AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಚಿತ್ರತಂಡದ ಮೇಲೆ ಕಾಪಿರೈಟ್​ ಉಲ್ಲಂಘನೆ ಆರೋಪ; ನಿರ್ಮಾಪಕರಿಗೆ ನೋಟಿಸ್​

ಬಾಲಿವುಡ್​ ಮಂದಿ ಭಾರಿ ಉತ್ಸಾಹದಿಂದ ‘ರಾಮಾಯಣ’ ಸಿನಿಮಾ ಮಾಡುತ್ತಿದ್ದಾರೆ. ಆದರೆ ಅವರಿಗೆ ಮಧು ಮಂಟೇನಾ ಮತ್ತು ಅಲ್ಲು ಅರವಿಂದ್​ ಅವರು ಕಾಪಿರೈಟ್​ ಉಲ್ಲಂಘನೆಯ ನೋಟಿಸ್​ ಕಳಿಸಿದ್ದಾರೆ. ಇದರಿಂದ ಹೊಸ ಚರ್ಚೆ ಶುರುವಾಗಿದೆ. ರಾಮಾಯಣದ ಕಥೆಗೆ ಇದು ಯಾವ ಸೀಮೆಯ ಕಾಪಿರೈಟ್​ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.

‘ರಾಮಾಯಣ’ ಚಿತ್ರತಂಡದ ಮೇಲೆ ಕಾಪಿರೈಟ್​ ಉಲ್ಲಂಘನೆ ಆರೋಪ; ನಿರ್ಮಾಪಕರಿಗೆ ನೋಟಿಸ್​
ರಣಬೀರ್​ ಕಪೂರ್​
ಮದನ್​ ಕುಮಾರ್​
|

Updated on: May 09, 2024 | 9:33 PM

Share

ರಾಮಾಯಣ ಕಥೆಯನ್ನು ಆಧರಿಸಿ ಈಗಾಗಲೇ ಅನೇಕ ಸಿನಿಮಾಗಳು ಬಂದು ಹೋಗಿವೆ. ಈಗ ಬಾಲಿವುಡ್​ನಲ್ಲಿ ಮತ್ತೊಂದು ಸಿನಿಮಾ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ (Ranbir Kapoor) ಅವರು ರಾಮನ ಪಾತ್ರ ಮಾಡುತ್ತಿದ್ದಾರೆ. ‘ದಂಗಲ್​’ ಖ್ಯಾತಿಯ ನಿರ್ದೇಶಕ ನಿತೇಶ್​ ತಿವಾರಿ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಶಾಕಿಂಗ್​ ಸಂಗತಿ ಏನೆಂದರೆ, ಈ ಚಿತ್ರತಂಡದ ಮೇಲೆ ಕಾಪಿರೈಟ್ (Copyright)​ ಉಲ್ಲಂಘನೆಯ ಆರೋಪ ಎದುರಾಗಿದೆ. ‘ರಾಮಾಯಣ’ (Ramayan) ಸಿನಿಮಾದ ನಿರ್ಮಾಪಕರಿಗೆ ನೋಟಿಸ್​ ಕಳಿಸಲಾಗಿದೆ!

ಎಲ್ಲರಿಗೂ ತಿಳಿದಿರುವಂತೆ ‘ರಾಮಾಯಣ’ ಕಥೆ ಯಾರ ಸ್ವತ್ತೂ ಅಲ್ಲ. ಅದು ಎಲ್ಲರಿಗೂ ಸೇರಿದ್ದು. ಯಾರು ಬೇಕಿದ್ದರೂ ಆ ಕಥೆಯನ್ನು ಬಳಸಿಕೊಂಡು ಸಿನಿಮಾ, ನಾಟಕ, ಸೀರಿಯಲ್ ಮಾಡಬಹುದು. ಅದರ ಮೇಲೆ ಯಾರೂ ಕೂಡ ಕಾಪಿ ರೈಟ್​ ಹೊಂದುವಂತಿಲ್ಲ. ಹಾಗಿದ್ದರೂ ಕೂಡ ಬಾಲಿವುಡ್​ನ ‘ರಾಮಾಯಣ’ ಚಿತ್ರತಂಡಕ್ಕೆ ಕಾಪಿರೈಟ್​ ಸಮಸ್ಯೆ ಎದುರಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಅಲ್ಲು ಅರ್ಜುನ್​ ಅವರ ತಂದೆ ಅಲ್ಲು ಅರವಿಂದ್​ ಹಾಗೂ ಮಧು ಮಂಟೇನಾ ಅವರ ‘ಅಲ್ಲು ಮಂಟೇನಾ ಮೀಡಿಯಾ ವೆಂಚರ್ಸ್​ ಎಲ್​ಎಲ್​ಪಿ’ ಕಂಪನಿಯ ಮೂಲಕ ಈ ನೋಟಿಸ್​ ಕಳಿಸಿದ್ದಾರೆ. ಬಾಲಿವುಡ್​ನಲ್ಲಿ ‘ರಾಮಾಯಣ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ‘ಪ್ರೈಂ ಫೋಕಸ್​ ಟೆಕ್ನಾಲಜಿಸ್​’ ಸಂಸ್ಥೆಗೆ ನೋಟಿಸ್​ ನೀಡಲಾಗಿದೆ. ಇದರ ಅನ್ವಯ ಏಪ್ರಿಲ್​ನಲ್ಲಿ ‘ಪ್ರೈಂ ಫೋಕಸ್​ ಟೆಕ್ನಾಲಜಿಸ್​’ ಕಂಪನಿಯು ಕೆಲವು ಹಕ್ಕುಗಳನ್ನು ಖರೀದಿಸಬೇಕಿತ್ತು. ಆದರೆ ಒಪ್ಪಂದದ ಪ್ರಕಾರ ಹಕ್ಕು ಖರೀದಿಸದೇ ಸಿನಿಮಾ ಮಾಡುತ್ತಿರುವುದಕ್ಕೆ ನೋಟಿಸ್​ ನೀಡಲಾಗಿದೆ.

ಇದನ್ನೂ ಓದಿ: ‘ರಾಮಾಯಣ’ ನಟಿ ಸಾಯಿ ಪಲ್ಲವಿ ಅಭಿನಯದ ಇನ್ನೊಂದು ಚಿತ್ರ 40 ಕೋಟಿ ರೂ.ಗೆ ಸೇಲ್​

ರಾಮಾಯಣಕ್ಕೆ ಕಾಪಿರೈಟ್​ ಇಲ್ಲವಾದರೂ ಸಹ, ಸ್ಕಿಪ್ಟ್​ಗೆ ಕಾಪಿರೈಟ್​ ಇರುತ್ತದೆ. ಸಿನಿಮಾದ ಟೈಟಲ್​ಗೆ ಸಂಬಂಧಿಸಿದಂತೆ ಕೂಡ ಕಾಪಿರೈಟ್​ ಸಮಸ್ಯೆ ಎದುರಾಗಬಹುದು. ಈಗ ಈ ಎರಡು ನಿರ್ಮಾಣ ಸಂಸ್ಥೆಗಳ ನಡುವೆ ಇದೇ ವಿಚಾರಕ್ಕೆ ಕಿರಿಕ್​ ಆಗಿರಬಹುದು ಎನ್ನಲಾಗಿದೆ. ಬಾಲಿವುಡ್​ನ ರಾಮಾಯಣ ಚಿತ್ರತಂಡದವರು ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರು ಸೀತೆಯ ಪಾತ್ರ ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರ ಫೋಟೋಗಳು ಲೀಕ್​ ಆಗಿದ್ದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್