AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hrithik Roshan: ‘ಕಾಂತಾರ ಕ್ಲೈಮ್ಯಾಕ್ಸ್​ ನೋಡಿ ರೋಮಾಂಚನ ಆಯ್ತು’; ರಿಷಬ್​ ಶೆಟ್ಟಿ ಚಿತ್ರಕ್ಕೆ ಹೃತಿಕ್​ ರೋಷನ್​ ಮೆಚ್ಚುಗೆ

Hrithik Roshan | Kantara Movie: ಅನೇಕ ಸೆಲೆಬ್ರಿಟಿಗಳು ‘ಕಾಂತಾರ’ ಸಿನಿಮಾವನ್ನು ಕೊಂಡಾಡಿದ್ದಾರೆ. ಅವರ ಸಾಲಿಗೆ ಹೃತಿಕ್ ರೋಷನ್​ ಕೂಡ ಸೇರ್ಪಡೆ ಆಗಿದ್ದಾರೆ.

Hrithik Roshan: ‘ಕಾಂತಾರ ಕ್ಲೈಮ್ಯಾಕ್ಸ್​ ನೋಡಿ ರೋಮಾಂಚನ ಆಯ್ತು’; ರಿಷಬ್​ ಶೆಟ್ಟಿ ಚಿತ್ರಕ್ಕೆ ಹೃತಿಕ್​ ರೋಷನ್​ ಮೆಚ್ಚುಗೆ
ಕಾಂತಾರ - ಹೃತಿಕ್ ರೋಷನ್
TV9 Web
| Updated By: ಮದನ್​ ಕುಮಾರ್​|

Updated on:Dec 12, 2022 | 10:53 AM

Share

ದೇಶಾದ್ಯಂತ ಹೊಸ ಸಂಚಲನ ಮೂಡಿಸಿದ ‘ಕಾಂತಾರ’ (Kantara Movie) ಚಿತ್ರದ ಬಗ್ಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಭಾಷೆಗಳ ಗಡಿ ಮೀರಿ ಈ ಚಿತ್ರ ಯಶಸ್ಸು ಕಂಡಿದೆ. ರಿಷಬ್​ ಶೆಟ್ಟಿ (Rishab Shetty) ಅವರ ನಟನೆ ಮತ್ತು ನಿರ್ದೇಶನಕ್ಕೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ‘ಕಾಂತಾರ’ ಈಗ ಒಟಿಟಿಯಲ್ಲೂ ಸದ್ದು ಮಾಡುತ್ತಿದೆ. ನೆಟ್​ಫ್ಲಿಕ್ಸ್​ ಮೂಲಕ ಈ ಚಿತ್ರದ ಹಿಂದಿ ವರ್ಷನ್​ ವೀಕ್ಷಣೆಗೆ ಲಭ್ಯವಾಗಿದೆ. ಬಾಲಿವುಡ್​ನ ಖ್ಯಾತ ನಟ ಹೃತಿಕ್ ರೋಷನ್​ (Hrithik Roshan) ಅವರು ಕೂಡ ‘ಕಾಂತಾರ’ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಚಿತ್ರದ ಕ್ಲೈಮ್ಯಾಕ್ಸ್​ ಸಖತ್​ ಇಷ್ಟ ಆಗಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ಕಾಂತಾರ ಸಿನಿಮಾವನ್ನು ನೋಡಿ ಸಾಕಷ್ಟು ವಿಷಯ ಕಲಿತುಕೊಂಡೆ. ರಿಷಬ್​ ಶೆಟ್ಟಿ ಅವರಿಂದಾಗಿ ಈ ಸಿನಿಮಾ ಅಸಾಧಾರಣ ಎನಿಸಿಕೊಂಡಿದೆ. ನಿರೂಪಣೆ, ನಟನೆ ಮತ್ತು ನಿರ್ದೇಶನ ಅತ್ಯುತ್ತಮವಾಗಿದೆ. ಕ್ಲೈಮ್ಯಾಕ್ಸ್​ನಲ್ಲಿ ಕಂಡ ಬದಲಾವನೆಯಿಂದ ನನಗೆ ರೋಮಾಂಚನ ಆಯಿತು. ಇಡೀ ತಂಡಕ್ಕೆ ನನ್ನ ಗೌರವ ಮತ್ತು ಅಭಿನಂದನೆಗಳು’ ಎಂದು ಹೃತಿಕ್​ ರೋಷನ್​ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ
Image
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Image
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Image
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Image
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ಇದನ್ನೂ ಓದಿ: Kantara Movie: ‘ಕಾಂತಾರ’ ಚಿತ್ರದ ಯಶಸ್ಸು ಅತಿ ಹೆಚ್ಚು ಅಚ್ಚರಿ ಮೂಡಿಸಿದ್ದು ರಾಜಮೌಳಿಗೆ; ಕಾರಣ ಇಲ್ಲಿದೆ..

ಕನ್ನಡ ಸಿನಿಮಾಗಳು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ‘ಕೆಜಿಎಫ್​: ಚಾಪ್ಟರ್​ 2’ ಬಳಿಕ ‘ಕಾಂತಾರ’ ಚಿತ್ರದಿಂದ ಚಂದನವನದ ಚಾರ್ಮ್​ ಹೆಚ್ಚಿದೆ. ರಜನಿಕಾಂತ್​, ವಿವೇಕ್​ ಅಗ್ನಿಹೋತ್ರಿ, ಕಂಗನಾ ರಣಾವತ್​, ಅನುಷ್ಕಾ ಶೆಟ್ಟಿ, ಪ್ರಭಾಸ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಸಿನಿಮಾವನ್ನು ಕೊಂಡಾಡಿದ್ದಾರೆ. ಅವರ ಸಾಲಿಗೆ ಹೃತಿಕ್ ರೋಷನ್​ ಕೂಡ ಸೇರ್ಪಡೆ ಆಗಿದ್ದಾರೆ.

ಇದನ್ನೂ ಓದಿ: Rishab Shetty: ಕಾಂತಾರ 2, ವರಾಹ ರೂಪಂ ವಿವಾದ, ಮುಂದಿನ ಚಿತ್ರ: 3 ಮುಖ್ಯ ವಿಚಾರಕ್ಕೆ ರಿಷಬ್​ ಶೆಟ್ಟಿ ಪ್ರತಿಕ್ರಿಯೆ

ರಿಷಬ್​ ಶೆಟ್ಟಿ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ. ‘ಕಾಂತಾರ’ ಚಿತ್ರದಿಂದ ಅವರಿಗೆ ಆ ಪರಿ ಗೆಲುವು ಸಿಕ್ಕಿದೆ. ಅವರ ಮುಂದಿನ ಸಿನಿಮಾ ಬಗ್ಗೆ ತಿಳಿದುಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ. ಶೀಘ್ರದಲ್ಲೇ ‘ಕಾಂತಾರ 2’ ಅನೌನ್ಸ್​ ಆಗಬಹುದು ಎಂಬ ನಿರೀಕ್ಷೆ ಇದೆ.

ಟಾಪ್​ 5 ಸಿನಿಮಾಗಳಲ್ಲಿ ‘ಕೆಜಿಎಫ್​ 2’, ‘ಕಾಂತಾರ’:

ಗೂಗಲ್​ ಹುಡುಕಾಟದಲ್ಲಿ ‘ಕಾಂತಾರ’ ಮತ್ತು ‘ಕೆಜಿಎಫ್​ 2’ ಸಿನಿಮಾಗಳು ಸದ್ದು ಮಾಡಿವೆ. 2022ರಲ್ಲಿ ಜನರು ಅತಿ ಹೆಚ್ಚು ಸರ್ಜ್​ ಮಾಡಿದ ಭಾರತದ ಟಾಪ್ 5 ಸಿನಿಮಾಗಳಲ್ಲಿ ಈ ಎರಡು ಚಿತ್ರಗಳು ಸ್ಥಾನ ಪಡೆದುಕೊಂಡಿವೆ. ಮೊದಲ ಸ್ಥಾನದಲ್ಲಿ ರಣಬೀರ್​ ಕಪೂರ್​-ಆಲಿಯಾ ಭಟ್​ ಜೋಡಿಯ ‘ಬ್ರಹ್ಮಾಸ್ತ್ರ’ ಸಿನಿಮಾ ಇದೆ. ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಎರಡನೇ ಸ್ಥಾನ ಪಡೆದುಕೊಂಡಿದೆ. ಮೂರನೇ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ ಇದೆ. ನಾಲ್ಕನೇ ಸ್ಥಾನವನ್ನು ‘ಕಾಂತಾರ’ ಚಿತ್ರ ಪಡೆದುಕೊಂಡಿದ್ದರೆ, ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ 5ನೇ ಸ್ಥಾನದಲ್ಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:53 am, Mon, 12 December 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು