Rana Daggubati: ದೇವಸ್ಥಾನದಲ್ಲಿ ಸೆಲ್ಫೀ ಕೇಳಲು ಬಂದ ಅಭಿಮಾನಿಯ​ ಮೊಬೈಲ್ ಕಿತ್ತುಕೊಂಡ ನಟ ರಾಣಾ ದಗ್ಗುಬಾಟಿ; ವೈರಲ್ ಆಯ್ತು ವಿಡಿಯೋ

ಫ್ಯಾನ್ಸ್​ ತಮ್ಮ ಅಭಿಮಾನವನ್ನು ಎಲ್ಲೆಂದರಲ್ಲಿ ವ್ಯಕ್ತಪಡಿಸಲು ಮುಂದಾಗುತ್ತಾರೆ. ಇದರಿಂದ ಸೆಲೆಬ್ರಿಟಿಗಳಿಗೆ ಸಿಟ್ಟು ಬರುತ್ತದೆ. ಈ ವೇಳೆ ಅನೇಕರು ಮೊಬೈಲ್ ಕಿತ್ತುಕೊಂಡ ಉದಾಹರಣೆ ಇದೆ.

Rana Daggubati: ದೇವಸ್ಥಾನದಲ್ಲಿ ಸೆಲ್ಫೀ ಕೇಳಲು ಬಂದ ಅಭಿಮಾನಿಯ​ ಮೊಬೈಲ್ ಕಿತ್ತುಕೊಂಡ ನಟ ರಾಣಾ ದಗ್ಗುಬಾಟಿ; ವೈರಲ್ ಆಯ್ತು ವಿಡಿಯೋ
ರಾಣಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 20, 2022 | 6:30 AM

ನಟ ರಾಣಾ ದಗ್ಗುಬಾಟಿ (Rana Daggubati) ಅವರು ‘ಬಾಹುಬಲಿ’ ಸರಣಿಯ ಚಿತ್ರದಿಂದ ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಂಡರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ರಾಣಾ ನಿರ್ವಹಿಸಿದ ನೆಗೆಟಿವ್​ ಶೇಡ್​ನ ಪಾತ್ರದಿಂದ ಅವರ ಖ್ಯಾತಿ ದುಪ್ಪಟ್ಟಾಯಿತು. ಈ ಕಾರಣದಿಂದಲೂ ಅವರು ಅನೇಕರಿಗೆ ಇಷ್ಟವಾದರು. ‘ಬಾಹುಬಲಿ 2’ (Bahubali 2) ಬಳಿಕ ಹಲವು ಸಿನಿಮಾಗಳಲ್ಲಿ ರಾಣಾ ನಟಿಸಿದ್ದಾರೆ. ಹಲವು ಪಾತ್ರಗಳನ್ನು ಅವರು ಮಾಡಿದ್ದಾರೆ. ಇತ್ತೀಚೆಗೆ ರಾಣಾ ಅವರು ತಿರುಪತಿಗೆ ಭೇಟಿ ನೀಡಿದ್ದರು. ಈ ವೇಳೆ ಸೆಲ್ಫಿ ಕೇಳಲು ಬಂದ ಅಭಿಮಾನಿಯ ಮೊಬೈಲ್​ ಅನ್ನು ಕಸಿದುಕೊಂಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತದೆ.

ಸೆಲೆಬ್ರಿಟಿಗಳು ಕಂಡಾಗ ಫ್ಯಾನ್ಸ್ ಸೆಲ್ಫಿ ತೆಗೆದುಕೊಳ್ಳಲು ಮುಂದೆ ಬರುತ್ತಾರೆ. ಆದರೆ, ಸೆಲೆಬ್ರಿಟಿಗಳ ಮೂಡ್ ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರುವುದಿಲ್ಲ. ಕೆಲ ಸ್ಥಳಗಳಲ್ಲಿ ಸೆಲ್ಫಿ ಕೊಡೋಕೆ ಅವರು ಒಪ್ಪುವುದಿಲ್ಲ. ಆದರೂ ಫ್ಯಾನ್ಸ್​ ತಮ್ಮ ಅಭಿಮಾನವನ್ನು ಎಲ್ಲೆಂದರಲ್ಲಿ ವ್ಯಕ್ತಪಡಿಸಲು ಮುಂದಾಗುತ್ತಾರೆ. ಇದರಿಂದ ಸೆಲೆಬ್ರಿಟಿಗಳಿಗೆ ಸಿಟ್ಟು ಬರುತ್ತದೆ. ಈ ವೇಳೆ ಅನೇಕರು ಮೊಬೈಲ್ ಕಿತ್ತುಕೊಂಡ ಉದಾಹರಣೆ ಇದೆ.

ರಾಣಾ ದಗ್ಗುಬಾಟಿ ಅವರು ಇತ್ತೀಚೆಗೆ ತಿರುಪತಿ ದೇವಾಲಯಕ್ಕೆ ತೆರಳಿದ್ದರು. ಅವರ ಫ್ಯಾಮಿಲಿಯವರು ರಾಣಾಗೆ ಸಾಥ್ ನೀಡಿದ್ದರು. ದೇವಸ್ಥಾನದ ಅಧಿಕಾರಿಗಳ ಜತೆ ರಾಣಾ ನಡೆದು ಬರುತ್ತಿದ್ದರು. ಈ ಸಂದರ್ಭದಲ್ಲಿ ಸೆಲ್ಫಿ ತೆಗೆಯದಂತೆ ಅವರು ಕೋರುತ್ತಿದ್ದರು. ಆದಾಗ್ಯೂ ಅಭಿಮಾನಿಯೋರ್ವ ಸೆಲ್ಫಿ ತೆಗೆದುಕೊಳ್ಳಲು ಮುಂದೆ ಬಂದಿದ್ದ. ಈ ವೇಳೆ ಮೊಬೈಲ್​ಅನ್ನು ಕಿತ್ತುಕೊಂಡಿದ್ದಾರೆ ರಾಣಾ.

ಇದನ್ನೂ ಓದಿ
Image
Rana Daggubati: ರಾಣಾ ದಗ್ಗುಬಾಟಿ ಸಂಸಾರದಲ್ಲಿ ಬಿರುಕು? ಎಲ್ಲ ಪೋಸ್ಟ್​ ಡಿಲೀಟ್​ ಮಾಡಿದ ‘ಬಲ್ಲಾಳ ದೇವ’
Image
ಶಾರುಖ್ ಖಾನ್ ಚಿತ್ರದಿಂದ ಹೊರ ನಡೆದ ರಾಣಾ ದಗ್ಗುಬಾಟಿ; ವಿಜಯ್ ಸೇತುಪತಿಗೆ ಸಿಕ್ತು ಚಾನ್ಸ್
Image
‘ಗರುಡ ಗಮನ..’ ಚಿತ್ರಕ್ಕೆ ರಾಣಾ ದಗ್ಗುಬಾಟಿ ಫಿದಾ; ಕನ್ನಡ ಸಿನಿಮಾ ಬಗ್ಗೆ ಒಂದೇ ಮಾತಲ್ಲಿ ಅವರು ಹೇಳಿದ್ದೇನು?
Image
Rana Daggubati: ರಾಣಾ ದಗ್ಗುಬಾಟಿ ಕುರಿತ ಈ ಸಂಗತಿಗಳು ಬಹುತೇಕರಿಗೆ ತಿಳಿದೇ ಇಲ್ಲ!; ಇಲ್ಲಿದೆ ಕುತೂಹಲಕರ ಮಾಹಿತಿ

ರಾಣಾ ರಿಯಾಕ್ಷನ್ ನೋಡಿ ಅಭಿಮಾನಿ ಕಂಗಾಲಾಗಿದ್ದಾನೆ. ಮರುಕ್ಷಣವೇ ಮೊಬೈಲ್​ ಅನ್ನು ರಾಣಾ ಹಿಂದಿರುಗಿಸಿದ್ದಾರೆ. ಜತೆಗೆ ‘ದೇವಸ್ಥಾನದಲ್ಲಿ ಸೆಲ್ಫಿ ತೆಗೆಯಬಾರದು’ ಎಂದು ಹೇಳಿ ನಕ್ಕಿದ್ದಾರೆ ರಾಣಾ. ನಟನ ಮುಖದಲ್ಲಿ ನಗು ನೋಡಿ ಅಭಿಮಾನಿ ನಿಟ್ಟುಸಿರು ಬಿಟ್ಟಿದ್ದಾನೆ.

ಇದನ್ನೂ ಓದಿ:  ರಾಣಾ ದಗ್ಗುಬಾಟಿ ಸಂಸಾರದಲ್ಲಿ ಬಿರುಕು? ಎಲ್ಲ ಪೋಸ್ಟ್​ ಡಿಲೀಟ್​ ಮಾಡಿದ ‘ಬಲ್ಲಾಳ ದೇವ’

ರಾಣಾ ನಟನೆಯ ‘ವಿರಾಟಪರ್ವಂ’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸೋಕೆ ವಿಫಲವಾಯಿತು. ಸಾಯಿ ಪಲ್ಲವಿ ಈ ಚಿತ್ರಕ್ಕೆ ನಾಯಕಿ ಆಗಿದ್ದರು. ಈ ಚಿತ್ರ ಒಟಿಟಿಯಲ್ಲಿ ಅಬ್ಬರಿಸಿದೆ. ಇತ್ತೀಚೆಗೆ ‘ಕಬ್ಜ’ ಸಿನಿಮಾದ ಟೀಸರ್ ಲಾಂಚ್ ಮಾಡಲು ಅವರು ಬೆಂಗಳೂರಿಗೆ ಬಂದಿದ್ದರು. ಟೀಸರ್ ನೋಡಿ ರಾಣಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ