AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

175 ಕೋಟಿ ರೂ. ಗಳಿಕೆ​ ಮಾಡಿದ್ರೂ ಕಿಂಚಿತ್ತೂ ಗರ್ವ ಇಲ್ಲದೆ ಬೀದಿ ಮಕ್ಕಳ ಜತೆ ಮಾತಾಡಿದ ಕಾರ್ತಿಕ್​ ಆರ್ಯನ್​

Kartik Aaryan | Bhool Bhulaiyaa 2: ‘ಭೂಲ್​ ಭುಲಯ್ಯ 2’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕವೂ ಕಾರ್ತಿಕ್​ ಆರ್ಯನ್​ ಸರಳತೆ ಕಮ್ಮಿ ಆಗಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಈ ವಿಡಿಯೋ ವೈರಲ್​ ಆಗುತ್ತಿದೆ.

175 ಕೋಟಿ ರೂ. ಗಳಿಕೆ​ ಮಾಡಿದ್ರೂ ಕಿಂಚಿತ್ತೂ ಗರ್ವ ಇಲ್ಲದೆ ಬೀದಿ ಮಕ್ಕಳ ಜತೆ ಮಾತಾಡಿದ ಕಾರ್ತಿಕ್​ ಆರ್ಯನ್​
ಕಾರ್ತಿಕ್ ಆರ್ಯನ್
TV9 Web
| Edited By: |

Updated on:Jun 16, 2022 | 9:57 AM

Share

ಬಾಲಿವುಡ್​ನಲ್ಲಿ ಬಹುದಿನಗಳ ಬಳಿಕ ಒಂದು ಸಿನಿಮಾ ಸೂಪರ್​ ಹಿಟ್​ ಆಗಿದೆ. ಹಾರರ್​-ಕಾಮಿಡಿ ಕಥಾಹಂದರ ಇರುವ ‘ಭೂಲ್​ ಭುಲಯ್ಯ 2’ (Bhool Bhulaiyaa 2) ಸಿನಿಮಾ ಭರ್ಜರಿ ಗೆಲುವು ಸಾಧಿಸಿದೆ.​ ಈ ಚಿತ್ರದಿಂದ ನಟ ಕಾರ್ತಿಕ್​ ಆರ್ಯನ್​ ಅವರ ಚಾರ್ಮ್​ ಹೆಚ್ಚಿದೆ. ಅವರ ಅಭಿಮಾನಿ ಬಳಗ ಕೂಡ ದೊಡ್ಡದಾಗಿದೆ. ನಟನೆಗಿಂತಲೂ ಮುಖ್ಯವಾಗಿ ಕಾರ್ತಿಕ್​ ಆರ್ಯನ್​ (Kartik Aaryan) ಅವರ ಸರಳತೆ ಕಂಡು ಜನರು ಚಪ್ಪಾಳೆ ತಟ್ಟುತ್ತಿದ್ದಾರೆ. ಸುಶಾಂತ್​ ಸಿಂಗ್​ ರಜಪೂರ್​ ರೀತಿಯೇ ಕಾರ್ತಿಕ್​ ಕೂಡ ಜನರ ನಡುವಿನ ಹೀರೋ ಆಗಿ ಬೆಳೆಯುತ್ತಿದ್ದಾರೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಎಂಬಂತೆ ಒಂದು ವಿಡಿಯೋ ವೈರಲ್​ (Viral Video) ಆಗಿದೆ. ಅದರಲ್ಲಿ ಕಾರ್ತಿಕ್​ ಆರ್ಯನ್ ಅವರು ಬೀದಿ ಮಕ್ಕಳ ಜೊತೆ ಖುಷಿಯಿಂದ ಮಾತನಾಡುತ್ತಿರುವುದು ಕಾಣಿಸಿದೆ. 175 ಕೋಟಿ ರೂ. ಕಲೆಕ್ಷನ್​ ಮಾಡಿದ ಬಳಿಕವೂ ಇಷ್ಟು ವಿನಯದಿಂದ ಬೀದಿ ಮಕ್ಕಳ ಜೊತೆ ಮಾತನಾಡಿದ ಅವರ ಗುಣವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

ಬಾಲಿವುಡ್​ನಲ್ಲಿ ಕೆಲವು ಬಣಗಳು ಇವೆ ಎಂಬುದು ಸ್ಪಷ್ಟ. ಕಾರ್ತಿಕ್​ ಆರ್ಯನ್​ ಅವರನ್ನು ಕೆಲವು ಪ್ರಭಾವಿಗಳು ಮೂಲೆಗುಂಪು ಮಾಡಲು ಪ್ರಯತ್ನಿಸಿದ್ದರು. ಕೊಟ್ಟ ಅವಕಾಶವನ್ನು ಅವರಿಂದ ಕಿತ್ತುಕೊಳ್ಳಲಾಗಿತ್ತು. ಆ ಎಲ್ಲ ಕುತಂತ್ರಗಳನ್ನೂ ಮೆಟ್ಟಿನಿಂತಿದ್ದಾರೆ ಕಾರ್ತಿಕ್​ ಆರ್ಯನ್​. ಈಗ ಅವರು ನಟಿಸಿರುವ ‘ಭೂಲ್​ ಭುಲಯ್ಯ 2’ ಚಿತ್ರ ಬ್ಲಾಕ್​ ಬಸ್ಟರ್​ ಹಿಟ್​ ಆಗಿದೆ. ಆದರೂ ಸಹ ಅವರಿಗೆ ಅಹಂಕಾರ ಬಂದಿಲ್ಲ. ಬಡವ-ಶ್ರೀಮಂತ ಎಂಬ ಭೇದ ಇಲ್ಲದೇ ಅವರು ಎಲ್ಲರನ್ನೂ ಸಮನಾಗಿ ಮಾತನಾಡಿಸುತ್ತಿದ್ದಾರೆ.

ಇದನ್ನೂ ಓದಿ
Image
ವಿಮಾನ ನಿಲ್ದಾಣದಲ್ಲಿ ಕಾರ್ತಿಕ್​ ಆರ್ಯನ್​ಗೆ​ ದುಂಬಾಲುಬಿದ್ದ ಲೇಡಿ ಫ್ಯಾನ್ಸ್​; ವೈರಲ್​ ಆಯ್ತು ವಿಡಿಯೋ
Image
‘ಅಭಿಮಾನಿ ಜತೆ ಸ್ಟಾರ್​ ನಟನ ಮದುವೆ’ ಅಂತ ಹಬ್ಬಿತ್ತು ಸುದ್ದಿ; ಆದ್ರೆ ಅಲ್ಲಿ ನಡೆದಿದ್ದೇ ಬೇರೆ
Image
Kartik Aaryan: ಲ್ಯಾಂಬೋರ್ಗಿನಿಯಲ್ಲಿ ತೆರಳಿ ರಸ್ತೆ ಬದಿ ತಿಂಡಿ ಸವಿದ ಕಾರ್ತಿಕ್ ಆರ್ಯನ್
Image
ಸತ್ಯನಾರಾಯಣ ಕಥೆ ವಿಚಾರದಲ್ಲಿ ತಪ್ಪು ಮಾಡುವ ಮುನ್ನವೇ ಎಚ್ಚೆತ್ತುಕೊಂಡು ನಿರ್ದೇಶಕ; ಸಡನ್​ ಟ್ವಿಸ್ಟ್​

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಕಾರ್ತಿಕ್​ ಆರ್ಯನ್​ಗೆ​ ದುಂಬಾಲುಬಿದ್ದ ಲೇಡಿ ಫ್ಯಾನ್ಸ್​; ವೈರಲ್​ ಆಯ್ತು ವಿಡಿಯೋ

ಇತ್ತೀಚೆಗೆ ಕಾರ್ತಿಕ್​ ಆರ್ಯನ್ ಅವರು ತಮ್ಮ ಸಾಕುನಾಯಿ ಜೊತೆ ವಾಕಿಂಗ್​ಗೆ ತೆರಳಿದ್ದರು. ಈ ವೇಳೆ ಅವರಿಗೆ ಕೆಲವು ಬಡಮಕ್ಕಳು ಎದುರಾದರು. ‘ಭುಲ್​ ಭುಲಯ್ಯ 2’ ಸಿನಿಮಾ ನೋಡಿ ಅವರೆಲ್ಲರೂ ಖುಷಿಪಟ್ಟಿದ್ದಾರೆ. ಆ ಬಗ್ಗೆ ಕಾರ್ತಿಕ್​ ಆರ್ಯನ್​ ಜೊತೆ ಅವರು ಚರ್ಚೆ ಮಾಡಿದ್ದಾರೆ. ‘ನಿಮಗೆ ಸಿನಿಮಾ ಇಷ್ಟ ಆಯ್ತಾ? ನೀವೆಲ್ಲ ಚಪ್ಪಾಳೆ ತಟ್ಟಿದ್ರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದ್ದಾರೆ ಕಾರ್ತಿಕ್​. ಆ ಮಕ್ಕಳ ಜೊತೆ ಮಾತನಾಡಿ ಅವರಿಗೆ ಖುಷಿ ಆಗಿದೆ.

ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಕಾರ್ತಿಕ್​ ಆರ್ಯನ್ ಅವರ ಸರಳತೆಯನ್ನು ಕಂಡು ಎಲ್ಲರೂ ಕೊಂಡಾಡುತ್ತಿದ್ದಾರೆ. ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ, ಮುಂದಿನ ಸಿನಿಮಾಗಳು ಕೂಡ ದೊಡ್ಡ ಮಟ್ಟದಲ್ಲಿ ಹಿಟ್​ ಆಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಈ ಹಿಂದೆ ಕೂಡ ಕಾರ್ತಿಕ್​ ಆರ್ಯನ್​ ಅವರು ಸಾಮಾನ್ಯ ಜನರ ರೀತಿಯಲ್ಲಿ ಬೀದಿ ಬದಿಯಲ್ಲಿ ನಿಂತು ಆಹಾರ ಸೇವಿಸಿದ್ದರು. ಈಗ ಸಿನಿಮಾ ಸೂಪರ್​ ಹಿಟ್​ ಆದ ಬಳಿಕವೂ ಅವರ ಸರಳತೆ ಕಮ್ಮಿ ಆಗಿಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.

ಒಟಿಟಿಯಲ್ಲಿ ಬರಲಿದೆ ‘ಭೂಲ್​ ಭುಲಯ್ಯ 2’:

ಥಿಯೇಟರ್​ನಲ್ಲಿ ಭರ್ಜರಿ ಕಮಾಯಿ ಮಾಡಿದ ಬಳಿಕ ಒಟಿಟಿಗೆ ಬರಲು ‘ಭೂಲ್​ ಭುಲಯ್ಯ 2’ ಚಿತ್ರ ಸಜ್ಜಾಗಿದೆ. ‘ನೆಟ್​ಫ್ಲಿಕ್ಸ್​’ ಮೂಲಕ ಈ ಚಿತ್ರ ಪ್ರಸಾರ ಆಗಲಿದೆ. ಆ ಕುರಿತು ಅಧಿಕೃತ ಮಾಹಿತಿ ಹಂಚಿಕೊಳ್ಳಲಾಗಿದೆ. ಆದರೆ ಒಟಿಟಿ ರಿಲೀಸ್​ ದಿನಾಂಕದ ಬಗ್ಗೆ ಇನ್ನಷ್ಟೇ ಘೋಷಣೆ ಆಗಬೇಕಿದೆ. ಈ ಚಿತ್ರದಲ್ಲಿ ಕಾರ್ತಿಕ್​ ಆರ್ಯನ್​ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:56 am, Thu, 16 June 22

Follow Us
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!