AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿಗೆ ‘ಭಾಯ್’​ ಅಂತ ಕರೆದ ಸಲ್ಲು; ರಜೆ ಹಾಕಿ ಎಂಜಾಯ್​ ಮಾಡಿ ಎಂದ ಶಾರುಖ್​ ಖಾನ್​

Narendra Modi: ಚಿತ್ರರಂಗದ ಅನೇಕ ಸೆಲೆಬ್ರಿಟಿಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳ ಸಂದೇಶ ಹರಿದು ಬಂದಿದೆ. ಎಲ್ಲರೂ ಬಗೆಬಗೆಯಲ್ಲಿ ವಿಶ್​ ಮಾಡಿದ್ದಾರೆ.

ಮೋದಿಗೆ ‘ಭಾಯ್’​ ಅಂತ ಕರೆದ ಸಲ್ಲು; ರಜೆ ಹಾಕಿ ಎಂಜಾಯ್​ ಮಾಡಿ ಎಂದ ಶಾರುಖ್​ ಖಾನ್​
ಸಲ್ಮಾನ್ ಖಾನ್, ನರೇಂದ್ರ ಮೋದಿ, ಶಾರುಖ್ ಖಾನ್
TV9 Web
| Updated By: ಮದನ್​ ಕುಮಾರ್​|

Updated on:Sep 17, 2022 | 10:26 PM

Share

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇಂದು (ಸೆ.17) ಅವರ ಜನ್ಮದಿನವನ್ನು (Narendra Modi Birthday) ಎಲ್ಲೆಡೆ ಆಚರಿಸಲಾಗಿದೆ. ದೇಶದ ಅಸಂಖ್ಯಾತ ಜನರು ಮೋದಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ವಿವಿಧ ಕ್ಷೇತ್ರಗಳ ಗಣ್ಯರಿಂದಲೂ ಬರ್ತ್​ಡೇ ವಿಶ್​ ಹರಿದುಬಂದಿದೆ. ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಪ್ರಧಾನಿ ಜನ್ಮದಿನಕ್ಕೆ ಶುಭಾಶಯ ತಿಳಿಸಿದ್ದಾರೆ. ಅಕ್ಷಯ್​ ಕುಮಾರ್​, ಸಲ್ಮಾನ್​ ಖಾನ್ (Salman Khan), ಅಜಯ್​ ದೇವಗನ್​, ಅನಿಲ್​ ಕಪೂರ್​ ಸೇರಿದಂತೆ ಅನೇಕ ಸ್ಟಾರ್​ ನಟರು ಸೋಶಿಯಲ್​ ಮೀಡಿಯಾದ ಮೂಲಕ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ಅವರ ಪೈಕಿ ಸಲ್ಮಾನ್​ ಖಾನ್​ ಮತ್ತು ಶಾರುಖ್​ ಖಾನ್​ (Shah Rukh Khan) ಅವರು ಪೋಸ್ಟ್​ ಮಾಡಿರುವ ರೀತಿ ಗಮನ ಸೆಳೆಯುತ್ತಿದೆ.

ಒಂದು ದಿನವೂ ಬಿಡುವಿಲ್ಲದೇ ನರೇಂದ್ರ ಮೋದಿ ಅವರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರು ರಜೆ ತಗೊಂಡು ಹುಟ್ಟುಹಬ್ಬದ ದಿನ ಆರಾಮಾಗಿ ಇರಲಿ ಎಂದು ಶಾರುಖ್​ ಖಾನ್​ ಆಶಿಸಿದ್ದಾರೆ. ‘ದೇಶ ಮತ್ತು ಜನರ ಕಲ್ಯಾಣಕ್ಕಾಗಿ ನಿಮಗೆ ಇರುವ ಬದ್ಧತೆ ಮೆಚ್ಚುವಂಥದ್ದು. ನಿಮ್ಮ ಎಲ್ಲ ಗುರಿಗಳನ್ನು ಸಾಧಿಸಲು ದೇವರು ಶಕ್ತಿ ಮತ್ತು ಆರೋಗ್ಯ ನೀಡಲಿ. ಒಂದು ದಿನ ರಜೆ ತಗೊಂಡು ಬರ್ತ್​ಡೇ ಎಂಜಾಯ್​ ಮಾಡಿ ಸರ್​’ ಎಂದು ಶಾರುಖ್​ ಖಾನ್​ ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ
Image
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಕನ್ನಡದಲ್ಲೇ ಶುಭಕೋರಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್
Image
Narendra Modi Birthday: ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಲೈಫ್​ಸ್ಟೈಲ್​ ಮತ್ತು ವಿಶೇಷ ಲುಕ್ಸ್ ಹೇಗಿದೆ ನೋಡಿ
Image
PM Modi Birthday: ಇಂದು ಪ್ರಧಾನಿ ನರೇಂದ್ರ ಮೋದಿ 72ನೇ ಜನ್ಮದಿನ; ದೇಶಾದ್ಯಂತ ಬಿಜೆಪಿಯಿಂದ ವಿವಿಧತೆಯಲ್ಲಿ ಏಕತೆ, ರಕ್ತದಾನ, ಸ್ವಚ್ಛತಾ ಅಭಿಯಾನ ಆಯೋಜನೆ
Image
Ganeshotsav: ಕುಮಟಾದಲ್ಲಿ ಗಣಪತಿ ವಿಸರ್ಜನೆ ವೇಳೆ ಥೇಟ್​ ಪ್ರಧಾನಿ ನರೇಂದ್ರ ಮೋದಿಯಂತೆ ಕಾಣಿಸಿಕೊಂಡ ವ್ಯಕ್ತಿ!

ಸಲ್ಮಾನ್​ ಖಾನ್​ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಭಾಯ್​ ಎಂದು ಕರೆಯುತ್ತಾರೆ. ಆದರೆ ಈಗ ಸ್ವತಃ ಸಲ್ಮಾನ್​ ಖಾನ್​ ಅವರು ನರೇಂದ್ರ ಮೋದಿ ಅವರಿಗೆ ಭಾಯ್​ ಎಂದು ಕರೆದಿದ್ದಾರೆ! ‘ನಮ್ಮ ಗೌರವಾನ್ವಿತ ನರೇಂದ್ರ ಭಾಯ್​ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಸಲ್ಮಾನ್​ ಖಾನ್​ ಪೋಸ್ಟ್​ ಮಾಡಿದ್ದಾರೆ.

ನರೇಂದ್ರ ಮೋದಿ ಜೊತೆ ಕುಳಿತು ಮಾತನಾಡುತ್ತಿರುವ ಫೋಟೋವನ್ನು ಅಕ್ಷಯ್​ ಕುಮಾರ್ ಅವರು ಹಂಚಿಕೊಂಡಿದ್ದಾರೆ. ‘ನಿಮ್ಮ ಅನೇಕ ಗುಣಗಳು ಸ್ಫೂರ್ತಿದಾಯಕ ಆಗಿವೆ. ಆರೋಗ್ಯಯುತ, ಸಂತಸಭರಿತ ಮತ್ತು ಯಶಸ್ಸಿನ ವರ್ಷ ನಿಮ್ಮದಾಗಲಿ’ ಎಂದು ಅವರು ಹಾರೈಸಿದ್ದಾರೆ. ಈ ಫೋಟೋ ಸಖತ್​ ವೈರಲ್​ ಆಗಿದೆ. ಅನಿಲ್​ ಕಪೂರ್​ ಕೂಡ ಮೋದಿ ಜೊತೆ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಹಿರಿಯ ನಟ ಅನುಪಮ್​ ಖೇರ್​, ಖ್ಯಾತ ನಟಿ ಕಂಗನಾ ರಣಾವತ್​ ಅವರು ಮೊದಲಿನಿಂದಲೂ ಮೋದಿ ಕೆಲಸಗಳನ್ನು ಮೆಚ್ಚುತ್ತಲೇ ಬಂದಿದ್ದಾರೆ. ಅವರು ಕೂಡ ಸೋಶಿಯಲ್​ ಮೀಡಿಯಾ ಮೂಲಕ ಶುಭಕೋರಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:26 pm, Sat, 17 September 22