AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranbir Kapoor: 650 ಕೋಟಿ ರೂ. ಬಜೆಟ್​ನಲ್ಲಿ ಸಿದ್ಧವಾಯ್ತಾ ‘ಬ್ರಹ್ಮಾಸ್ತ್ರ’? ಲಾಸ್​ ಎಂದವರಿಗೆ ರಣಬೀರ್​ ಕೊಟ್ರು ಉತ್ತರ

Brahmastra Box Office Collection: ‘ಬ್ರಹ್ಮಾಸ್ತ್ರ’ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಲೆಕ್ಕಾಚಾರ ಸುಳ್ಳು ಎಂದು ಒಂದಷ್ಟು ಮಂದಿ ವಾದಿಸುತ್ತಿದ್ದಾರೆ. ಬಜೆಟ್​ ಬಗ್ಗೆಯೂ ಸಖತ್​ ಚರ್ಚೆ ಆಗುತ್ತಿದೆ.

Ranbir Kapoor: 650 ಕೋಟಿ ರೂ. ಬಜೆಟ್​ನಲ್ಲಿ ಸಿದ್ಧವಾಯ್ತಾ ‘ಬ್ರಹ್ಮಾಸ್ತ್ರ’? ಲಾಸ್​ ಎಂದವರಿಗೆ ರಣಬೀರ್​ ಕೊಟ್ರು ಉತ್ತರ
ರಣಬೀರ್ ಕಪೂರ್
TV9 Web
| Edited By: |

Updated on: Sep 19, 2022 | 11:25 AM

Share

2022ರ ವರ್ಷದಲ್ಲಿ ಬಾಲಿವುಡ್​ ಸಿನಿಮಾಗಳು ಗೆದ್ದಿದ್ದು ತುಂಬ ಕಡಿಮೆ. ಸಾಲು ಸಾಲು ಸೋಲಿನ ನಡುವೆ ಗೆದ್ದ ಚಿತ್ರಗಳ ಸಂಖ್ಯೆ ತುಂಬ ವಿರಳ. ಪ್ರೇಕ್ಷಕರು ಕೃಪೆ ತೋರಿದ್ದರಿಂದ ಈಗ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾ ನೂರಾರು ಕೋಟಿ ರೂಪಾಯಿ ಕಲೆಕ್ಷನ್​ (Box Office Collection) ಮಾಡಿದೆ. ಆದರೆ ಈ ಗಳಿಕೆ ಬಗ್ಗೆ ಕೆಲವರಿಗೆ ಅನುಮಾನ ಇದೆ. ಇನ್ನು, ಚಿತ್ರದ ಬಜೆಟ್​ ಬಗ್ಗೆಯೂ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿವೆ. ಸಿನಿಮಾದ ಬಜೆಟ್​ ಬರೋಬ್ಬರಿ 650 ಕೋಟಿ ರೂಪಾಯಿ ಆಗಿರುವಾಗ ಈ ಚಿತ್ರವನ್ನು ಹಿಟ್​ ಎಂದು ಕರೆಯಲು ಹೇಗೆ ಸಾಧ್ಯ ಎಂದು ಕಂಗನಾ ರಣಾವತ್​ ಪ್ರಶ್ನಿಸಿದ್ದಾರೆ. ಅದಕ್ಕೆ ರಣಬೀರ್​ ಕಪೂರ್ (Ranbir Kapoor) ತಿರುಗೇಟು ನೀಡಿದ್ದಾರೆ.

‘ಬ್ರಹ್ಮಾಸ್ತ್ರ’ ಕಥೆ ಮೂರು ಪಾರ್ಟ್​ಗಳಲ್ಲಿ ಬರುತ್ತಿದೆ. ಈಗ ಬಿಡುಗಡೆ ಆಗಿರುವುದು ಮೊದಲ ಪಾರ್ಟ್​ ಮಾತ್ರ. ಏನೇ ಬಜೆಟ್​ ಹಾಕಿದ್ದರೂ ಕೂಡ ಅದು ಮೂರೂ ಪಾರ್ಟ್​ಗೆ ಹಂಚಿಕೆ ಆಗಲಿದೆ. ಮೊದಲ ಪಾರ್ಟ್​ ಸಲುವಾಗಿ ನಿರ್ಮಿಸಿದ ಸೆಟ್​ಗಳು, ಖರೀದಿಸಿದ ಪ್ರಾಪರ್ಟಿಗಳು, ಸಿದ್ಧಪಡಿಸಿರುವ ವಿಎಫ್​ಎಕ್ಸ್ ದೃಶ್ಯಗಳು ಇನ್ನುಳಿದ ಪಾರ್ಟ್​​ಗಳಿಗೂ ಬಳಕೆ ಆಗಲಿವೆ. ಇದರಿಂದ ಚಿತ್ರತಂಡಕ್ಕೆ ಹೆಚ್ಚಿನ ಹೊರೆ ಆಗುವುದಿಲ್ಲ ಎಂಬುದು ರಣಬೀರ್​ ಕಪೂರ್​ ಅವರ ಮಾತು.

ಅಯಾನ್​ ಮುಖರ್ಜಿ ಅವರು ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅವರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. ಕಳಪೆ ಗ್ರಾಫಿಕ್ಸ್ ಇದೆ ಎಂಬ ಆರೋಪದ ನಡುವೆಯೂ ಈ ಸಿನಿಮಾ ಉತ್ತಮ ಕೆಲಕ್ಷನ್​ ಮಾಡಿದೆ. ಕಥೆ ಚೆನ್ನಾಗಿಲ್ಲ ಎಂಬ ನೆಗೆಟಿವ್​ ವಿಮರ್ಶೆ ಸಿಕ್ಕ ಹೊರತಾಗಿಯೂ ಜನರು ಈ ಸಿನಿಮಾವನ್ನು ಮುಗಿಬಿದ್ದು ನೋಡಿದ್ದಾರೆ. ಈ ಎಲ್ಲ ಕಾರಣದಿಂದಾಗಿ ‘ಬ್ರಹ್ಮಾಸ್ತ್ರ’ ಸಿನಿಮಾ ಸೂಪರ್​ ಹಿಟ್​ ಆಗಿದೆ.

ಇದನ್ನೂ ಓದಿ
Image
ಬೈಕಾಟ್ ಟ್ರೆಂಡ್​ಗೆ ಸೆಡ್ಡು ಹೊಡೆದ ‘ಬ್ರಹ್ಮಾಸ್ತ್ರ’; ಬಾಕ್ಸ್ ಆಫೀಸ್ ಉಡೀಸ್​ ಮಾಡಿದ ರಣಬೀರ್​-ಆಲಿಯಾ ಚಿತ್ರ
Image
‘ಇದು ಎಕ್ಸ್​​ಟ್ರಾ ಬಜೆಟ್​​ನ ನಾಗಿಣಿ ಧಾರಾವಾಹಿ’; ‘ಬ್ರಹ್ಮಾಸ್ತ್ರ’ ಸಿನಿಮಾ ನೋಡಿದವರು ಹೀಗಂದ್ರು
Image
KRK ಬಂಧನಕ್ಕೆ ‘ಬ್ರಹ್ಮಾಸ್ತ್ರ’ ಟೀಮ್​ ಕಾರಣ ಎಂದು ಆರೋಪಿಸಿದ ನೆಟ್ಟಿಗರು; ಏನಿದು ಹುನ್ನಾರ?
Image
ಸೆ.9ಕ್ಕೆ ‘ಲಕ್ಕಿ ಮ್ಯಾನ್​’ ವರ್ಸಸ್​ ‘ಬ್ರಹ್ಮಾಸ್ತ್ರ’: ಬುಕ್​ ಮೈ ಶೋನಲ್ಲಿ ಹೇಗಿದೆ ಬಲಾಬಲ?

ಈ ವರ್ಷ ಏಪ್ರಿಲ್​ ತಿಂಗಳಲ್ಲಿ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಮದುವೆ ನೆರವೇರಿತು. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಅವರು ಹಸೆಮಣೆ ಏರಿದರು. ಅವರಿಬ್ಬರು ಮೊದಲ ಬಾರಿಗೆ ಜೊತೆಯಾಗಿ ನಟಿಸಿದ ಸಿನಿಮಾ ‘ಬ್ರಹ್ಮಾಸ್ತ್ರ’. ಈ ಕ್ಯೂಟ್​ ಜೋಡಿಯನ್ನು ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.

‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​, ನಾಗಾರ್ಜುನ ಮುಂತಾದವರು ನಟಿಸಿದ್ದಾರೆ. ಶಾರುಖ್​ ಖಾನ್​ ಅವರ ಅತಿಥಿ ಪಾತ್ರದಿಂದಾಗಿ ಚಿತ್ರದ ಮೆರುಗು ಹೆಚ್ಚಿದೆ. ವಿದೇಶದಲ್ಲೂ ಈ ಸಿನಿಮಾಗೆ ಉತ್ತಮ ಕಲೆಕ್ಷನ್​ ಆಗಿದೆ. ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದೆಲ್ಲದರ ನಡುವೆ ‘ಬ್ರಹ್ಮಾಸ್ತ್ರ’ ಬಾಕ್ಸ್​ ಆಫೀಸ್​ ಕಲೆಕ್ಷನ್​ ಲೆಕ್ಕಾಚಾರ ಸುಳ್ಳು ಎಂದು ಒಂದಷ್ಟು ಮಂದಿ ವಾದಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!