Vasanthi Nalidaga: ಮತ್ತೊಂದು ವಾರಕ್ಕೆ ಕಾಲಿಟ್ಟ ಯೂಥ್ಫುಲ್ ಚಿತ್ರ ‘ವಾಸಂತಿ ನಲಿದಾಗ’
New Kannada Movie: ‘ವಾಸಂತಿ ನಲಿದಾಗ’ ಸಿನಿಮಾಗೆ ಹೊಸ ನಟ ರೋಹಿತ್ ಶ್ರೀಧರ್ ಹೀರೋ. ಅವರ ಜೊತೆ ಸಾಧು ಕೋಕಿಲ, ಸುಧಾರಾಣಿ, ಸಾಯಿ ಕುಮಾರ್ ಅವರಂತಹ ಅನುಭವಿ ಕಲಾವಿದರು ನಟಿಸಿದ್ದಾರೆ.
ವರ್ಷದ ಈ ಕೊನೇ ತಿಂಗಳಿನಲ್ಲಿ ಹತ್ತು ಹಲವು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ತೆರೆಕಾಣುತ್ತಿವೆ. ಕಳೆದ ವಾರ ಕನ್ನಡದಲ್ಲೇ 10ಕ್ಕೂ ಹೆಚ್ಚು ಸಿನಿಮಾಗಳು (Kannada Movies) ರಿಲೀಸ್ ಆದವು. ಅದರ ಜೊತೆ ಪರಭಾಷೆ ಚಿತ್ರಗಳ ಪೈಪೋಟಿಯೂ ಜೋರಾಗಿದೆ. ಈ ಸಂದರ್ಭದಲ್ಲಿ ಹೊಸ ಕಲಾವಿದರ ಸಿನಿಮಾ ಒಂದು ವಾರ ಪೂರೈಸಿ ಮುನ್ನುಗ್ಗುವುದು ತಮಾಷೆಯೇ ಅಲ್ಲ. ಡಿಸೆಂಬರ್ 2ರಂದು ತೆರೆಕಂಡ ‘ವಾಸಂತಿ ನಲಿದಾಗ’ (Vasanthi Nalidag) ಚಿತ್ರ ಎರಡನೇ ವೀಕೆಂಡ್ನಲ್ಲೂ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಮೂರನೇ ವಾರದಲ್ಲಿ ಇನ್ನಷ್ಟು ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುವ ಭರವಸೆ ಹೊಂದಿದೆ ಈ ಚಿತ್ರತಂಡ. ಈ ಸಿನಿಮಾದಲ್ಲಿನ ಒಂದಷ್ಟು ಅಂಶಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತಿವೆ.
ಚಿತ್ರರಂಗವೆಂದರೆ ಕೇವಲ ಬಿಗ್ ಬಜೆಟ್ ಸಿನಿಮಾಗಳ ಪ್ರಾಬಲ್ಯ ಮಾತ್ರವಲ್ಲ. ಹೊಸಬರ ಪ್ರಯತ್ನಗಳಿಗೂ ಇಲ್ಲಿ ಜಾಗವಿದೆ. ಕಂಟೆಂಟ್ ಇಷ್ಟವಾದರೆ ಜನರು ಇಂಥ ಸಿನಿಮಾಗಳಿಗೆ ಖಂಡಿತಾ ಬೆಂಬಲ ನೀಡುತ್ತಾರೆ. ಏನಾದರೂ ಒಂದಷ್ಟು ಹೊಸತನ ಇದ್ದರೆ ಪ್ಲಸ್ ಪಾಯಿಂಟ್. ಪಕ್ಕಾ ಕಾಲೇಜು ಕಹಾನಿಯನ್ನು ಇಟ್ಟುಕೊಂಡು ಈ ಸಿನಿಮಾ ಮೂಡಿಬಂದಿದೆ. ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಮೊದಲ ಕ್ರಶ್, ಮೊದಲ ಪ್ರೀತಿ, ಎಕ್ಸಾಂ ಟೆನ್ಷನ್, ತರಲೆ-ತಮಾಷೆ ಸೇರಿದಂತೆ ಹತ್ತಾರು ವಿಚಾರಗಳು ಈ ಸಿನಿಮಾದಲ್ಲಿ ಮನರಂಜನೆ ನೀಡುತ್ತಿವೆ.
ಇದನ್ನೂ ಓದಿ: New Movies: ‘ಬಾಂಡ್ ರವಿ’, ‘ವಿಜಯಾನಂದ’ ಜತೆ ರಿಲೀಸ್ ಆಗ್ತಿವೆ ಸಿಕ್ಕಾಪಟ್ಟೆ ಸಿನಿಮಾ; ಈ ವಾರ 18ಕ್ಕೂ ಹೆಚ್ಚು ಚಿತ್ರ
ಬಣ್ಣದ ಲೋಕಕ್ಕೆ ಕಾಲಿಡುವ ಹೊಸಬರಿಗೆ ಹಳೆಯ ಕಲಾವಿದರು ಸಾಥ್ ನೀಡಿದರೆ ಕಲಿಯಲು ಸಾಕಷ್ಟು ವಿಷಯ ಸಿಗುತ್ತದೆ. ‘ವಾಸಂತಿ ನಲಿದಾಗ’ ಸಿನಿಮಾದಲ್ಲಿ ಹೊಸ ನಟ ರೋಹಿತ್ ಶ್ರೀಧರ್ ಹೀರೋ ಆಗಿ ನಟಿಸಿದ್ದಾರೆ. ಅವರ ಜೊತೆ ಸಾಧು ಕೋಕಿಲ, ಸುಧಾರಾಣಿ, ಸಾಯಿ ಕುಮಾರ್ ಅವರಂತಹ ಅನುಭವಿ ಕಲಾವಿದರು ಇದ್ದಾರೆ. ‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂಬ ಕವಿವಾಣಿ ರೀತಿಯೇ ಈ ಸಿನಿಮಾದಲ್ಲಿ ಹಿರಿ-ಕಿರಿಯ ಕಲಾವಿದರ ಸಮಾಗಮ ಆಗಿದೆ.
ಇದನ್ನೂ ಓದಿ: Pankaj Tripathi: ಸೌತ್ ಸಿನಿಮಾ ಒಪ್ಪಿಕೊಳ್ಳದೇ ಇರಲು ಬಹಿರಂಗ ವೇದಿಕೆಯಲ್ಲಿ ಕಾರಣ ತಿಳಿಸಿದ ಪಂಕಜ್ ತ್ರಿಪಾಠಿ
ರೋಹಿತ್ ಶ್ರೀಧರ್, ಸಾಧು ಕೋಕಿಲ, ಭಾವನಾ ಶ್ರೀನಿವಾಸ್, ಜೀವಿತಾ ವಸಿಷ್ಠ, ರಾಘು ರಾಮನಕೊಪ್ಪ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಜೇನುಗೂಡು ಕೆ.ಎನ್. ಶ್ರೀಧರ್ ಬಂಡವಾಳ ಹೂಡಿದ್ದಾರೆ. ರವೀಂದ್ರ ವಂಶಿ ನಿರ್ದೇಶನ, ಶ್ರೀಗುರು ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:09 pm, Sun, 11 December 22