Rana Daggubati: ರಾಣಾ ದಗ್ಗುಬಾಟಿ ಕುರಿತ ಈ ಸಂಗತಿಗಳು ಬಹುತೇಕರಿಗೆ ತಿಳಿದೇ ಇಲ್ಲ!; ಇಲ್ಲಿದೆ ಕುತೂಹಲಕರ ಮಾಹಿತಿ

Happy Birthday Rana Daggubati: ರಾಣಾ ದಗ್ಗುಬಾಟಿ ಇಂದು (ಡಿಸೆಂಬರ್ 14) 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಕುರಿತ ಅಪರೂಪದ ಸಂಗತಿಗಳು ಇಲ್ಲಿವೆ.

Rana Daggubati: ರಾಣಾ ದಗ್ಗುಬಾಟಿ ಕುರಿತ ಈ ಸಂಗತಿಗಳು ಬಹುತೇಕರಿಗೆ ತಿಳಿದೇ ಇಲ್ಲ!; ಇಲ್ಲಿದೆ ಕುತೂಹಲಕರ ಮಾಹಿತಿ
‘ಬಾಹುಬಲಿ’ ಚಿತ್ರದಲ್ಲಿ ರಾಣಾ ದಗ್ಗುಬಾಟಿ
Follow us
TV9 Web
| Updated By: shivaprasad.hs

Updated on: Dec 14, 2021 | 12:25 PM

ಖ್ಯಾತ ಟಾಲಿವುಡ್ ನಟ ರಾಣಾ ದಗ್ಗುಬಾಟಿಗೆ (Rana Daggubati) ಇಂದು ಜನ್ಮದಿನದ ಸಂಭ್ರಮ. 1984ರ ಡಿಸೆಂಬರ್ 14ರಂದು ಜನಿಸಿದ ರಾಣಾ, ಇಂದು 37ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ಸಕ್ರಿಯರಾಗಿರುವ ರಾಣಾ ದಗ್ಗುಬಾಟಿ, ವೃತ್ತಿ ಜೀವನವನ್ನು ಆರಂಭಿಸಿದ್ದು 2010ರಲ್ಲಿ ತೆರೆಕಂಡ ‘ರೈಡರ್’ (Rider) ಚಿತ್ರದ ಮೂಲಕ. ಆ ಚಿತ್ರದಲ್ಲಿನ ನಟನೆಗಾಗಿ ದಕ್ಷಿಣದ ಫಿಲ್ಮ್​ಫೇರ್ (Filmfare Award) ಪ್ರಶಸ್ತಿಯೂ ಅವರಿಗೆ ಲಭಿಸಿತು. 2011ರಲ್ಲಿ ತೆರೆಗೆ ಬಂದ ‘ದಮ್ ಮಾರೋ ದಮ್’ ಚಿತ್ರದ ಮೂಲಕ ಅವರು ಬಾಲಿವುಡ್​ಗೆ ಪದಾರ್ಪಣೆ ಮಾಡಿದರು. ರಾಜಮೌಳಿ (Rajamouli) ನಿರ್ದೇಶನದ ‘ಬಾಹುಬಲಿ’ (Bahubali) ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಚಿತ್ರ. ರಾಣಾ ದಗ್ಗುಬಾಟಿಯವರ ಕುರಿತು ಹಲವರಿಗೆ ತಿಳಿದಿಲ್ಲದ ಅಪರೂಪದ ಸಂಗತಿಗಳು ಇಲ್ಲಿವೆ.

1. ರಾಣಾ ದಗ್ಗುಬಾಟಿಯವರಿಗೆ ಬಲಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಇದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದರು. ಅಲ್ಲದೇ ಎಡಗಣ್ಣು ಮುಚ್ಚಿದಾಗ ಏನೂ ಕಾಣಿಸುವುದಿಲ್ಲ ಎಂದು ಅವರು ತಿಳಿಸಿದ್ದರು.

2. ರಾಣಾ ಅವರ ತಂದೆ ಸುರೇಶ್ ಬಾಬು ಜನಪ್ರಿಯ ಚಲನಚಿತ್ರ ನಿರ್ಮಾಪಕ. ಸ್ಟಾರ್ ಕಿಡ್ ಆಗಿರುವುದರಿಂದ, ರಾಣಾ ಸುಲಭವಾಗಿ ಚಲನಚಿತ್ರಗಳಿಗೆ ಪ್ರವೇಶಿಸಬಹುದಿತ್ತು. ಆದರೆ ಅವರು ಆ ಹಾದಿಯನ್ನು ಆರಿಸಲಿಲ್ಲ. ಬದಲಾಗಿ 4 ವರ್ಷಗಳ ಕಾಲ ವಿಶುವಲ್ ಎಫೆಕ್ಟ್ಸ್ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡಿದರು.

3. ಅವರು 2006 ರಲ್ಲಿ ಮಹೇಶ್ ಬಾಬು ಅವರ ‘ಸೇನುಕುಡು’ ಚಿತ್ರದ ವಿಷುಯಲ್ ಎಫೆಕ್ಟ್ಸ್ ವಿಭಾಗದಲ್ಲಿ ಕೆಲಸ ಮಾಡಿದರು. ಅದಕ್ಕಾಗಿ ಅವರು ಟಾಲಿವುಡ್‌ನ ಅತಿದೊಡ್ಡ ಪ್ರಶಸ್ತಿ ನಂದಿ ಪ್ರಶಸ್ತಿಯನ್ನು ಪಡೆದರು.

4. ರಾಣಾ ಅವರು ನಟರಾದ ಕಮಲ್ ಹಾಸನ್ ಮತ್ತು ಶ್ರೀದೇವಿ ಅವರ ದೊಡ್ಡ ಅಭಿಮಾನಿ. ಕಮಲ್ ಹಾಸನ್ ಅವರ ಶ್ರೇಷ್ಠ ಚಿತ್ರ ‘ನಾಯಗನ್’ ನಿಂದ ಅವರು ‘ಬಾಹುಬಲಿ’ ಪಾತ್ರಕ್ಕಾಗಿ ಸ್ಫೂರ್ತಿ ಪಡೆದಿದ್ದರು.

5. ರಾಣಾ ಅವರ ನೆಚ್ಚಿನ ಕ್ರೀಡೆ ಕಬಡ್ಡಿ. ಅವರು ಸ್ಟಾರ್ ಸ್ಪೋರ್ಟ್ಸ್‌ನ ಪ್ರೊ ಕಬಡ್ಡಿ ಲೀಗ್‌ನ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.

6. ರಾಣಾ ಒಮ್ಮೆ ‘ಮೆಮು ಸೇತಾಂ’ ಶೋನಲ್ಲಿ ಭಾಗವಹಿಸಿದ್ದರು. ಅದರಲ್ಲಿ ಅವರು ಕೆಲಸ ಮಾಡಬೇಕಾಗಿತ್ತು ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕಾಗಿತ್ತು. ರಾಣಾ ಆ ಶೋಗಾಗಿ ಹಮಾಲಿಯಾಗಿ ಕೆಲಸ ಮಾಡಿ, ಗಳಿಸಿದ ಹಣವನ್ನು ಅವಶ್ಯಕತೆ ಇರುವವರಿಗೆ ವಿತರಿಸಿದರು.

7. ‘ಬಾಹುಬಲಿ’ಯಲ್ಲಿ ರಾಣಾ ಅತ್ಯುತ್ತಮ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂತಹ ದೃಶ್ಯಗಳೆಂದರೆ ರಾಣಾಗೆ ಪ್ರಿಯ. ಅವರು ಯುಎಸ್‌ನ ಸ್ಟಂಟ್ ಸ್ಕೂಲ್‌ನಲ್ಲಿ ಅಭ್ಯಾಸವನ್ನೂ ಮಾಡಿದ್ದಾರೆ.

8. ರಾಣಾ ದಗ್ಗುಬಾಟಿಯವರಿಗೆ ಶೂಗಳೆಂದರೆ ತುಂಬಾ ಇಷ್ಟ. ಸಾಧಾರಣವಾಗಿ ಎಲ್ಲೇ ಹೋದರೂ ಅವರು ಶೂ ಖರೀದಿಸುತ್ತಾರೆ.

9. ರಾಣಾ ‘ಇಂಡಸ್ಟ್ರಿಯಲ್ ಫೋಟೋಗ್ರಫಿ’ಯಲ್ಲಿ ಪದವಿ ಪಡೆದಿದ್ದಾರೆ. ಕೆಲವು ವರದಿಗಳ ಪ್ರಕಾರ, ರಾಣಾ ಸಾಫ್ಟ್‌ವೇರ್ ಎಂಜಿನಿಯರಿಂಗ್ ಆಗಲು ಬಯಸಿದ್ದರು.

10. ರಾಣಾ ತುಂಬಾ ಭಾವನಾತ್ಮಕ ವ್ಯಕ್ತಿ. ಭಾವುಕ ಸಿನಿಮಾಗಳನ್ನು ನೋಡುವುದನ್ನೂ ಅವರು ಕಡಿಮೆಯೇ. ಅಂತಹ ಚಿತ್ರಗಳನ್ನು ನೋಡಿದಾಗ ಅವರು ಭಾವುಕರಾಗಿ ಅಳುತ್ತಾರಂತೆ! ಆದರೆ ತೆರೆಯ ಮೇಲೆ ಮಾತ್ರ ರಾಣಾ ಅಕ್ಷರಶಃ ಅಬ್ಬರಿಸಿ ಜನರನ್ನು ರಂಜಿಸುತ್ತಾರೆ.

ಇದನ್ನೂ ಓದಿ:

Netflix: ಭಾರತದಲ್ಲಿ ಸಬ್​ಸ್ಕ್ರಿಪ್ಷನ್​ ದರವನ್ನು ಭಾರೀ ಪ್ರಮಾಣದಲ್ಲಿ ಇಳಿಸಿದ ನೆಟ್​ಫ್ಲಿಕ್ಸ್; ಚಂದಾದಾರ ಆಗುವುದು ಹೇಗೆ ತಿಳಿಯಿರಿ

Ayra Yash: ಯಥರ್ವ್​ಗೆ ಸ್ನ್ಯಾಕ್ಸ್ ತಿನ್ನಿಸಲು ಹೋದ ಐರಾ; ಆಮೇಲೇನಾಯ್ತು? ವಿಡಿಯೋ ನೋಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ