Stunt Master Death: ಸಿನಿಮಾ ಶೂಟಿಂಗ್​ ವೇಳೆ ಕ್ರೇನ್​ ಅವಘಡ; ಹಿರಿಯ ಸಾಹಸ ನಿರ್ದೇಶಕ ನಿಧನ

Viduthalai Movie | Stunt Master Suresh: ದುರ್ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯಾರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂಬುದು ತನಿಖೆ ಬಳಿಕ ಗೊತ್ತಾಗಲಿದೆ.

Stunt Master Death: ಸಿನಿಮಾ ಶೂಟಿಂಗ್​ ವೇಳೆ ಕ್ರೇನ್​ ಅವಘಡ; ಹಿರಿಯ ಸಾಹಸ ನಿರ್ದೇಶಕ ನಿಧನ
ಸ್ಟಂಟ್ ಮಾಸ್ಟರ್ ಸುರೇಶ್
Follow us
| Updated By: ಮದನ್​ ಕುಮಾರ್​

Updated on:Dec 05, 2022 | 11:48 AM

ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಗ್ಯಾರಂಟಿ ಎಂಬುದಕ್ಕೆ ಈಗಾಗಲೇ ಅನೇಕ ನಿದರ್ಶನಗಳಿವೆ. ಅಂಥ ಒಂದು ದುರ್ಘಟನೆ ಈಗ ಮತ್ತೆ ಸಂಭವಿಸಿದೆ. ತಮಿಳು ಸಿನಿಮಾವೊಂದರ (Tamil Cinema) ಶೂಟಿಂಗ್​ ಸಮಯದಲ್ಲಿ ಹಿರಿಯ ಸಾಹಸ ನಿರ್ದೇಶಕರೊಬ್ಬರು ನಿಧನರಾಗಿದ್ದಾರೆ. ಕ್ರೇನ್​ ವೈಫಲ್ಯದಿಂದಾಗಿ ಈ ಘಟನೆ ನಡೆದಿದೆ. 20 ಅಡಿ ಮೇಲಿಂದ ಬಿದ್ದ ಪರಿಣಾಮ ಸ್ಟಂಟ್​ ಮಾಸ್ಟರ್​ ಸಾವು (Stunt Master Death) ಸಂಭವಿಸಿದೆ. ಕಳೆದ ಹಲವಾರು ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಸಾಹಸ ನಿರ್ದೇಶಕರಾಗಿದ್ದ ಸುರೇಶ್​ ಅವರೇ ಮೃತ ದುರ್ದೈವಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅನೇಕರು ಪ್ರಾರ್ಥಿಸುತ್ತಿದ್ದಾರೆ. ಸುರೇಶ್​ (Stunt Master Suresh) ಅವರಿಗೆ 54 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಮಕ್ಕಳನ್ನು ಅವರು ಅಗಲಿದ್ದಾರೆ.

ಶನಿವಾರ (ಡಿ.3) ಮುಂಜಾನೆ 10 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿತು ಎಂದು ವರದಿ ಆಗಿದೆ. ಖ್ಯಾತ ನಿರ್ದೇಶಕ ವೆಟ್ರಿಮಾರನ್​ ಅವರು ‘ವಿದುತಲೈ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಸೂರಿ ಮುಖ್ಯಭೂಮಿಕೆ ನಿಭಾಯಿಸುತ್ತಿರುವ, ವಿಜಯ್​ ಸೇತುಪತಿ ಅತಿಥಿ ಪಾತ್ರ ಮಾಡುತ್ತಿರುವ ಈ ಸಿನಿಮಾದ ಶೂಟಿಂಗ್​ ವಂದಲೂರ್​ ಸಮೀಪ ನಡೆಯುತ್ತಿತ್ತು. ಮುಖ್ಯ ಸಾಹಸ ನಿರ್ದೇಶಕರ ಜೊತೆ ಸುರೇಶ್​ ಕೆಲಸ ಮಾಡುತ್ತಿದ್ದರು. ದೃಶ್ಯವೊಂದರ ಚಿತ್ರೀಕರಣಕ್ಕಾಗಿ ಸ್ಟಂಟ್ಸ್​ ಕಲಾವಿದರಿಗೆ ಹಗ್ಗ ಕಟ್ಟಿ ಕ್ರೇನ್​ಗೆ ನೇತು ಹಾಕಲಾಗಿತ್ತು. ಸುರೇಶ್​ ಅವರು ನಟಿಸುವಾಗ ಹಗ್ಗ ತುಂಡಾಗಿದ್ದರಿಂದ ಅವರು ಕ್ರೇನ್​ನಿಂದ ಕೆಳಗೆ ಬಿದ್ದರು ಎಂದು ತಿಳಿದುಬಂದಿದೆ.

ಕೂಡಲೇ ಸುರೇಶ್​ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಇನ್ನೊರ್ವ ಸ್ಟಂಟ್​ ಕಲಾವಿದನಿಗೆ ತೀವ್ರ ಗಾಯಗಳಾಗಿವೆ. ಕಳೆದ 25 ವರ್ಷಗಳಿಂದ ಸುರೇಶ್​ ಅವರು ಸ್ಟಂಟ್​ ಮಾಸ್ಟರ್​ ಆಗಿದ್ದರು. ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ.

ಇದನ್ನೂ ಓದಿ
Image
‘ನಾನು ಹೆದರಿ ಎಲ್ಲಿಯೂ ಓಡಿ ಹೋಗಿಲ್ಲ’; ವಿಚಾರಣೆ ಬಳಿಕ ನಟ ಅಜಯ್​ ರಾವ್​ ಮಾತು
Image
‘ಲವ್​ ಯೂ ರಚ್ಚು’ ಫೈಟರ್​ ವಿವೇಕ್​ ಸಾವಿಗೆ ಅಸಲಿ ಕಾರಣ ಏನು? ಪ್ರತ್ಯಕ್ಷದರ್ಶಿ ರಂಜಿತ್​ ತೆರೆದಿಟ್ಟ ಸತ್ಯ
Image
Fighter Vivek Death: ‘ಲವ್​ ಯೂ ರಚ್ಚು’ ಚಿತ್ರದ ನಿರ್ದೇಶಕ ಸೇರಿದಂತೆ ಮೂವರಿಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ
Image
Love You Racchu: ಫೈಟರ್​ ವಿವೇಕ್​ ಸಾವು; ನಿರ್ದೇಶಕ ಶಂಕರ್​, ಸಾಹಸ ನಿರ್ದೇಶಕ ವಿನೋದ್​ ಪೊಲೀಸರ ವಶಕ್ಕೆ

ರೈಲು ಅಪಘಾತದ ಶೂಟಿಂಗ್​:

‘ವಿದುತಲೈ’ ಚಿತ್ರದಲ್ಲಿ ಬರುವ ರೈಲು ಅಪಘಾತದ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಅದಕ್ಕಾಗಿ ಬೃಹತ್​ ಸೆಟ್​ ನಿರ್ಮಾಣ ಮಾಡಲಾಗಿತ್ತು. ಹಳಿ ತಪ್ಪಿ ಬಿದ್ದ ರೈಲು ಬೋಗಿಗಳ ಮೇಲೆ ನಟರು ಓಡಿ ಹೋಗುವ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಅದರಲ್ಲಿ ಭಾಗ ವಹಿಸಿದ್ದ ಸುರೇಶ್​ ಅವರು ಈ ಅವಘಡದಿಂದ ಕೊನೆಯುಸಿರು ಎಳೆದರು.

ಈ ದುರ್ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯಾರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂಬುದು ತನಿಖೆ ಬಳಿಕ ಗೊತ್ತಾಗಲಿದೆ. ಸುರೇಶ್​ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅನೇಕರು ಪ್ರಾರ್ಥಿಸುತ್ತಿದ್ದಾರೆ. ಕನ್ನಡದ ‘ಲವ್​ ಯೂ ರಚ್ಚು’, ‘ಮಾಸ್ತಿ ಗುಡಿ’ ಸಿನಿಮಾಗಳ ಶೂಟಿಂಗ್​ ಸಂದರ್ಭದಲ್ಲೂ ಇಂಥ ಕಹಿ ಘಟನೆ ನಡೆದಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:44 am, Mon, 5 December 22