Darling Krishna: ಡಾರ್ಲಿಂಗ್​ ಕೃಷ್ಣಗೆ ಎಲ್ಲರೂ ಕೇಳ್ತಿದ್ದಾರೆ ಮದುವೆ ಯಾವಾಗ? ಇದು ‘ಮಿಸ್ಟರ್​ ಬ್ಯಾಚುಲರ್​’ ವಿಷಯ

Mr Bachelor | Kannada Movie: ‘ಮಿಸ್ಟರ್​ ಬ್ಯಾಚುಲರ್​’ ಚಿತ್ರದಲ್ಲಿ ಡಾರ್ಲಿಂಗ್​ ಕೃಷ್ಣ ಜೊತೆ ನಿಮಿಕಾ ರತ್ನಾಕರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಮಿಲನಾ ನಾಗರಾಜ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

Darling Krishna: ಡಾರ್ಲಿಂಗ್​ ಕೃಷ್ಣಗೆ ಎಲ್ಲರೂ ಕೇಳ್ತಿದ್ದಾರೆ ಮದುವೆ ಯಾವಾಗ? ಇದು ‘ಮಿಸ್ಟರ್​ ಬ್ಯಾಚುಲರ್​’ ವಿಷಯ
ನಿಮಿಕಾ ರತ್ನಾಕರ್, ಡಾರ್ಲಿಂಗ್ ಕೃಷ್ಣ
Follow us
TV9 Web
| Updated By: ಮದನ್​ ಕುಮಾರ್​

Updated on: Dec 12, 2022 | 7:30 AM

ನಟ ಡಾರ್ಲಿಂಗ್​ ಕೃಷ್ಣ (Darling Krishna) ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಅವರಿಗೆ ಎಲ್ಲರೂ ‘ಮದುವೆ ಯಾವಾಗ’ ಅಂತ ಕೇಳ್ತಿದ್ದಾರೆ. ಹಾಗಂತ ಇದು ಅವರ ರಿಯಲ್​ ಲೈಫ್​ ವಿಷಯ ಅಲ್ಲ. ಪಕ್ಕಾ ಸಿನಿಮಾ ಸುದ್ದಿ. ಡಾರ್ಲಿಂಗ್​ ಕೃಷ್ಣ ನಟಿಸಿರುವ ‘ಮಿಸ್ಟರ್​ ಬ್ಯಾಚುಲರ್​’ (Mr Bachelor) ಚಿತ್ರದ ಹೊಸ ಹಾಡು ಬಿಡುಗಡೆ ಆಗಿದೆ. ‘ಮದುವೆ ಯಾವಾಗ..’ ಎಂದು ಶುರುವಾಗುವ ಈ ಗೀತೆಯಲ್ಲಿ ಬ್ಯಾಚುಲರ್​ ಹುಡುಗನ ಕಹಾನಿ ಹೇಳಲಾಗಿದೆ. ಜಂಕಾರ್ ಮ್ಯೂಸಿಕ್ ಮೂಲಕ ಈ ಗೀತೆ ಬಿಡುಗಡೆ ಆಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ. ಹರೀಶ್ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ವಿಜಯ್ ಪ್ರಕಾಶ್ ಹಾಡಿರುವ ಈ ಗೀತೆಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದು, ಮಾರುತಿ ಟಿ. ಸಾಹಿತ್ಯ ಬರೆದಿದ್ದಾರೆ.

ಅಚ್ಚರಿ ಎಂದರೆ ಇದು ‘ಲವ್​ ಮಾಕ್ಟೇಲ್​’ ಚಿತ್ರ ಶುರು ಆಗೋದಕ್ಕಿಂತಲೂ ಮುನ್ನ ಸೆಟ್ಟೇರಿದ ಸಿನಿಮಾ. ಆ ಕಾರಣಕ್ಕಾಗಿ ಡಾರ್ಲಿಂಗ್​ ಕೃಷ್ಣ ಅವರಿಗೆ ‘ಮಿಸ್ಟರ್​ ಬ್ಯಾಚುಲರ್​’ ಬಗ್ಗೆ ವಿಶೇಷ ಫೀಲ್​ ಇದೆ. ಸಾಂಗ್​ ಬಿಡುಗಡೆ ವೇಳೆ ಅವರು ಈ ಬಗ್ಗೆ ಮಾತಾಡಿದರು. ‘ಈ ಚಿತ್ರದ ಸಂಭಾವನೆಯಿಂದಲೇ ನಾನು ಲವ್ ಮಾಕ್ಟೇಲ್ ಸಿನಿಮಾ ಶುರು ಮಾಡಿದ್ದು. ಹಾಗಾಗಿ ನನಗೆ ಈ ಚಿತ್ರದ ಮೇಲೆ ವಿಶೇಷ ಪ್ರೀತಿ. ನಾಯ್ಡು ಅವರ ನಿರ್ದೇಶನದಲ್ಲಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಮನರಂಜನೆಯ ಜೊತೆಗೆ ಆ್ಯಕ್ಷನ್​, ಸೆಂಟಿಮೆಂಟ್ ಸನ್ನಿವೇಶಗಳು ಇದೆ‌’ ಎಂದಿದ್ದಾರೆ ಡಾರ್ಲಿಂಗ್​ ಕೃಷ್ಣ.

‘ಮಿಸ್ಟರ್​ ಬ್ಯಾಚುಲರ್​’ ಚಿತ್ರದಲ್ಲಿ ನಿಮಿಕಾ ರತ್ನಾಕರ್ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಮಿಲನಾ ನಾಗರಾಜ್ ಕೂಡ ಕಾಣಿಸಿಕೊಳ್ಳಲಿದ್ದಾರೆ. 2023ರ ಜನವರಿ 6ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ‘ಈ ಚಿತ್ರದಲ್ಲಿ ಕೃಷ್ಣ ಅವರ ಜೊತೆ ನಟಿಸಿದ್ದು ಸಂತಸ ತಂದಿದೆ’ ಎಂದಿದ್ದಾರೆ ನಿಮಿಕಾ ರತ್ನಾಕರ್​.

ಇದನ್ನೂ ಓದಿ
Image
KrissMi Nest: ಮಿಲನಾ ನಾಗರಾಜ್​-ಡಾರ್ಲಿಂಗ್​ ಕೃಷ್ಣ ಹೊಸ ಮನೆ; ಇಲ್ಲಿದೆ ಗೃಹ ಪ್ರವೇಶದ ಸುಂದರ ಫೋಟೋ ಗ್ಯಾಲರಿ
Image
ಜೊತೆಯಾಗಿ ಬಂದು ‘ಶುಗರ್​ಲೆಸ್​’ ಸಿನಿಮಾ ನೋಡಿದ ಮಿಲನಾ ನಾಗರಾಜ್​-ಡಾರ್ಲಿಂಗ್​ ಕೃಷ್ಣ ದಂಪತಿ
Image
Darling Krishna: ಡಾರ್ಲಿಂಗ್​ ಕೃಷ್ಣ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಿಸಿದ ನಿರ್ದೇಶಕ ಶಶಾಂಕ್​
Image
ಡಾರ್ಲಿಂಗ್​ ಕೃಷ್ಣ-ಮಿಲನಾ ವಿವಾಹ ವಾರ್ಷಿಕೋತ್ಸವ; ಈ ಜೋಡಿಗೆ ವ್ಯಾಲೆಂಟೈನ್ಸ್​ ಡೇ ತುಂಬ ಸ್ಪೆಷಲ್​

ಇದನ್ನೂ ಓದಿ: ವಿಜಯ್​ ಪ್ರಕಾಶ್ ಕಂಠದಲ್ಲಿ ಮೂಡಿಬಂತು ‘ಆರಾಮ್ಸೆ’ ಮ್ಯೂಸಿಕ್​ ವಿಡಿಯೋ; ಏನಿದರ ವಿಶೇಷ?

ಶ್ರೀನಿವಾಸ್ ಎಲ್​., ಹನುಮಂತ ರಾವ್ ಹಾಗೂ ಸ್ವರ್ಣಲತಾ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀ ಕ್ರೇಜಿಮೈಂಡ್ಸ್​ ಛಾಯಾಗ್ರಹಣ ಹಾಗೂ ಸಂಕಲನ ಮಾಡಿದ್ದಾರೆ. ಶ್ರೀನಿವಾಸ್​ ಮೂರ್ತಿ, ಸಾಧು ಕೋಕಿಲ, ಅಯ್ಯಪ್ಪ ಶರ್ಮ, ಚಿಕ್ಕಣ್ಣ, ಪವಿತ್ರಾ ಲೋಕೇಶ್ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: Yash: ‘ಯಶ್​ ಒಂದು ದೊಡ್ಡ ಉದಾಹರಣೆ’; ರಾಕಿಂಗ್​ ಸ್ಟಾರ್​ ಬಗ್ಗೆ ಗಾಯಕ ವಿಜಯ್​ ಪ್ರಕಾಶ್​ ಮೆಚ್ಚುಗೆ ಮಾತು

ಖ್ಯಾತ ನಿರ್ದೇಶಕ ಪುರಿ ಜಗನ್ನಾ​ಥ್​ ಬಳಿ ಕೆಲಸ ಮಾಡಿದ ಅನುಭವ ನಿರ್ದೇಶಕ ನಾಯ್ಡು ಅವರಿಗೆ ಇದೆ. ‘ಮಿಸ್ಟರ್​ ಬ್ಯಾಚುಲರ್​’ ಚಿತ್ರದ ಬಗ್ಗೆ ಅವರು ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.