ಲದೆ ಬೀದಿ ಮಕ್ಕಳ ಜತೆ ಮಾತಾಡಿದ ಕಾರ್ತಿಕ್​ ಆರ್ಯನ್​

‘ಶೆಹಜಾದಾ’ ಸಿನಿಮಾದ ಕಲೆಕ್ಷನ್​ ಕಡಿಮೆ ಆಗಲು ಇನ್ನೊಂದು ಪ್ರಮುಖ ಕಾರಣ ಇದೆ. ಇದು ತೆಲುಗಿನ ‘ಅಲಾ ವೈಕುಂಠಪುರಮುಲೋ’ ಸಿನಿಮಾದ ಹಿಂದಿ ರಿಮೇಕ್​. ಈಗಾಗಲೇ ಜನರು ತೆಲುಗಿನ ಸಿನಿಮಾವನ್ನು ನೋಡಿ ಎಂಜಾಯ್​ ಮಾಡಿದ್ದಾರೆ. ಅಲ್ಲು ಅರ್ಜುನ್​ ನಟನೆಯ ಆ ಸಿನಿಮಾ ಒಟಿಟಿಯಲ್ಲಿ ಲಭ್ಯವಿರುವುದರಿಂದ ಬಹುತೇಕರಿಗೆ ಕಥೆ ಏನೆಂಬುದು ತಿಳಿದಿದೆ. ಹಾಗಾಗಿ ಮತ್ತೆ ಚಿತ್ರಮಂದಿರಕ್ಕೆ ಬಂದು ರಿಮೇಕ್​ ನೋಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದು ಕಾರ್ತಿಕ್​ ಆರ್ಯನ್​ ನಟನೆಯ ಮೊದಲ ಸಾಹಸಪ್ರಧಾನ ಸಿನಿಮಾ. ಆದರೂ ಪ್ರೇಕ್ಷಕರು ಈ ಚಿತ್ರದ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:09 pm, Fri, 17 February 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us