Breaking News: ಖ್ಯಾತ ನಟ ಅರುಣ್ ಬಾಲಿ ನಿಧನ; ಹಿರಿಯ ಕಲಾವಿದನ ಅಗಲಿಕೆಗೆ ಕಂಬನಿ ಮಿಡಿದ ಚಿತ್ರರಂಗ
Arun Bali No More: ಚಿತ್ರರಂಗದಲ್ಲಿ ಅರುಣ್ ಬಾಲಿ ಅವರಿಗೆ ಹಲವು ವರ್ಷಗಳ ಅನುಭವ ಇತ್ತು. ಅನೇಕ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದರು.
ಹಿಂದಿ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಟ ಅರುಣ್ ಬಾಲಿ (Arun Bali) ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಯ (Arun Bali Death) ಸುದ್ದಿ ತಿಳಿದು ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಅರುಣ್ ಬಾಲಿ ಅವರಿಗೆ ಹಲವು ವರ್ಷಗಳ ಅನುಭವ ಇತ್ತು. ಅನೇಕ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದರು. 79ನೇ ವಯಸ್ಸಿಗೆ ಅರುಣ್ ಬಾಲಿ ಇಹಲೋಕ ತ್ಯಜಿಸಿದ್ದಾರೆ. ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಸಿನಿಮಾದಲ್ಲಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅನೇಕ ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಸಂತಾಪದ ನುಡಿಗಳನ್ನು ತಿಳಿಸಲಾಗುತ್ತಿದೆ.
ಮುಂಬೈ ಉಪನಗರದ ತಮ್ಮ ನಿವಾಸದಲ್ಲಿ ಅರುಣ್ ಬಾಲಿ ಅವರು ಶುಕ್ರವಾರ (ಅ.7) ಮುಂಜಾನೆ ಕೊನೆಯುಸಿರು ಎಳೆದರು. 2022ರ ಆರಂಭದಲ್ಲೇ ಅವರಿಗೆ ಅನಾರೋಗ್ಯ ಕಾಡಲು ಆರಂಭಿಸಿತ್ತು. ಪರಿಣಾಮವಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಶಾರುಖ್ ಖಾನ್ ನಟಿಸಿದ್ದ ‘ದೂರ್ಸಾ ಕೇವಲ್’ ಧಾರಾವಾಹಿಯ ಮೂಲಕ ಅರುಣ್ ಬಾಲಿ ಅವರು 1989ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಶಾರುಖ್ ಖಾನ್ರ ಅಂಕಲ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಬಳಿಕ ಅನೇಕ ಸೀರಿಯಲ್ಗಳಲ್ಲಿ ನಟಿಸಿ ಅವರು ಫೇಮಸ್ ಆದರು.
ಅರುಣ್ ಬಾಲಿ ನಟಿಸಿದ ಪ್ರಮುಖ ಸೀರಿಯಲ್ಗಳು:
ದೂರ್ಸಾ ಕೇವಲ್, ಚಾಣಾಕ್ಯ, ಸ್ವಾಭಿಮಾನ್, ದೇಶ್ ಮೇ ನಿಕ್ಲಾ ಹೋಗ ಚಾಂದ್, ಕುಂಕಮ್, ಬಂಧಿ ಯುದ್ಧ್ ಮೇ, ಶಕ್ತಿಮಾನ್ ಮುಂತಾದವು ಅರುಣ್ ಬಾಲಿ ನಟಿಸಿದ ಪ್ರಮುಖ ಧಾರಾವಾಹಿಗಳು.
He had a very charming screen presence and voice full of warmth. May he rest in peace. ??? #ArunBali https://t.co/YhOCX59E7W
— Abhishek Pandey (@AbhiTalkies) October 7, 2022
Actor Arun Bali expired today morning at 4.30 am in Mumbai. May God bless the departed soul.?? ? pic.twitter.com/UQ4eRIdNxx
— Urban Asian (@UrbanAsian) October 7, 2022
ಅರುಣ್ ಬಾಲಿ ನಟಿಸಿದ ಪ್ರಮುಖ ಸಿನಿಮಾಗಳು:
ಸೌಗಂದ್, ರಾಜು ಬನ್ ಗಯಾ ಜಂಟಲ್ಮ್ಯಾನ್, ಖಳನಾಯಕ, ಸತ್ಯ, ಹೇ ರಾಮ್, ಲಗೇ ರಹೋ ಮುನ್ನ ಭಾಯ್, 3 ಈಡಿಯಟ್ಸ್, ರೆಡಿ, ಬರ್ಫಿ, ಮನ್ಮರ್ಜಿಯಾ, ಕೇದಾರ್ನಾಥ್, ಸಾಮ್ರಾಟ್ ಪೃಥ್ವಿರಾಜ್, ಲಾಲ್ ಸಿಂಗ್ ಚಡ್ಡಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಅವರು ಪ್ರೇಕ್ಷಕರನ್ನು ರಂಜಿಸಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:30 am, Fri, 7 October 22