AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rana Daggubati: ವಿಮಾನದಲ್ಲಿ ರಾಣಾ ದಗ್ಗುಬಾಟಿ ಲಗೇಜ್​ ಮಾಯ; ಸಿಟ್ಟಾದ ನಟ ಮಾಡಿದ್ದೇನು?

Rana Daggubati | Indigo: ಸಣ್ಣ-ಪುಟ್ಟ ವ್ಯತ್ಯಯಗಳು ಆಗಿದ್ದರೆ ರಾಣಾ ದಗ್ಗುಬಾಟಿ ಅವರು ಈ ರೀತಿ ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲವೇನೋ. ಆದರೆ ಈ ಬಾರಿ ಅವರ ವಸ್ತುಗಳು ಕಾಣೆ ಆಗಿವೆ.

Rana Daggubati: ವಿಮಾನದಲ್ಲಿ ರಾಣಾ ದಗ್ಗುಬಾಟಿ ಲಗೇಜ್​ ಮಾಯ; ಸಿಟ್ಟಾದ ನಟ ಮಾಡಿದ್ದೇನು?
ರಾಣಾ ದಗ್ಗುಬಾಟಿ
TV9 Web
| Updated By: ಮದನ್​ ಕುಮಾರ್​|

Updated on: Dec 05, 2022 | 1:35 PM

Share

ನಟ ರಾಣಾ ದಗ್ಗುಬಾಟಿ (Rana Daggubati) ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಖಾಸಗಿ ಕೆಲಸಗಳ ಸಲುವಾಗಿ ಅವರು ಆಗಾಗ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ. ಇತ್ತೀಚೆಗೆ ‘ಇಂಡಿಗೋ’ (Indigo Airlines) ವಿಮಾನದಲ್ಲಿ ಪ್ರಯಾಣ ಮಾಡಿದ ಅವರಿಗೆ ಕೆಟ್ಟ ಅನುಭವ ಆಗಿದೆ. ಆ ಬಗ್ಗೆ ಅವರು ಗರಂ ಆಗಿದ್ದಾರೆ. ಪ್ರಯಾಣಿಸುವಾಗ ರಾಣಾ ದಗ್ಗುಬಾಟಿ ಅವರ ಲಗೇಜ್​ ಮಾಯವಾಗಿದೆ. ಈವರೆಗೂ ಅದು ಪತ್ತೆ ಆಗಿಲ್ಲ. ಇದರಿಂದ ಕೋಪಕೊಂಡ ಅವರು ನೇರವಾಗಿ ಟ್ವೀಟ್​ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ತಮಗೆ ಆದ ಕೆಟ್ಟ ಅನುಭವವನ್ನು ಜಗಜ್ಜಾಹೀರು ಮಾಡಿದ್ದಾರೆ. ಇದರಿಂದ ಇಂಡಿಗೋ (Indigo) ಕಂಪನಿಗೆ ಮುಜುಗರ ಆಗಿದೆ. ಈ ಹಿಂದೆ ನಟಿ ಪೂಜಾ ಹೆಗ್ಡೆ ಕೂಡ ಈ ವಿಮಾನಯಾನ ಸಂಸ್ಥೆಯ ಸಿಬ್ಬಂದಿಗಳ ವರ್ತನೆ ವಿರುದ್ಧ ಗುಡುಗಿದ್ದರು.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹೋದಲ್ಲೆಲ್ಲ ರಾಯಲ್​ ಟ್ರೀಟ್​ಮೆಂಟ್​ ಸಿಗುತ್ತದೆ. ಆದರೆ ವಿಮಾನದಲ್ಲಿ ಪ್ರಯಾಣ ಮಾಡುವಾಗ ಅವರಿಗೆ ಹಲವು ಬಾರಿ ಕಿರಿಕಿರಿ ಆದ ಉದಾಹರಣೆ ಇದೆ. ಸಣ್ಣ ಪುಟ್ಟ ವ್ಯತ್ಯಯಗಳು ಆಗಿದ್ದರೆ ರಾಣಾ ದಗ್ಗುಬಾಟಿ ಅವರು ಈ ರೀತಿ ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲವೇನೋ. ಆದರೆ ಈ ಬಾರಿ ಅವರ ವಸ್ತುಗಳು ಕಾಣೆ ಆಗಿವೆ. ಈ ಬಗ್ಗೆ ಸಿಬ್ಬಂದಿಗೆ ಕೇಳಿದರೆ ಅವರಿಗೆ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ. ಲಗೇಜ್​ ಮಿಸ್​ ಆಗಿದ್ದರ ಬಗ್ಗೆ ಸಿಬ್ಬಂದಿಗೆ ಅರಿವೇ ಇಲ್ಲ ಎಂಬುದು ರಾಣಾ ದಗ್ಗುಬಾಟಿ ಅವರ ಕೋಪಕ್ಕೆ ಕಾರಣ ಆಗಿದೆ.

ಇದನ್ನೂ ಓದಿ: ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ಕೆಜಿಎಫ್​’ ಚಿತ್ರವನ್ನು ಹಾಡಿ ಹೊಗಳಿದ ರಾಣಾ ದಗ್ಗುಬಾಟಿ

ಇದನ್ನೂ ಓದಿ
Image
ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ಕೆಜಿಎಫ್​’ ಚಿತ್ರವನ್ನು ಹಾಡಿ ಹೊಗಳಿದ ರಾಣಾ ದಗ್ಗುಬಾಟಿ
Image
ರಾಣಾ ದಗ್ಗುಬಾಟಿ ಆಫೀಸ್​ನಲ್ಲಿ ಅಪ್ಪು​ ಪುತ್ಥಳಿ; ಫೋಟೋ ತೋರಿಸಿ ಹೆಮ್ಮೆಯಿಂದ ಹೇಳಿಕೊಂಡ ನಟ
Image
Rana Daggubati: ದೇವಸ್ಥಾನದಲ್ಲಿ ಸೆಲ್ಫೀ ಕೇಳಲು ಬಂದ ಅಭಿಮಾನಿಯ​ ಮೊಬೈಲ್ ಕಿತ್ತುಕೊಂಡ ನಟ ರಾಣಾ ದಗ್ಗುಬಾಟಿ; ವೈರಲ್ ಆಯ್ತು ವಿಡಿಯೋ
Image
Rana Daggubati: ರಾಣಾ ದಗ್ಗುಬಾಟಿ ಸಂಸಾರದಲ್ಲಿ ಬಿರುಕು? ಎಲ್ಲ ಪೋಸ್ಟ್​ ಡಿಲೀಟ್​ ಮಾಡಿದ ‘ಬಲ್ಲಾಳ ದೇವ’

‘ಇದು ಭಾರತದ ಅತಿ ಕೆಟ್ಟ ವಿಮಾನ ಯಾನ ಅನುಭವ. ಫ್ಲೈಟ್​ ಸಮಯದ ಬಗ್ಗೆ ಮಾಹಿತಿಯೇ ಇಲ್ಲ. ಕಳೆದು ಹೋದ ಲಗೇಜ್​ ಇನ್ನೂ ಸಿಕ್ಕಿಲ್ಲ. ಅದರ ಬಗ್ಗೆ ಸಿಬ್ಬಂದಿಗೆ ಏನೂ ತಿಳಿದಿಲ್ಲ’ ಎಂದು ರಾಣಾ ದಗ್ಗುಬಾಟಿ ಟ್ವೀಟ್​ ಮಾಡಿದ್ದಾರೆ. ಅವರ ಪೋಸ್ಟ್​ಗೆ ‘ಇಂಡಿಗೋ’ ಕಂಪನಿ ಪ್ರತಿಕ್ರಿಯೆ ನೀಡಿದೆ. ‘ನಿಮಗೆ ಉಂಟಾದ ಅನಾನುಕೂಲಕ್ಕೆ ವಿಷಾದಿಸುತ್ತೇವೆ. ಆದಷ್ಟು ಬೇಗ ನಿಮಗೆ ಲಗೇಜ್​ ತಲುಪಿಸಲು ನಮ್ಮ ತಂಡದವರು ಕಾರ್ಯನಿರತರಾಗಿದ್ದಾರೆ’ ಎಂದು ಟ್ವೀಟ್​ ಮಾಡಿದೆ.

ಇದನ್ನೂ ಓದಿ: Rana Daggubati: ರಾಣಾ ದಗ್ಗುಬಾಟಿ ಸಂಸಾರದಲ್ಲಿ ಬಿರುಕು? ಎಲ್ಲ ಪೋಸ್ಟ್​ ಡಿಲೀಟ್​ ಮಾಡಿದ ‘ಬಲ್ಲಾಳ ದೇವ’

‘ಇಂಡಿಗೋ’ ಕಡೆಯಿಂದ ಈ ರೀತಿಯ ಪ್ರತಿಕ್ರಿಯೆ ಬಂದ ಬಳಿಕ ರಾಣಾ ದಗ್ಗುಬಾಟಿ ಅವರು ತಮ್ಮ ಟ್ವೀಟ್​ ಡಿಲೀಟ್​ ಮಾಡಿದ್ದಾರೆ. ಒಟ್ಟಾರೆ ಈ ಘಟನೆ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ‘ರಾಣಾ ದಗ್ಗುಬಾಟಿ ಅವರು ಸೆಲೆಬ್ರಿಟಿ ಎಂಬ ಕಾರಣಕ್ಕೆ ಅವರಿಗೆ ಕೂಡಲೇ ಪ್ರತಿಕ್ರಿಯೆ ನೀಡಲಾಗಿದೆ. ಜನಸಾಮಾನ್ಯರಿಗೂ ಈ ವಿಮಾನಯಾನ ಸಂಸ್ಥೆಯಿಂದ ಹೀಗೆ ತಕ್ಷಣಕ್ಕೆ ರೆಸ್ಪಾನ್ಸ್​ ಸಿಗುತ್ತಾ? ಜನರು ಕೊಟ್ಟ ಹಣಕ್ಕೆ ಬೆಲೆ ಇಲ್ಲವೇ’ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ