AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gandasi Nagaraj Death: ಜಗ್ಗೇಶ್​ ಅವರ ಆಪ್ತ ವಸ್ತ್ರಾಲಂಕಾರ ಕಲಾವಿದ ಗಂಡಸಿ ನಾಗರಾಜ್​ ನಿಧನ

Gandasi Nagaraj: 40 ವರ್ಷಗಳ ಕಾಲ ಗಂಡಸಿ ನಾಗರಾಜ್​ ಅವರು ಕಾಸ್ಟ್ಯೂಮರ್ ಆಗಿ ಶ್ರಮಿಸಿದ್ದರು. ನಟ ಜಗ್ಗೇಶ್​ ಅವರ ಆಪ್ತ ವಸ್ತ್ರಾಲಂಕಾರ ಕಲಾವಿದನಾಗಿ ಅವರು ಗುರುತಿಸಿಕೊಂಡಿದ್ದರು.

Gandasi Nagaraj Death: ಜಗ್ಗೇಶ್​ ಅವರ ಆಪ್ತ ವಸ್ತ್ರಾಲಂಕಾರ ಕಲಾವಿದ ಗಂಡಸಿ ನಾಗರಾಜ್​ ನಿಧನ
ಗಂಡಸಿ ನಾಗರಾಜ್
TV9 Web
| Edited By: |

Updated on:Dec 12, 2022 | 12:06 PM

Share

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ವಸ್ತ್ರಾಲಂಕಾರ ಕಲಾವಿದನಾಗಿ ಹಾಗೂ ನಟನಾಗಿ ಕೆಲಸ ಮಾಡಿದ್ದ ಗಂಡಸಿ ನಾಗರಾಜ್​ (Gandasi Nagaraj) ಅವರು ನಿಧನರಾಗಿದ್ದಾರೆ. ಭಾನುವಾರ (ಡಿ.11) ರಾತ್ರಿ 10.30ಕ್ಕೆ ಅವರು ಕೊನೆಯುಸಿರು ಎಳೆದರು. ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಅವರು ಚಿತ್ರರಂಗದಲ್ಲಿ ನಟನಾಗುವ ಕನಸು ಕಂಡರು. ಆರಂಭದಲ್ಲಿ ಅವಕಾಶ ಸಿಗದೇ ಇದ್ದಾಗ ಟೈಲರಿಂಗ್​ ಮಾಡಿಕೊಂಡಿದ್ದರು. ನಂತರ ಅವರಿಗೆ ಕಾಸ್ಟ್ಯೂಮರ್​ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಬಳಿಕ 40 ವರ್ಷಗಳ ಕಾಲ ಗಂಡಸಿ ನಾಗರಾಜ್​ ಅವರು ಕಾಸ್ಟ್ಯೂಮರ್ ಆಗಿ ಶ್ರಮಿಸಿದರು. ನಟ ಜಗ್ಗೇಶ್​ ಅವರ ಆಪ್ತ ವಸ್ತ್ರಾಲಂಕಾರ ಕಲಾವಿದನಾಗಿ ಅವರು ಗುರುತಿಸಿಕೊಂಡಿದ್ದರು. ಜಗ್ಗೇಶ್​ (Jaggesh) ನಟನೆಯ 35ಕ್ಕೂ ಅಧಿಕ ಸಿನಿಮಾಗಳಿಗೆ ಗಂಡಸಿ ನಾಗರಾಜ್​ ಕೆಲಸ ಮಾಡಿದ್ದರು.

ಗಂಡಸಿ ನಾಗರಾಜ್​ ಅವರಿಗೆ 57 ವರ್ಷ ವಯಸ್ಸಾಗಿತ್ತು. ಕಳೆದ 5 ವರ್ಷಗಳಿಂದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಹದಗೆಟ್ಟಿತ್ತು. ಚಿಕಿತ್ಸೆ ಫಲಕಾರಿ ಆಗದೇ ಪದ್ಮನಾಭ ನಗರದ ದೇವೇಗೌಡ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಆಪ್ತರು ತಿಳಿಸಿದ್ದಾರೆ. ಇಂದು (ಡಿ.12) ಮಧ್ಯಾಹ್ನ 3.30ರ ಸುಮಾರಿಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ: Stunt Master Death: ಸಿನಿಮಾ ಶೂಟಿಂಗ್​ ವೇಳೆ ಕ್ರೇನ್​ ಅವಘಡ; ಹಿರಿಯ ಸಾಹಸ ನಿರ್ದೇಶಕ ನಿಧನ

ಇದನ್ನೂ ಓದಿ
Image
Rahul Koli Death: ಆಸ್ಕರ್​ಗೆ ಭಾರತದಿಂದ ಆಯ್ಕೆ ಆದ ‘ಚೆಲ್ಲೋ ಶೋ’ ಚಿತ್ರದ ಬಾಲ ನಟ ಕ್ಯಾನ್ಸರ್​ನಿಂದ ನಿಧನ
Image
Breaking News: ಖ್ಯಾತ ನಟ ಅರುಣ್​ ಬಾಲಿ ನಿಧನ; ಹಿರಿಯ ಕಲಾವಿದನ ಅಗಲಿಕೆಗೆ ಕಂಬನಿ ಮಿಡಿದ ಚಿತ್ರರಂಗ
Image
Raju Srivastava Death: ಹಾಸ್ಯ ನಟ ರಾಜು ಶ್ರೀವಾಸ್ತವ​ ನಿಧನ; ಕಡೆಗೂ ಫಲಿಸಲಿಲ್ಲ ಅಭಿಮಾನಿಗಳ ಪ್ರಾರ್ಥನೆ
Image
Pradeep Patwardhan: ಹೃದಯಾಘಾತದಿಂದ ನಟ ಪ್ರದೀಪ್​ ಪಟವರ್ಧನ್​ ನಿಧನ; ಸಂತಾಪ ಸೂಚಿಸಿದ ಮಹಾರಾಷ್ಟ್ರ ಸಿಎಂ

ಕೊವಿಡ್​ನಿಂದಾಗಿ ಗಂಡಸಿ ನಾಗರಾಜ್​ ಅವರ ಮಗಳು ಮೃತಪಟ್ಟಿದ್ದರು. ಪುತ್ರ ಹರೀಶ್​ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಸಹೋದರ ಗಂಡಸಿ ರಾಜು ಕೂಡ ಚಿತ್ರರಂಗದಲ್ಲಿ ಪ್ರೊಡಕ್ಷನ್​ ಮ್ಯಾನೇಜರ್​ ಆಗಿ ಗುರುತಿಸಿಕೊಂಡಿದ್ದಾರೆ. ತರ್ಲೆ ನನ್​ ಮಗ, ಸರ್ವರ್​ ಸೋಮಣ್ಣ, ಸೂಪರ್​ ನನ್ನ ಮಗ, ಭಂಡ ನನ್ನ ಗಂಡ, ಗುಂಡನ ಮದುವೆ, ರಾಯರ ಮಗ, ಹಬ್ಬ, ಶ್ರೀಮಂಜುನಾಥ, ಮದುವೆ, ಮಾತಾಡ್​ ಮಾತಾಡು ಮಲ್ಲಿಗೆ, ಪರ್ವ, ರಾಜಾಹುಲಿ, ಶಿಕಾರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಗಂಡಸಿ ನಾಗರಾಜ್​ ಕಾಸ್ಟ್ಯೂಮ್​ ಡಿಸೈನರ್​ ಆಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ: Veena Kapoor: ಆಸ್ತಿಗಾಗಿ ಹಿರಿಯ ನಟಿಯನ್ನು ಹೊಡೆದು ಕೊಂದ ಮಗ; ಮೃತದೇಹ ನದಿಗೆ ಎಸೆದಿದ್ದು ತನಿಖೆ ವೇಳೆ ಬಹಿರಂಗ

900ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದು ಗಂಡಸಿ ನಾಗರಾಜ್​ ಅವರ ಹೆಚ್ಚುಗಾರಿಕೆ. ಅವರೊಂದಿಗೆ ಕೆಲಸ ಕಲಿತ ಅನೇಕರು ಇಂದು ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ವಸ್ತ್ರ ವಿನ್ಯಾಸ ಮಾಡುವುದರ ಜೊತೆಗೆ ಹಾಸ್ಯ ನಟನಾಗಿಯೂ ಅವರು ಗುರುತಿಸಿಕೊಂಡಿದ್ದರು. ಸಣ್ಣ-ಪುಟ್ಟ ಪಾತ್ರಗಳನ್ನು ಮಾಡಿ ಗಮನ ಸೆಳೆದರು. ಆದರೂ ಪೂರ್ಣ ಪ್ರಮಾಣದಲ್ಲಿ ಹಾಸ್ಯ ಕಲಾವಿದನಾಗಿ ಬೆಳೆಯಲು ಸಾಧ್ಯವಾಗಲಿಲ್ಲ ಎಂಬ ಬೇಸರ ಅವರಲ್ಲಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:36 am, Mon, 12 December 22