Shilpa Shetty:​ ಖ್ಯಾತ ನಟನನ್ನು ಅನುಕರಿಸಿ ಸುದ್ದಿಯಾದ ಶಿಲ್ಪಾ ಶೆಟ್ಟಿ; ಏನಿದು ಸಮಾಚಾರ? ವಿಡಿಯೋ ನೋಡಿ

Ranveer Singh: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಖ್ಯಾತ ನಟನ ಡಾನ್ಸ್ ಸ್ಟೆಪ್ ಅನುಕರಿಸಿ ಸುದ್ದಿಯಲ್ಲಿದ್ದಾರೆ. ಅದೇನು ಸಮಾಚಾರ ಅಂತೀರಾ? ಮುಂದೆ ಓದಿ.

Shilpa Shetty:​ ಖ್ಯಾತ ನಟನನ್ನು ಅನುಕರಿಸಿ ಸುದ್ದಿಯಾದ ಶಿಲ್ಪಾ ಶೆಟ್ಟಿ; ಏನಿದು ಸಮಾಚಾರ? ವಿಡಿಯೋ ನೋಡಿ
ಶಿಲ್ಪಾ ಶೆಟ್ಟಿ
Edited By:

Updated on: Nov 12, 2021 | 11:13 AM

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಲ್ಲಿರುತ್ತಾರೆ. ಚಿತ್ರಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಅವರು, ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ. ಪತಿ ರಾಜ್ ಕುಂದ್ರಾ ಬಿಡುಗಡೆಯ ನಂತರವಂತೂ ಅವರ ಲವಲವಿಕೆ ಮತ್ತಷ್ಟು ಹೆಚ್ಚಿದೆ. ಆದರೂ ಈ ತಾರಾ ದಂಪತಿ ಹೊರಗೆಲ್ಲೂ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ಇದು ಚರ್ಚೆ ಹುಟ್ಟುಹಾಕುತ್ತಿದೆ ಎನ್ನುವಾಗಲೇ ಶಿಲ್ಪಾ ಹಾಗೂ ರಾಜ್ ಜೊತೆಯಾಗಿ ಕಾಣಿಸಿಕೊಂಡು ಗಾಸಿಪ್ ಮಂದಿಯ ಬಾಯಿ ಮುಚ್ಚಿಸಿದ್ದರು. ಇದೀಗ ಶಿಲ್ಪಾ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಅದು ಸುದ್ದಿಯಾಗಲು ಏನು ಕಾರಣ ಅಂತೀರಾ? ಬಾಲಿವುಡ್​ನ ತಾರಾ ನಟ ರಣವೀರ್ ಸಿಂಗ್ ಡಾನ್ಸ್ ಸ್ಟೆಪ್​ಗಳನ್ನು ಅನುಕರಿಸಿರುವ ಶಿಲ್ಪಾ ಎಲ್ಲರ ಗಮನ ಸೆಳೆದಿದ್ದಾರೆ.

ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಶಿಲ್ಪಾ, ಅದರಲ್ಲಿ ರಣವೀರ್ ಸಿಂಗ್ ಸ್ಟೆಪ್​ಗಳನ್ನು ಅನುಕರಿಸಿದ್ದಾರೆ. ರಾಮ್ ಲೀಲಾ ಚಿತ್ರದಲ್ಲಿ ರಣವೀರ್ ಮಾಡಿದ್ದ ಹುಕ್ ಸ್ಟೆಪ್​ಗಳನ್ನು ವಿಡಿಯೋ ಮೂಲಕ ನಟಿ ಹಂಚಿಕೊಂಡಿದ್ದಾರೆ. ‘ಇಂದು ಡಾನ್ಸ್ ಮಾಡುವ ಉತ್ಸಾಹ ಇದೆ, ಅದಕ್ಕೆ ರಣವೀರ್ ಸಿಂಗ್ ಸ್ಟೆಪ್​ಗಳು ಪರೇರಣೆ ನೀಡಿವೆ’ ಎಂದು ಶಿಲ್ಪಾ ನಗುವಿನ ಎಮೋಜಿಯೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ.

ಶಿಲ್ಪಾ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

ಪ್ರಸ್ತುತ ಶಿಲ್ಪಾ ಹಿಮಾಚಲ್ ಪ್ರದೇಶದಲ್ಲಿ ಕುಟುಂಬದವರೊಂದಿಗೆ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಇದೇ ಟ್ರಿಪ್​ನಲ್ಲಿ ಇತ್ತೀಚೆಗೆ ಮೊದಲ ಬಾರಿಗೆ ಶಿಲ್ಪಾ ಹಾಗೂ ರಾಜ್ ಕುಂದ್ರಾ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೇ ವೇಳೆ ಶಿಲ್ಪಾ, ಧರ್ಮಶಾಲಾ ಪ್ರವಾಸದ ಚಿತ್ರಗಳು ಹಾಗೂ ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಸತತವಾಗಿ ಹಂಚಿಕೊಳ್ಳುತ್ತಿದ್ದಾರೆ.

ಚಿತ್ರಗಳ ವಿಚಾರಕ್ಕೆ ಬಂದರೆ, ಶಿಲ್ಪಾ ಕಿರುತೆರೆಯಲ್ಲಿ ‘ಸೂಪರ್ ಡಾನ್ಸರ್ 4’ ಶೋಗೆ ನಿರ್ಣಾಯಕಿಯಾಗಿ ಕಾಣಿಸಿಕೊಂಡಿದ್ದರು. ‘ಹಂಗಾಮಾ 2’ ಚಿತ್ರದಲ್ಲೂ ಅವರು ಬಣ್ಣ ಹಚ್ಚಿದ್ದರು.

ಇದನ್ನೂ ಓದಿ:

Mallika Sherawat: ನಟಿ ಹಾಟ್ ಎಂದು ತೋರಿಸಲು ಸೊಂಟದ ಮೇಲೆ ಚಪಾತಿ ಬೇಯಿಸುವ ದೃಶ್ಯದ ವಿಚಿತ್ರ ಐಡಿಯಾ ಹೇಳಿದ್ದ ನಿರ್ಮಾಪಕ

Kurup: ದುಲ್ಕರ್ ಸಲ್ಮಾನ್ ನಟನೆಯ ಕುರುಪ್ ಚಿತ್ರಕ್ಕೆ ಸಂಕಷ್ಟ; ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ