‘ಡಾನ್ 3’ನಲ್ಲಿ ಸೆಲೆಬ್ರಿಟಿಗಳ ದಂಡು; ಶಾರುಖ್ ಜತೆ ನಟಿಸಲಿದ್ದಾರೆ ರಣವೀರ್, ಅಮಿತಾಭ್?
ಅಮಿತಾಭ್ ಬಚ್ಚನ್ ಅವರ ಪಾತ್ರ ಹೇಗಿರಲಿದೆ ಎಂಬುದು ರಿವೀಲ್ ಆಗಿಲ್ಲ. ಮೂಲಗಳ ಪ್ರಕಾರ ರಣವೀರ್ ಸಿಂಗ್ ಕೂಡ ಡಾನ್ ಪಾತ್ರದಲ್ಲಿ ಮಿಂಚಲಿದ್ದಾರೆ. ಶಾರುಖ್ ಹಾಗೂ ರಣವೀರ್ ಪಾತ್ರಗಳ ಮಧ್ಯೆ ಫೈಟ್ ನಡೆಯಲಿದೆ ಎನ್ನಲಾಗುತ್ತಿದೆ.
‘ಡಾನ್’ (Don Movie) ಸರಣಿಯ ಎರಡು ಚಿತ್ರಗಳು ಸೂಪರ್ ಹಿಟ್ ಆಗಿವೆ. ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್’ ಹಾಗೂ ‘ಡಾನ್ 2’ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದವು. ‘ಡಾನ್’ ಸರಣಿಯಲ್ಲಿ ಮತ್ತೊಂದು ಸಿನಿಮಾ ಸಿದ್ಧವಾಗಲಿದೆ ಎನ್ನುವ ಸುದ್ದಿ ಈ ಮೊದಲಿನಿಂದಲೇ ಚಾಲ್ತಿಯಲ್ಲಿದೆ. ಆದರೆ, ಈವರೆಗೆ ಅದು ನಿಜವಾಗಿಲ್ಲ. ಫರ್ಹಾನ್ ಅಖ್ತರ್ ಕಡೆಯಿಂದಲೂ ಈ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಹೀಗಿರುವಾಗಲೇ ಸಿನಿಮಾ ಬಗ್ಗೆ ಸಾಕಷ್ಟು ಸುದ್ದಿ ಹುಟ್ಟಿಕೊಂಡಿದೆ. ಈಗ ಒಂದು ಲೇಟೆಸ್ಟ್ ಸುದ್ದಿ ಹರಿದಾಡಿದೆ. ‘ಡಾನ್ 3’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ರಣವೀರ್ ಸಿಂಗ್ (Ranveer Singh) ಕೂಡ ನಟಿಸಲಿದ್ದಾರಂತೆ! ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
1978ರಲ್ಲಿ ಮೂಲ ‘ಡಾನ್’ ಸಿನಿಮಾ ತೆರೆಗೆ ಬಂತು. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದರು. ಈ ಚಿತ್ರದಲ್ಲಿ ಒಳ್ಳೆಯ ಗುಣ ಹೊಂದಿರುವ ವಿಜಯ್ ಬದುಕಿದರೆ ಡಾನ್ ಸಾಯುತ್ತಾನೆ. ಇದೇ ಹೆಸರಲ್ಲಿ ಫರ್ಹಾನ್ ಅಖ್ತರ್ ‘ಡಾನ್’ ಸಿನಿಮಾ ಮಾಡಿದರು. ಶಾರುಖ್ ಖಾನ್ ಅವರು ಡಾನ್ ಆಗಿ ಮಿಂಚಿದ್ದರು. ಅವರ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಈಗ ‘ಡಾನ್ 3’ ಚಿತ್ರದಲ್ಲಿ ಅಮಿತಾಭ್ ಹಾಗೂ ರಣವೀರ್ ಸಿಂಗ್ ಕೂಡ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಅಮಿತಾಭ್ ಬಚ್ಚನ್ ಅವರ ಪಾತ್ರ ಹೇಗಿರಲಿದೆ ಎಂಬುದು ರಿವೀಲ್ ಆಗಿಲ್ಲ. ಮೂಲಗಳ ಪ್ರಕಾರ ರಣವೀರ್ ಸಿಂಗ್ ಕೂಡ ಡಾನ್ ಪಾತ್ರದಲ್ಲಿ ಮಿಂಚಲಿದ್ದಾರೆ. ಶಾರುಖ್ ಹಾಗೂ ರಣವೀರ್ ಪಾತ್ರಗಳ ಮಧ್ಯೆ ಫೈಟ್ ನಡೆಯಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಈವರೆಗೆ ‘ಡಾನ್ 3’ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಶಾರುಖ್ ಖಾನ್ ಸದ್ಯ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜತೆಗೆ ಕೆಲ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಕೆಲ ವರ್ಷ ಅವರ ಕಾಲ್ಶೀಟ್ ಸಿಗೋದು ಅನುಮಾನ. ಫರ್ಹಾನ್ ಕೂಡ ಸದ್ಯ ಸ್ಕ್ರಿಪ್ಟ್ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಎಲ್ಲಾ ಕಾರಣದಿಂದ ಈ ಸಿನಿಮಾ ಸೆಟ್ಟೇರಲು ಮತ್ತಷ್ಟು ಸಮಯ ತೆಗೆದುಕೊಳ್ಳಬಹುದು.
ಇದನ್ನೂ ಓದಿ: ‘ಮಗನೇ ಆ ಶರ್ಟ್ ನನ್ನದು’; ಆರ್ಯನ್ ಖಾನ್ ಹೊಸ ಪೋಸ್ಟ್ಗೆ ಕಮೆಂಟ್ ಹಾಕಿ ಕಾಲೆಳೆದ ಶಾರುಖ್
ಪ್ರಿಯಾಂಕಾ ಚೋಪ್ರಾ ಅವರು ಡಾನ್ ಸರಣಿಯಲ್ಲಿ ಪೊಲೀಸ್ ಆಗಿ ಮಿಂಚಿದ್ದರು. ಆದರೆ, ಈಗ ಅವರು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಹಾಲಿವುಡ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಕಾರಣದಿಂದ ಅವರು ಮತ್ತೆ ‘ಡಾನ್’ ಸಿನಿಮಾದಲ್ಲಿ ನಟಿಸೋದು ಅನುಮಾನ ಎನ್ನಲಾಗುತ್ತಿದೆ.