ಸಡನ್ನಾಗಿ ಮಾಜಿ ಲವರ್ ಸಿಕ್ಕರೆ? ಸಾರಾ ಅಲಿ ಖಾನ್ ಕಂಡು ಕಾರ್ತಿಕ್ ಆರ್ಯನ್ ಏನ್ ಮಾಡಿದ್ರು ನೋಡಿ..
Sara Ali Khan | Kartik Aaryan: ಸಾರಾ ಅಲಿ ಖಾನ್ ಮತ್ತು ಕಾರ್ತಿಕ್ ಆರ್ಯನ್ ಅವರನ್ನು ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಇದೊಂದು ಮುಜುಗರದ ಪ್ರಸಂಗ’ ಎಂದು ಕೆಲವರು ಹೇಳಿದ್ದಾರೆ.

ಬಣ್ಣದ ಲೋಕದಲ್ಲಿ ಸೆಲೆಬ್ರಿಟಿಗಳ ಪ್ರೇಮ್ ಕಹಾನಿಗಳಿಗೆ ಕೊರತೆ ಇಲ್ಲ. ಅದೇ ರೀತಿ ಬ್ರೇಕಪ್ಗಳಿಗೂ ಬರಗಾಲ ಇಲ್ಲ. ಬಾಲಿವುಡ್ (Bollywood) ಮಂದಿಗೆ ಆಗಾಗ ಲವ್ ಆಗುತ್ತದೆ. ಅಷ್ಟೇ ಬೇಗ ಬ್ರೇಕಪ್ ಕೂಡ ಆಗುತ್ತದೆ. ನಟ ಕಾರ್ತಿಕ್ ಆರ್ಯನ್ (Kartik Aaryan) ಮತ್ತು ನಟಿ ಸಾರಾ ಆಲಿ ಖಾನ್ ಅವರ ನಡುವೆಯೂ ಅಂಥ ಅಲ್ಪಾವಧಿ ಪ್ರೀತಿ ಸಿಗುರಿತ್ತು. ‘ಲವ್ ಆಜ್ ಕಲ್ 2’ ಸಿನಿಮಾದಲ್ಲಿ ಅವರಿಬ್ಬರು ಜೋಡಿಯಾಗಿ ನಟಿಸಿದ್ದರು. ಆಗ ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಆದರೆ ತಮ್ಮಿಬ್ಬರ ಸಂಬಂಧದ ಬಗ್ಗೆ ಈ ಜೋಡಿ ಸಾರ್ವಜನಿಕವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಹಾಗಂತ ಗಾಸಿಪ್ ಮಂದಿ ಸುಮ್ಮನೆ ಇರುತ್ತಾರಾ? ಖಂಡಿತಾ ಇಲ್ಲ. ಸಾರಾ ಅಲಿ ಖಾನ್ (Sara Ali Khan) ಮತ್ತು ಕಾರ್ತಿಕ್ ಆರ್ಯನ್ ಪರಸ್ಪರ ಪ್ರೀತಿಯಲ್ಲಿ ಮುಳುಗಿದ್ದಾರೆ ಎಂಬ ಮಾತು ಎಲ್ಲೆಡೆ ಹಬ್ಬಿತ್ತು. ಆದರೆ ನಂತರದ ದಿನಗಳಲ್ಲಿ ಈ ಜೋಡಿ ಹಕ್ಕಿಗಳು ದೂರಾದವು. ಈಗ ಆಕಸ್ಮಿಕವಾಗಿ ಇಬ್ಬರ ಭೇಟಿ ಆಗಿದೆ. ಅದರ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಇತ್ತೀಚೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದಕ್ಕೆ ಕಾರ್ತಿಕ್ ಆರ್ಯನ್ ಬಂದಿದ್ದರು. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾ, ಮಾಧ್ಯಮದ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿರುವಾಗ ಅವರಿಗೆ ಸಡನ್ನಾಗಿ ಸಾರಾ ಅಲಿ ಖಾನ್ ಎದುರಾದರು. ಇನ್ನೇನು ಮಾಡೋದು? ನಗು ನಗುತ್ತಲೇ ಮಾತನಾಡಿಸೋದು ಇಬ್ಬರಿಗೂ ಅನಿವಾರ್ಯ ಆಯಿತು. ಕಾರ್ತಿಕ್ ಆರ್ಯನ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾಜಿ ಪ್ರೇಯಸಿಯನ್ನು ತಬ್ಬಿಕೊಂಡರು.
ಇದನ್ನೂ ಓದಿ: 175 ಕೋಟಿ ರೂ. ಗಳಿಕೆ ಮಾಡಿದ್ರೂ ಕಿಂಚಿತ್ತೂ ಗರ್ವ ಇಲ್ಲದೆ ಬೀದಿ ಮಕ್ಕಳ ಜತೆ ಮಾತಾಡಿದ ಕಾರ್ತಿಕ್ ಆರ್ಯನ್
ಈ ವಿಡಿಯೋ ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸಾರಾ ಅಲಿ ಖಾನ್ ಮತ್ತು ಕಾರ್ತಿಕ್ ಆರ್ಯನ್ ಅವರನ್ನು ಬಹಳ ದಿನಗಳ ಬಳಿಕ ಒಟ್ಟಿಗೆ ನೋಡಿದ್ದಕ್ಕೆ ಕೆಲವರಿಗೆ ಖುಷಿ ಆಗಿದೆ. ಇನ್ನೂ ಕೆಲವರು, ‘ಇದೊಂದು ಮುಜುಗರದ ಪ್ರಸಂಗ’ ಎಂದು ಕಮೆಂಟ್ ಮಾಡಿದ್ದಾರೆ. ‘ಇಬ್ಬರಿಗೂ ಕಂಫರ್ಟ್ ಎನಿಸುತ್ತಿಲ್ಲ. ಸುಮ್ಮನೆ ಪೋಸ್ ನೀಡಿದ್ದಾರೆ ಅಷ್ಟೇ’ ಎಂಬ ಅಭಿಪ್ರಾಯ ಕೂಡ ನೆಟ್ಟಿಗರಿಂದ ಬಂದಿದೆ.
View this post on Instagram
View this post on Instagram
ಸದ್ಯ ಕಾರ್ತಿಕ್ ಆರ್ಯನ್ ಅವರು ಭರ್ಜರಿ ಗೆಲುವಿನ ಖುಷಿಯಲ್ಲಿ ತೇಲುತ್ತಿದ್ದಾರೆ. ಅವರು ನಟಿಸಿರುವ ‘ಭೂಲ್ ಭುಲಯ್ಯ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 175 ಕೋಟಿ ರೂಪಾಯಿ ಗಳಿಸಿದೆ. ಇದರಿಂದ ಅವರ ಚಾರ್ಮ್ ಹೆಚ್ಚಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:20 am, Fri, 17 June 22








