AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Veena Kapoor: ಆಸ್ತಿಗಾಗಿ ಹಿರಿಯ ನಟಿಯನ್ನು ಹೊಡೆದು ಕೊಂದ ಮಗ; ಮೃತದೇಹ ನದಿಗೆ ಎಸೆದಿದ್ದು ತನಿಖೆ ವೇಳೆ ಬಹಿರಂಗ

Veena Kapoor Death: ಹತ್ಯೆ ವಿಚಾರವನ್ನು ಸಚಿನ್​ ಕಪೂರ್​ ಬಾಯಿ ಬಿಟ್ಟಿದ್ದಾನೆ. 12 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್​ ಕುರಿತಾಗಿ ಅಮ್ಮನ ಜೊತೆ ಜಗಳ ಆರಂಭ ಆಯಿತು ಎಂದು ಆತ ಹೇಳಿದ್ದಾನೆ.

Veena Kapoor: ಆಸ್ತಿಗಾಗಿ ಹಿರಿಯ ನಟಿಯನ್ನು ಹೊಡೆದು ಕೊಂದ ಮಗ; ಮೃತದೇಹ ನದಿಗೆ ಎಸೆದಿದ್ದು ತನಿಖೆ ವೇಳೆ ಬಹಿರಂಗ
ವೀಣಾ ಕಪೂರ್
TV9 Web
| Edited By: |

Updated on:Dec 11, 2022 | 12:57 PM

Share

ಮುಂಬೈನಲ್ಲಿ ಈ ಭೀಕರ ಘಟನೆ ನಡೆದಿದೆ. ಆಸ್ತಿಗಾಗಿ ಹಿರಿಯ ನಟಿ ವೀಣಾ ಕಪೂರ್ (Actress Veena Kapoor) ಅವರನ್ನು ಸ್ವಂತ ಮಗನೇ ಕೊಲೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಹಿಂದಿ ಸೀರಿಯಲ್​ ಹಾಗೂ ಸಿನಿಮಾಗಳಲ್ಲಿ ನಟಿಸಿ ವೀಣಾ ಕಪೂರ್​ ಜನಪ್ರಿಯತೆ ಪಡೆದಿದ್ದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅವರು ಸ್ವಂತ ಮಗನಿಂದಲೇ ಹತ್ಯೆಗೀಡಾದ (Veena Kapoor Death) ಸುದ್ದಿ ಕೇಳಿ ಹಿಂದಿ ಕಿರುತೆರೆ ಮಂದಿ ಬೆಚ್ಚಿ ಬಿದ್ದಿದ್ದಾರೆ. ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗ ಸಚಿನ್​ ಕಪೂರ್​ (Sachin Kapoor) ಹಾಗೂ ವೀಣಾ ಕಪೂರ್​ ನಡುವೆ ವಾಗ್ವಾದ ಏರ್ಪಟ್ಟಿತ್ತು. ಈ ವೇಳೆ ಪರಿಸ್ಥಿತಿ ಕೈ ಮೀರಿ ತಾಯಿಯ ಹತ್ಯೆ ಮಾಡಿರುವುದಾಗಿ ಸಚಿನ್​ ಕಪೂರ್​ ಒಪ್ಪಿಕೊಂಡಿದ್ದಾನೆ ಎಂದು ವರದಿ ಆಗಿದೆ.

12 ಕೋಟಿ ರೂಪಾಯಿ ಆಸ್ತಿಗಾಗಿ ಜಗಳ:

ವೀಣಾ ಕಪೂರ್​ ಅವರು ನಾಪತ್ತೆ ಆಗಿದ್ದಾರೆ ಎಂದು ಕಲ್ಪತರು ಸೊಸೈಟಿಯ ಭದ್ರತಾ ಸಿಬ್ಬಂದಿಗಳು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಹತ್ಯೆ ವಿಚಾರವನ್ನು ಸಚಿನ್​ ಕಪೂರ್​ ಬಾಯಿ ಬಿಟ್ಟಿದ್ದಾನೆ. 12 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್​ ಕುರಿತಾಗಿ ಅಮ್ಮನ ಜೊತೆ ಜಗಳ ಆರಂಭ ಆಯಿತು ಎಂದು ಆತ ಹೇಳಿದ್ದಾನೆ.

ಇದನ್ನೂ ಓದಿ
Image
ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಮಗ ಅಮಾಯಕನೆಂದು ನಿರೂಪಿಸಲು ತಾಯಿ ತಾನೇ ತನಿಖೆ ನಡೆಸಿ ‘ಕೊಲೆಯಾದವಳನ್ನು’ ಪತ್ತೆಮಾಡಿದಳು!
Image
ನವಲಗುಂದ: ಬೈಕ್​ನಿಂದ ಇಳಿಯುವಾಗ ಕಾಲು ತಗುಲಿದ್ದಕ್ಕೆ ಬರ್ಬರ ಕೊಲೆ; ಆರೋಪಿಗಳು ಅಂದರ್​
Image
Shocking News: ಹಿಂದಿ ಸೀರಿಯಲ್​ ನೋಡಿ ಆತ್ಮಹತ್ಯೆಯ ನಾಟಕವಾಡಿದ ಯುವತಿ; ಆಮೇಲೆ ಬಯಲಾಯ್ತು ಕೊಲೆ ರಹಸ್ಯ!
Image
ಶ್ರದ್ಧಾ ಕೊಲೆ ಕೃತ್ಯ ಬಗ್ಗೆ ಕೇಳಿ ಆಘಾತಕ್ಕೊಳಗಾದೆ ಎಂದು ಪೊಲೀಸರಿಗೆ ಹೇಳಿದ ಅಫ್ತಾಬ್​​ನ ಗರ್ಲ್​​​ಫ್ರೆಂಡ್

ನದಿಗೆ ಶವ ಎಸೆದ ಹಂತಕ:

ವೀಣಾ ಕಪೂರ್​ ಮತ್ತು ಸಚಿನ್​ ಕಪೂರ್​ ನಡುವೆ ಮಾತಿನ ಚಕಮಕಿ ನಡೆದಿತ್ತು. ಸಿಟ್ಟಿನಲ್ಲಿ ಬೇಸ್​ಬಾಲ್​ ಬ್ಯಾಟ್​ನಿಂದ ತಲೆಗೆ ಹೊಡೆದ ಪರಿಣಾಮ ವೀಣಾ ಅವರು ಕೊನೆಯುಸಿರು ಎಳೆದರು. ಬಳಿಕ ಅವರ ಶವನನ್ನು ರಾಯಘಡ ಜಿಲ್ಲೆಯ ನದಿಯೊಂದರಲ್ಲಿ ಎಸೆದು ಬಂದಿದ್ದನ್ನು ಸಚಿನ ಕಪೂರ್​ ಒಪ್ಪಿಕೊಂಡಿದ್ದಾನೆ ಎಂದು ವರದಿ ಆಗಿದೆ.

ಇದನ್ನೂ ಓದಿ: Shocking News: ಹಿಂದಿ ಸೀರಿಯಲ್​ ನೋಡಿ ಆತ್ಮಹತ್ಯೆಯ ನಾಟಕವಾಡಿದ ಯುವತಿ; ಆಮೇಲೆ ಬಯಲಾಯ್ತು ಕೊಲೆ ರಹಸ್ಯ!

ವೀಣಾ ಕಪೂರ್​ ಅವರ ಇನ್ನೋರ್ವ ಪುತ್ರ ಅಮೆರಿಕದಲ್ಲಿ ವಾಸವಾಗಿದ್ದಾರೆ. ಸದ್ಯ ಸಚಿನ್​ ವಿರುದ್ಧ ಐಪಿಸಿ ಸೆಕ್ಷನ್​ 302, 201, 31ರ ಅಡಿಯಲ್ಲಿ ಕೇಸ್​ ದಾಖಲಿಸಲಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ. ಟಿವಿ ನಟಿ ನೀಲೂ ಕೊಹ್ಲಿ ಅವರು ವೀಣಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹಿರಿಯ ನಟಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ಕುಡಿಯಲು ಹಣ ಕೊಡಲಿಲ್ಲವೆಂದು ಪತ್ನಿಯನ್ನು ಅಮಾನುಷವಾಗಿ ಹತ್ಯೆಗೈದ ಪತಿ: ತಂದೆ ಕೃತ್ಯಕ್ಕೆ ಕೈಜೋಡಿಸಿದ ಪಾಪಿ ಮಗ

‘ನಾನು ಮತ್ತು ವೀಣಾ ಅವರು 5 ವರ್ಷ ಜೊತೆಯಾಗಿ ಕೆಲಸ ಮಾಡಿದ್ದೆವು. ಆದರೆ ಕೊರೊನಾ ಬಳಿಕ ನಮ್ಮ ಸಂಪರ್ಕ ತಪ್ಪಿತು. ನಾನು ನನ್ನ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆದೆ. ಅವರು ನಿಧನರಾಗಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ನೀಲೂ ಕೊಹ್ಲಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:57 pm, Sun, 11 December 22

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್