ಆ್ಯಪಲ್​ ಐಪ್ಯಾಡ್​ ವಿರುದ್ಧ ಹೃತಿಕ್​ ರೋಷನ್​ ಗರಂ; ಕಂಪನಿ ಮಾಡಿದ ತಪ್ಪು ಏನು?

ಆ್ಯಪಲ್​ ಕಂಪನಿಯು ಹೊಸ ‘ಐಪ್ಯಾಡ್​ ಪ್ರೋ’ ಪರಿಚಯಿಸಿದೆ. ಇದರ ಜಾಹೀರಾತು ನೋಡಿದ ಅನೇಕರು ಕಿಡಿಕಾರುತ್ತಿದ್ದಾರೆ. ನಟ ಹೃತಿಕ್​ ರೋಷನ್​ ಅವರು ಕೂಡ ಈ ಜಾಹೀರಾತನ್ನು ನೋಡಿ ಟೀಕೆ ಮಾಡಿದ್ದಾರೆ. ಕಲೆ, ಬರಹ, ಸಂಗೀತಕ್ಕೆ ಈ ಜಾಹೀರಾತಿನ ಮೂಲಕ ಆ್ಯಪಲ್​ ಕಂಪನಿಯು ಅವಮಾನ ಮಾಡಿದೆ ಎಂದು ಅನೇಕ ಸೆಲೆಬ್ರಿಟಿಗಳು ಅಸಮಾಧಾನ ಹೊರಹಾಕಿದ್ದಾರೆ.

ಆ್ಯಪಲ್​ ಐಪ್ಯಾಡ್​ ವಿರುದ್ಧ ಹೃತಿಕ್​ ರೋಷನ್​ ಗರಂ; ಕಂಪನಿ ಮಾಡಿದ ತಪ್ಪು ಏನು?
ಹೃತಿಕ್​ ರೋಷನ್​
Follow us
ಮದನ್​ ಕುಮಾರ್​
|

Updated on: May 10, 2024 | 10:53 PM

ಸೆಲೆಬ್ರಿಟಿಗಳಿಗೆ ಆ್ಯಪಲ್​ ಕಂಪನಿಯ ವಸ್ತುಗಳನ್ನು ಬಳಸುವುದು ಒಂದು ಹೆಮ್ಮೆ. ಬಹುತೇಕ ಎಲ್ಲ ಸೆಲೆಬ್ರಿಟಿಗಳು ಆ್ಯಪಲ್​ ಕಂಪನಿಯ ಐಫೋನ್​, ಐಪ್ಯಾಡ್​ (Apple iPad) ಬಳಸುತ್ತಾರೆ. ಅಮೆರಿಕದ ಈ ಶ್ರೀಮಂತ ಕಂಪನಿಯ ವಿರುದ್ಧ ಈಗ ಅನೇಕ ಸೆಲೆಬ್ರಿಟಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್​ ನಟ ಹೃತಿಕ್​ ರೋಷನ್​ ಕೂಡ ಗರಂ ಆಗಿದ್ದಾರೆ. ಆ್ಯಪಲ್​ ಕಂಪನಿಯ ಒಂದು ಹೊಸ ಜಾಹೀರಾತನ್ನು (Apple iPad Advertisement) ಅವರು ಖಾರವಾಗಿ ಖಂಡಿಸಿದ್ದಾರೆ. ಅಷ್ಟಕ್ಕೂ ಈ ಜಾಹೀರಾತಿನಲ್ಲಿ ಏನಿದೆ? ಹೃತಿಕ್ ರೋಷನ್​ (Hrithik Roshan) ಅವರು ಅಸಮಾಧಾನ ಹೊರಹಾಕಲು ಕಾರಣ ಏನು? ಇಲ್ಲಿದೆ ಮಾಹಿತಿ..

ಕೆಲವೇ ದಿನಗಳ ಹಿಂದೆ ಆ್ಯಪಲ್​ ಕಂಪನಿಯು ತಮ್ಮ ಹೊಸ ಐಪ್ಯಾಡ್​ನ ಜಾಹೀರಾತನ್ನು ಬಿಡುಗಡೆ ಮಾಡಿದೆ. ‘ಐಪ್ಯಾಡ್​ ಪ್ರೋ’ ಎಷ್ಟು ಪವರ್​ಫುಲ್ ಆಗಿದೆ ಎಂಬುದನ್ನು ತಿಳಿಸುವ ಸಲುವಾಗಿ ಈ ಜಾಹೀರಾತನ್ನು ಸಿದ್ಧಪಡಿಸಲಾಗಿದೆ. ಪುಸ್ತಕಗಳು, ಸಂಗೀತ ಸಾಧನಗಳು, ಟಿವಿ, ಗ್ರಾಮೋಫೋನ್​, ಗೊಂಬೆ, ಪೇಂಟಿಂಗ್ಸ್​, ಕಲಾಕೃತಿಗಳು, ಸ್ಪೀಕರ್​, ಕ್ಯಾಮೆರಾ ಮುಂತಾದ ವಸ್ತುಗಳನ್ನು ದೊಡ್ಡ ಕ್ರಶರ್​ ಮೂಲಕ ನಾಶಪಡಿಸುವ ದೃಶ್ಯ ಇದರಲ್ಲಿ ಇದೆ. ಆ ಎಲ್ಲ ಸಾಧನಗಳ ಕೆಲಸವನ್ನು ಕೇವಲ ಒಂದು ಐಪ್ಯಾಡ್​ ಮಾಡುತ್ತದೆ ಎಂಬುದನ್ನು ಗ್ರಾಹಕರಿಗೆ ತಿಳಿಸುವುದು ಈ ಜಾಹೀರಾತಿನ ಉದ್ದೇಶ.

ಈ ಜಾಹೀರಾತನ್ನು ನೋಡಿದ ಅನೇಕ ಸೆಲೆಬ್ರಿಟಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಜಾಹೀರಾತಿನಿಂದ ಸಿನಿಮಾ, ಸಂಗೀತ, ಚಿತ್ರಕಲೆ, ಬರವಣಿಗೆ ಮುಂತಾದ ವಿಷಯಗಳಿಗೆ ಅವಮಾನ ಮಾಡಲಾಗಿದೆ ಎಂದು ಹಾಲಿವುಡ್​ನ ಸೆಲೆಬ್ರಿಟಿಗಳು ಕೂಡ ಅಭಿಪ್ರಾಯ ತಿಳಿಸಿದ್ದಾರೆ. ನಟ ಹೃತಿಕ್​ ರೋಷನ್​ ಅವರಿಗೂ ಈ ಜಾಹೀರಾತು ಇಷ್ಟ ಆಗಿಲ್ಲ.

ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹೃತಿಕ್​ ರೋಷನ್​ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ‘ಆ್ಯಪಲ್​ ಕಂಪನಿಯ ಈ ಹೊಸ ಜಾಹೀರಾತು ಎಷ್ಟು ಕಳಪೆಯಾಗಿದೆ ಮತ್ತು ಅಜ್ಞಾನದಿಂದ ಕೂಡಿದೆ’ ಎಂದು ಹೃತಿಕ್​ ರೋಷನ್​ ಅವರು ಪೋಸ್ಟ್​ ಮಾಡಿದ್ದಾರೆ. ಆ ಮೂಲಕ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಹಲವು ಕಲಾ ಪ್ರಕಾರಗಳಿಗೆ ಆ್ಯಪಲ್​ ಕಂಪನಿಯು ಈ ಜಾಹೀರಾತಿನ ಮೂಲಕ ಅವಮಾನ ಮಾಡಿದೆ ಎಂದು ನೆಟ್ಟಿಗರು ಕೂಡ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹೃತಿಕ್​ ರೋಷನ್​, ಜಾನ್​ ಅಬ್ರಾಹಂ ಸಹಪಾಠಿಗಳು ಎಂಬುದು ನಿಮಗೆ ಗೊತ್ತಾ? ಫೋಟೋ ಸಾಕ್ಷಿ

ಸಿನಿಮಾ ವಿಚಾರಕ್ಕೆ ಬರುವುದಾದರೆ, ಹೃತಿಕ್​ ರೋಷನ್​ ಅವರು ‘ವಾರ್​ 2’ ಸಿನಿಮಾದ ಕೆಲಸಗಳಲ್ಲಿ ಬ್ಯಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ಜೂನಿಯರ್​ ಎನ್​ಟಿಆರ್ ಕೂಡ ನಟಿಸುತ್ತಿದ್ದಾರೆ. ಮುಂಬೈನಲ್ಲಿ ಈ ಚಿತ್ರದ ಶೂಟಿಂಗ್​ ನಡೆಯುತ್ತಿದೆ. ‘ಯಶ್​ ರಾಜ್​ ಫಿಲ್ಮ್ಸ್​’ ನಿರ್ಮಾಣದ ಈ ಬಹುನಿರೀಕ್ಷಿತ ಸಿನಿಮಾಗೆ ಅಯಾನ್​ ಮುಖರ್ಜಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ
"ನನ್ನ ಕೊಲೆ ಮಾಡುವ ಸಂಚು ನಡೆಸಿದ್ದೀರಿ" ಪೊಲೀಸರ ವಿರುದ್ಧ ಸಿಟಿ ರವಿ ಗರಂ
ಎಲ್​ಪಿಜಿ- ಸಿಎನ್​ಜಿ ಟ್ರಕ್ ನಡುವೆ ಅಪಘಾತ, ಬೆಂಕಿ, ನಾಲ್ವರು ಸಜೀವ ದಹನ
ಎಲ್​ಪಿಜಿ- ಸಿಎನ್​ಜಿ ಟ್ರಕ್ ನಡುವೆ ಅಪಘಾತ, ಬೆಂಕಿ, ನಾಲ್ವರು ಸಜೀವ ದಹನ
ಮತ್ತೆ ಕಳಪೆಪಟ್ಟ ಪಡೆದ ಚೈತ್ರಾ; ಕ್ಯಾಪ್ಟನ್ ಪಟ್ಟಕ್ಕೇರಿದ ಭವ್ಯಾ ಗೌಡ
ಮತ್ತೆ ಕಳಪೆಪಟ್ಟ ಪಡೆದ ಚೈತ್ರಾ; ಕ್ಯಾಪ್ಟನ್ ಪಟ್ಟಕ್ಕೇರಿದ ಭವ್ಯಾ ಗೌಡ
ಮಕ್ಕಳ ಕೈಗೆ ಕಪ್ಪು ಮಣಿ, ತಾಮ್ರದ ಕಡಗ ಹಾಕುವುದೇಕೆ? ಇಲ್ಲಿದೆ ಕಾರಣ
ಮಕ್ಕಳ ಕೈಗೆ ಕಪ್ಪು ಮಣಿ, ತಾಮ್ರದ ಕಡಗ ಹಾಕುವುದೇಕೆ? ಇಲ್ಲಿದೆ ಕಾರಣ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ