Hrithik Roshan: ‘ಫೈಟರ್​’ ಚಿತ್ರದಲ್ಲಿ 25 ನಿಮಿಷದ ಕ್ಲೈಮ್ಯಾಕ್ಸ್​; 120 ಗಂಟೆಯ ಫೈಟಿಂಗ್​ ಚಿತ್ರೀಕರಣಕ್ಕೆ ಹೃತಿಕ್​ ಸಜ್ಜು

ಹೃತಿಕ್​ ರೋಷನ್​ ಜೊತೆ ದೀಪಿಕಾ ಪಡುಕೋಣೆ, ಅನಿಲ್​ ಕಪೂರ್​ ಅವರು ‘ಫೈಟರ್​’ ಚಿತ್ರದಲ್ಲಿ ಮುಖ್ಯ ಪಾತ್ರ ನಿಭಾಯಿಸುತ್ತಿದ್ದಾರೆ. ಈಗ ಮುಂಬೈನಲ್ಲಿ ಈ ಚಿತ್ರಕ್ಕೆ ಶೂಟಿಂಗ್​ ನಡೆಯುತ್ತಿದೆ.

Hrithik Roshan: ‘ಫೈಟರ್​’ ಚಿತ್ರದಲ್ಲಿ 25 ನಿಮಿಷದ ಕ್ಲೈಮ್ಯಾಕ್ಸ್​; 120 ಗಂಟೆಯ ಫೈಟಿಂಗ್​ ಚಿತ್ರೀಕರಣಕ್ಕೆ ಹೃತಿಕ್​ ಸಜ್ಜು
ಹೃತಿಕ್ ರೋಷನ್

Updated on: Apr 28, 2023 | 7:00 AM

ಮುಖ್ಯಾಂಶಗಳು

  • ಆ್ಯಕ್ಷನ್ ಸಿನಿಮಾಗಳಲ್ಲಿ ಹೃತಿಕ್​ ರೋಷನ್​ ಅವರನ್ನು ನೋಡಬೇಕು ಎಂಬುದು ಅಭಿಮಾನಿಗಳ ಆಸೆ
  • ‘ಫೈಟರ್​’ ಸಿನಿಮಾದ ಕ್ಲೈಮ್ಯಾಕ್ಸ್​ ಸಖತ್​ ಥ್ರಿಲ್​ ನೀಡಲಿದೆ ಎಂಬ ಸುದ್ದಿ ಬಿ-ಟೌನ್​ ಅಂಗಳದಲ್ಲಿ ಹರಿದಾಡುತ್ತಿದೆ
  • ಕ್ಲೈಮ್ಯಾಕ್ಸ್​ ದೃಶ್ಯಕ್ಕಾಗಿ ಬರೋಬ್ಬರಿ 120 ಗಂಟೆಗಳ ಸಾಹಸ ದೃಶ್ಯವನ್ನು ಚಿತ್ರೀಕರಿಸಲಾಗುವುದು

ನಿರ್ದೇಶಕ ಸಿದ್ದಾರ್ಥ್​ ಆನಂದ್​ (Siddharth Anand) ಅವರು ಯಶಸ್ಸಿನ ಉತ್ತುಂಗದಲ್ಲಿ ಇದ್ದಾರೆ. ಅವರು ನಿರ್ದೇಶಿಸಿದ ‘ಪಠಾಣ್​’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿತು. ಈ ಮೂಲಕ ನಟ ಶಾರುಖ್​ ಖಾನ್​ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಇಷ್ಟೆಲ್ಲ ಸಕ್ಸಸ್​ ಕಂಡಿರುವ ಸಿದ್ದಾರ್ಥ್​ ಆನಂದ್​ ಅವರಿಗೆ ಬಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಾಗಿದೆ. ಅನೇಕ ಸಿನಿಮಾ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಈ ನಡುವೆ ಅವರು ಹೃತಿಕ್​ ರೋಷನ್​ (Hrithik Roshan) ಜೊತೆ ‘ಫೈಟರ್​’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಒಂದು ಇಂಟರೆಸ್ಟಿಂಗ್​ ಮಾಹಿತಿ ಕೇಳಿಬಂದಿದೆ. ಈ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಬರೋಬ್ಬರಿ 25 ನಿಮಿಷಗಳ ಒಂದು ಫೈಟಿಂಗ್​ ದೃಶ್ಯ ಇರಲಿದೆ ಎನ್ನಲಾಗುತ್ತಿದೆ. ಆ ಮೂಲಕ ‘ಫೈಟರ್​’ ಸಿನಿಮಾ (Fighter Movie) ಕೌತುಕ ಮೂಡಿಸಿದೆ.

ಸಾಹಸ ಪ್ರಧಾನ ಸಿನಿಮಾಗಳನ್ನು ಮಾಡುವಲ್ಲಿ ಸಿದ್ದಾರ್ಥ್​ ಆನಂದ್​ ಅವರು ಸೈ ಎನಿಸಿಕೊಂಡಿದ್ದಾರೆ. ಹೃತಿಕ್​ ರೋಷನ್​ ಜೊತೆ ಅವರು ಈ ಹಿಂದೆ ‘ವಾರ್​’ ಮತ್ತು ‘ಬ್ಯಾಂಗ್​ ಬ್ಯಾಂಗ್​’ ಚಿತ್ರಗಳನ್ನು ಮಾಡಿದ್ದರು. ಆ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡವು. ಈಗ ಮತ್ತೆ ಅವರು ‘ಫೈಟರ್​’ ಚಿತ್ರದಲ್ಲಿ ಹೃತಿಕ್​ ರೋಷನ್​ ಜೊತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ.

ಇದನ್ನೂ ಓದಿ: Hrithik Roshan: ‘ಕಾಂತಾರ ಕ್ಲೈಮ್ಯಾಕ್ಸ್​ ನೋಡಿ ರೋಮಾಂಚನ ಆಯ್ತು’; ರಿಷಬ್​ ಶೆಟ್ಟಿ ಚಿತ್ರಕ್ಕೆ ಹೃತಿಕ್​ ರೋಷನ್​ ಮೆಚ್ಚುಗೆ

ಆ್ಯಕ್ಷನ್ ಸಿನಿಮಾಗಳಲ್ಲಿ ಹೃತಿಕ್​ ರೋಷನ್​ ಅವರನ್ನು ನೋಡಬೇಕು ಎಂಬುದು ಅಭಿಮಾನಿಗಳ ಆಸೆ. ಅದಕ್ಕೆ ತಕ್ಕಂತೆಯೇ ‘ಫೈಟರ್​’ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರದ ಕ್ಲೈಮ್ಯಾಕ್ಸ್​ ದೃಶ್ಯಕ್ಕಾಗಿ ಬರೋಬ್ಬರಿ 120 ಗಂಟೆಗಳ ಸಾಹಸ ದೃಶ್ಯವನ್ನು ಚಿತ್ರೀಕರಿಸಲಾಗುವುದು. ಅದನ್ನು 25 ನಿಮಿಷಕ್ಕೆ ಎಡಿಟ್​ ಮಾಡಲಾಗುವುದು. ಆ ಮೂಲಕ ‘ಫೈಟರ್​’ ಸಿನಿಮಾದ ಕ್ಲೈಮ್ಯಾಕ್ಸ್​ ಸಖತ್​ ಥ್ರಿಲ್​ ನೀಡಲಿದೆ ಎಂಬ ಸುದ್ದಿ ಬಿ-ಟೌನ್​ ಅಂಗಳದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಅಭಿಮಾನಿಯ ಕಾಲು ಮುಟ್ಟಿ ನಮಸ್ಕಾರ ಮಾಡಿದ ಹೃತಿಕ್​ ರೋಷನ್​; ಇಲ್ಲಿದೆ ವೈರಲ್​ ವಿಡಿಯೋ

‘ಫೈಟರ್​’ ಸಿನಿಮಾದಲ್ಲಿ ಗ್ರಾಫಿಕ್ಸ್​ ದೃಶ್ಯಗಳು ಸಾಕಷ್ಟು ಇರಲಿವೆ. ಅದಕ್ಕಾಗಿ ಬರೋಬ್ಬರಿ 6 ತಿಂಗಳ ಸಮಯವನ್ನು ಗ್ರಾಫಿಕ್ಸ್​ ಕೆಲಸಕ್ಕೆ ಮೀಸಲಿಡಲಾಗಿದೆ. ಆಸ್ಕರ್​ ಪುರಸ್ಕೃತ ವಿಎಫ್​ಎಕ್ಸ್​ ಕಂಪನಿಗಳು ಈ ಚಿತ್ರದ ತೆರೆ ಹಿಂದೆ ಕೆಲಸ ಮಾಡುತ್ತಿವೆ. ಹೃತಿಕ್​ ರೋಷನ್​ ಜೊತೆ ದೀಪಿಕಾ ಪಡುಕೋಣೆ, ಅನಿಲ್​ ಕಪೂರ್​ ಕೂಡ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸುತ್ತಿದ್ದಾರೆ. ಪ್ರಸ್ತುತ ಮುಂಬೈನಲ್ಲಿ ಈ ಚಿತ್ರಕ್ಕೆ ಶೂಟಿಂಗ್​ ನಡೆಯುತ್ತಿದೆ.

2023ರ ಜನವರಿಯಲ್ಲಿ ‘ಪಠಾಣ್​’ ಸಿನಿಮಾ ಮೂಲಕ ಸಿದ್ದಾರ್ಥ್​ ಆನಂದ್​ ಗೆಲುವು ಪಡೆದರು. ಅದೇ ರೀತಿ 2024ರ ಜನವರಿಯಲ್ಲಿ ಅವರು ‘ಫೈಟರ್​’ ಚಿತ್ರವನ್ನು ರಿಲೀಸ್​ ಮಾಡಬೇಕು ಎಂದುಕೊಂಡಿದ್ದಾರೆ. ಈ ಸಿನಿಮಾಗಾಗಿ ಫ್ಯಾನ್ಸ್​ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us