ಶ್ರೇಯಸ್ ತಲ್ಪಡೆಗೆ ಹೃದಯಾಘಾತ ಆದ ಬಳಿಕ ಅಕ್ಷಯ್ ಕುಮಾರ್ ನಡೆದುಕೊಂಡ ರೀತಿ ಹೇಗಿತ್ತು?

|

Updated on: May 10, 2024 | 7:44 AM

‘ನಾನು ಇದೆಲ್ಲವನ್ನು ಅನುಭವಿಸುತ್ತಿರುವಾಗ ಅಕ್ಷಯ್ ಅವರು ನನ್ನ ಪತ್ನಿ ದೀಪ್ತಿಗೆ ಯಾವಾಗಲೂ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. ಏನಾದರೂ ಅಗತ್ಯವಿದ್ದರೆ ಕೇಳುವಂತೆ ಕೋರಿದ್ದರು. ಕೆಲವು ವಿಚಾರಗಳು ಸಂಬಂಧವನ್ನು ರೂಪಿಸುತ್ತೇವೆ’ ಎಂದಿದ್ದಾರೆ ಶ್ರೇಯಸ್.

ಶ್ರೇಯಸ್ ತಲ್ಪಡೆಗೆ ಹೃದಯಾಘಾತ ಆದ ಬಳಿಕ ಅಕ್ಷಯ್ ಕುಮಾರ್ ನಡೆದುಕೊಂಡ ರೀತಿ ಹೇಗಿತ್ತು?
ಶ್ರೇಯಸ್-ಅಕ್ಷಯ್
Follow us on

ಬಾಲಿವುಡ್ ನಟ ಶ್ರೇಯಸ್ ತಲ್ಪಡೆ (Shreyas Talpade) ಅವರಿಗೆ 47 ವರ್ಷ ವಯಸ್ಸು. ಅವರಿಗೆ ಕಳೆದ ವರ್ಷ ಹೃದಯಾಘಾತ ಆಗಿತ್ತು. ಇದರಿಂದ ಅವರ ಅಭಿಮಾನಿಗಳಿಗೆ ಸಾಕಷ್ಟು ಆತಂಕ ಆಗಿತ್ತು. ಈಗ ಶ್ರೇಯಸ್ ತಲ್ಪಡೆ ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಅಗತ್ಯ ಇರುವ ಚಿಕಿತ್ಸೆ ಸಿಕ್ಕಿದೆ. ಈ ಘಟನೆ ಬಳಿಕ ಬಾಲಿವುಡ್​ನ ದಿಗ್ಗಜರಾದ ನಿರ್ದೇಶಕ ರೋಹಿತ್ ಶೆಟ್ಟಿ, ನಟ ಅಕ್ಷಯ್ ಕುಮಾರ್ ಅವರು ಸಾಕಷ್ಟು ಪ್ರೀತಿ ತೋರಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

‘ನಾನು ಇದೆಲ್ಲವನ್ನು ಅನುಭವಿಸುತ್ತಿರುವಾಗ ರೋಹಿತ್ ಅವರು ನನ್ನ ಪತ್ನಿ ದೀಪ್ತಿಗೆ ಯಾವಾಗಲೂ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. ಏನಾದರೂ ಅಗತ್ಯವಿದ್ದರೆ ಕೇಳುವಂತೆ ಕೋರಿದ್ದರು. ಕೆಲವು ವಿಚಾರಗಳು ಸಂಬಂಧವನ್ನು ರೂಪಿಸುತ್ತವೆ. ಇಲ್ಲದಿದ್ದರೆ ಏನೂ ಇಲ್ಲ. ಅಕ್ಷಯ್ ಕುಮಾರ್ ಅವರು ನನ್ನ ಪತ್ನಿ ಜೊತೆ ಸಂಪರ್ಕದಲ್ಲಿ ಇದ್ದರು. ಅವರು ಕೂಡ ಏನಾದರೂ ಅಗತ್ಯವಿದ್ದರೆ ಹೇಳುವಂತೆ ಕೋರಿದ್ದರು’ ಎಂದಿದ್ದಾರೆ ಶ್ರೇಯಸ್.

‘ಅಕ್ಷಯ್ ಕುಮಾರ್ ಅವರು ತೆರೆಮೇಲೆ ಬೇರೆಯದೇ ರೀತಿ ಕಾಣಿಸುತ್ತಾರೆ. ತೆರೆ ಹಿಂದೆ ಅವರು ಓರ್ವ ಒಳ್ಳೆಯ ಗೆಳೆಯ. ನಾವು ಉತ್ತಮವಾಗಿ ಇದ್ದೀವಿ ಎಂಬುದನ್ನು ಖಚಿತಪಡಿಸಲು ಅವರು ಏನು ಬೇಕಾದರೂ ಮಾಡುತ್ತಾರೆ’ ಎಂದಿದ್ದಾರೆ ಶ್ರೇಯಸ್.

ಇದನ್ನೂ ಓದಿ: ದೊಡ್ಡ ಸಂಭಾವನೆ ಪಡೆದು ತೆಲುಗಿಗೆ ಅಕ್ಷಯ್ ಕುಮಾರ್ ಎಂಟ್ರಿ, ಶಿವಣ್ಣ ಮಾಡಬೇಕಿದ್ದ ಪಾತ್ರದಲ್ಲಿ ನಟನೆ

ಹೃದಯಾಘಾತಕ್ಕೆ ಕೊವಿಡ್ ಕಾರಣ ಇರಬಹುದು ಎಂದು ಅವರು ಇತ್ತೀಚೆಗೆ ಅನುಮಾನ ವ್ಯಕ್ತಪಡಿಸಿದ್ದರು. ‘ನಾನು ಸಿಗರೇಟ್ ಸೇದಲ್ಲ. ಮದ್ಯಪಾನ ಕೂಡ ಅಪರೂಪ. ತಿಂಗಳಿಗೊಮ್ಮೆ ಕುಡಿಯುತ್ತೇನೆ ಅಷ್ಟೇ. ತಂಬಾಕು ಸೇವಿಸಲ್ಲ. ನನ್ನ ಕೊಲೆಸ್ಟ್ರಾಲ್ ಪ್ರಮಾಣ ಸ್ವಲ್ಪ ಜಾಸ್ತಿ ಇತ್ತು ಎಂಬುದು ನಿಜ. ಈಗ ಅದು ಕಡಿಮೆ ಆಗಿದೆ. ಮಧುಮೇಹ ಇಲ್ಲ, ಅಧಿಕ ರಕ್ತದೊತ್ತಡ ಇಲ್ಲ. ಎಲ್ಲವೂ ಸರಿಯಾಗಿದೆ ಎಂದರೆ ಹೃದಯಾಘಾತಕ್ಕೆ ಕಾರಣ ಏನಿರಬಹುದು. ಕೊವಿಡ್ ಲಸಿಕೆ ಪಡೆದುಕೊಂಡ ಬಳಿಕ ಇದೆಲ್ಲ ಶುರುವಾಗಿದೆ’ ಎಂದು ಶ್ರೇಯಸ್​ ತಲ್ಪಡೆ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.