Netflix: ಭಾರತದಲ್ಲಿ ಸಬ್​ಸ್ಕ್ರಿಪ್ಷನ್​ ದರವನ್ನು ಭಾರೀ ಪ್ರಮಾಣದಲ್ಲಿ ಇಳಿಸಿದ ನೆಟ್​ಫ್ಲಿಕ್ಸ್; ಚಂದಾದಾರ ಆಗುವುದು ಹೇಗೆ ತಿಳಿಯಿರಿ

ಒಟಿಟಿ ಪ್ಲಾಟ್​ಫಾರ್ಮ್ ಆದ ನೆಟ್​ಫ್ಲಿಕ್ಸ್ ಇಂಡಿಯಾವು ತನ್ನ ಎಲ್ಲ ಸಬ್​ಸ್ಕ್ರಿಪ್ಷನ್ ಪ್ಲಾನ್ ದರವನ್ನೂ ಇಳಿಕೆ ಮಾಡಿದೆ. ಡಿಸೆಂಬರ್ 14ರಿಂದ ಇದು ಅನ್ವಯಿಸುತ್ತದೆ. ಎಷ್ಟು ಇಳಿಕೆ ಆಗಿದೆ ಎಂಬ ಮಾಹಿತಿ ಈ ಲೇಖನದಲ್ಲಿದೆ.

Netflix: ಭಾರತದಲ್ಲಿ ಸಬ್​ಸ್ಕ್ರಿಪ್ಷನ್​ ದರವನ್ನು ಭಾರೀ ಪ್ರಮಾಣದಲ್ಲಿ ಇಳಿಸಿದ ನೆಟ್​ಫ್ಲಿಕ್ಸ್; ಚಂದಾದಾರ ಆಗುವುದು ಹೇಗೆ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 14, 2021 | 12:10 PM

ಒಟಿಟಿ (ಓವರ್ ದ ಟಾಪ್) ಪ್ಲಾಟ್​ಫಾರ್ಮ್ ಆದ ನೆಟ್​ಫ್ಲಿಕ್ಸ್​ ಇಂಡಿಯಾವು ಎಲ್ಲ ಸಬ್​ಸ್ಕ್ರಿಪ್ಷನ್​ಗಳ ದರವನ್ನು ಇಳಿಕೆ ಮಾಡಿದೆ. ಡಿಸ್ನಿ+ ಹಾಟ್​ಸ್ಟಾರ್, ಅಮೆಜಾನ್ ಪ್ರೈಮ್ ಹಾಗೂ ಸಬ್​ಸ್ಕ್ರಿಪ್ಷನ್ ವಿಡಿಯೋ ಆನ್ ಡಿಮ್ಯಾಂಡ್ (SVOD) ಪ್ಲೇಯರ್ಸ್ ಹೋಸ್ಟ್ ಸ್ಪರ್ಧೆಯ ಹಿನ್ನೆಲೆಯಲ್ಲಿ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಇಂಥ ಹೆಜ್ಜೆ ಇಟ್ಟಿದೆ. ನೆಟ್​ಫ್ಲಿಕ್ಸ್​ನ ಜನಪ್ರಿಯ ಯೋಜನೆಯಾದ ತಿಂಗಳಿಗೆ 199 ರೂಪಾಯಿಯದನ್ನು 149 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಇನ್ನು ಬೇಸಿಕ್ ಪ್ಲಾನ್ ತಿಂಗಳಿಗೆ 499 ರೂಪಾಯಿಯ ಬದಲಿಗೆ 199 ರೂಪಾಯಿ ಆಗಿದೆ. ಸ್ಟ್ಯಾಂಡರ್ಡ್ ಪ್ಲಾನ್​ ಈ ವರೆಗೆ ತಿಂಗಳಿಗೆ 649 ರೂಪಾಯಿ ಇದ್ದದ್ದು 499 ರೂ.ಗೆ ಇಳಿಕೆ ಆಗಿದೆ. ಇನ್ನು ಪ್ರೀಮಿಯಂ ಪ್ಲಾನ್ ತಿಂಗಳಿಗೆ 799 ರೂ.ನಿಂದ 649 ರೂ.ಗೆ ಇಳಿಕೆ ಮಾಡಲಾಗಿದೆ. ಇನ್ನು ನೆಟ್​ಫ್ಲಿಕ್ಸ್​​ ಸ್ಪರ್ಧಿಗಳಾದ ಅಮೆಜಾನ್​ ಪ್ರೈಮ್ ತಿಂಗಳ ಪ್ಲಾನ್​ ರೂ. 129 ಇದ್ದರೆ, ವರ್ಷಕ್ಕೆ 999 ರೂ ಇದ್ದದ್ದನ್ನು 1499ಕ್ಕೆ ಹೆಚ್ಚಿಸಲಾಗಿದೆ. ಡಿಸ್ನಿ+ ಹಾಟ್​ಸ್ಟಾರ್ ಶುಲ್ಕವು ಪ್ರೀಮಿಯಂ ಸೇವೆಗಳಿಗೆ ವರ್ಷಕ್ಕೆ 1499 ರೂಪಾಯಿ ಇದ್ದರೆ, ಡಿಸ್ನಿ+ಹಾಟ್​ಸ್ಟಾರ್ ಮೊಬೈಲ್ ರೂ. 499 ಇದೆ.

ನೆಟ್​ಫ್ಲಿಕ್ಸ್​ನ ಹೊಸ ಪ್ಲಾನ್ ಅನ್ನು “ಹ್ಯಾಪಿ ನ್ಯೂ ಪ್ರೈಸಸ್” ಎಂದು ಕರೆಯುತ್ತಿದ್ದು, ಡಿಸೆಂಬರ್ 14, 2021ರಿಂದ ಜಾರಿಗೆ ಬರಲಿದೆ. ನೆಟ್​ಫ್ಲಿಕ್ಸ್ ಇಂಡಿಯಾ, ಕಂಟೆಂಟ್ ಉಪಾಧ್ಯಕ್ಷರಾದ ಮೋನಿಕಾ ಶೆರ್ಗಿಲ್ ಮಾಧ್ಯಮಗಳ ಜತೆ ಮಾತನಾಡಿ, ಕಳೆದ ಮೂರು ವಾರಗಳಿಂದ ದೊಡ್ಡ ಟೈಟಲ್​ಗಳನ್ನು ತರುತ್ತಿದ್ದೇವೆ. ನೆಟ್​ಫ್ಲಿಕ್ಸ್ ಕ್ಯಾಲೆಂಡರ್​ ಪ್ರಕಾರ, ಸರಣಿಗಳು (ಸಿರೀಸ್) ಮತ್ತು ಸಿನಿಮಾಗಳನ್ನು ನಿಯಮಿತವಾಗಿ ಹೊರತರುತ್ತಿದ್ದೇವೆ. ಈ ಕಂಟೆಂಟ್​ಗಳು ದೊಡ್ಡ ಪ್ರಮಾಣದ ವೀಕ್ಷಕರಿಗಾಗಿ ಆಗಿರುವಂಥದ್ದು. ಇದೀಗ ಇನ್ನಷ್ಟು ಆಳವಾಗಿ ಮತ್ತು ಅಪಾರ ಪ್ರಮಾಣದ ವೀಕ್ಷಕರನ್ನು ತಲುಪುವ ಸಮಯ. ಮನರಂಜನೆ ಮೂಲಕ ಮೌಲ್ಯ ಸೃಷ್ಟಿಸಬೇಕು, ಆದರೆ ಅದು ಕೂಡ ಅದ್ಭುತ ಬೆಲೆಗೆ ಸಿಗಬೇಕು ಎಂದಿದ್ದಾರೆ.​

ಅಂತರರಾಷ್ಟ್ರೀಯ ಮಟ್ಟದ ಆ್ಯಕ್ಷನ್ ಥ್ರಿಲ್ಲರ್​ಗಳಾದ ರೆಡ್​ ನೋಟಿಸ್, ದ ಹಾರ್ಡರ್ ದೇ ಫಾಲ್, ದ ಪ್ರಿನ್ಸೆಸ್ ಸ್ವಿಚ್ ಜತೆಗೆ ಭಾರತದಲ್ಲಿನ ಎರಡು ಒರಿಜಿನಲ್ ಟೈಟಲ್ ಧಮಾಕಾ, ಮೀನಾಕ್ಷಿ ಸುಂದರೇಶ್ವರ್ ನವೆಂಬರ್​ನಲ್ಲಿ ಬಿಡುಗಡೆ ಆಗಿದೆ. ಆರ್​.ಮಾಧವನ್ ಹಾಗೂ ಸುರ್ವಿನ್ ಚಾವ್ಲಾ ಅವರ ಡಿ ಕಪಲ್ಡ್ ಡಿಸೆಂಬರ್​ನಲ್ಲಿ ಬಿಡುಗಡೆ ಆಗಲಿದೆ. ಆದ್ದರಿಂದ ಲಾಭಕ್ಕಿಂತ ಹೆಚ್ಚಾಗಿ ನೆಟ್​ಫ್ಲಿಕ್ಸ್​ನಿಂದ ಹೊಸ ಚಂದಾದಾರರ ಕಡೆಗೆ ಗಮನ ಹರಿಸಲಾಗುತ್ತಿದೆ.

ನೆಟ್​ಫ್ಲಿಕ್ಸ್​ಗೆ ಸಬ್​ಸ್ಕ್ರೈಬ್ ಆಗುವುದು ಹೇಗೆ? ಆಂಡ್ರಾಯ್ಡ್ 1 ಆಂಡ್ರಾಯ್ಡ್ ಸಾಧನದಿಂದ ಸೈನ್ ಅಪ್ ಮಾಡಲು ಮೊಬೈಲ್ ಬ್ರೌಸರ್‌ನಿಂದ netflix.com/signupಗೆ ಭೇಟಿ ನೀಡಿ. 2. ನೀವು Google Play ಸ್ಟೋರ್‌ನಿಂದ Netflix ಅಪ್ಲಿಕೇಷನ್ ಹೊಂದಿದ್ದರೆ ಅಪ್ಲಿಕೇಷನ್‌ನಿಂದ ಸೈನ್-ಅಪ್ ಅನ್ನು ಪ್ರಾರಂಭಿಸಬಹುದು. 3. ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ಪಾಸ್‌ವರ್ಡ್ ಹಾಕುವ ಮೂಲಕ ಖಾತೆಯನ್ನು ಸೃಷ್ಟಿಸಿ. 4. Netflix Android ಅಪ್ಲಿಕೇಷನ್ ಅನ್ನು ಬಳಸುತ್ತಿದ್ದರೆ ಮೊಬೈಲ್ ಬ್ರೌಸರ್ ಅನ್ನು ಬಳಸಿಕೊಂಡು Netflix.com ನಲ್ಲಿ ಸೈನ್-ಅಪ್ ಪೂರ್ಣಗೊಳಿಸಲು ಲಿಂಕ್‌ನೊಂದಿಗೆ ನೀವು Netflixನಿಂದ ಇಮೇಲ್ ಸ್ವೀಕರಿಸಬಹುದು. 5. ಸೂಕ್ತವಾದ ಯೋಜನೆಯನ್ನು ಆರಿಸಿ. ನೀವು ಯಾವುದೇ ಸಮಯದಲ್ಲಿ ಡೌನ್‌ಗ್ರೇಡ್ ಮಾಡಬಹುದು ಅಥವಾ ಅಪ್‌ಗ್ರೇಡ್ ಮಾಡಬಹುದು. 6. ಪಾವತಿ ವಿಧಾನವನ್ನು ನಮೂದಿಸಿ.

ಕಂಪ್ಯೂಟರ್ 1. netflix.com/signupಗೆ ಭೇಟಿ ನೀಡಿ. 2. ಸೂಕ್ತವಾದ ಯೋಜನೆಯನ್ನು ಆರಿಸಿ. ನೀವು ಯಾವಾಗ ಬೇಕಾದರೂ ಡೌನ್‌ಗ್ರೇಡ್ ಮಾಡಬಹುದು ಅಥವಾ ಅಪ್‌ಗ್ರೇಡ್ ಮಾಡಬಹುದು. 3. ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ಪಾಸ್‌ವರ್ಡ್ ಹಾಕುವ ಮೂಲಕ ಖಾತೆಯನ್ನು ಸೃಷ್ಟಿಸಿ. 4. ಪಾವತಿ ವಿಧಾನವನ್ನು ನಮೂದಿಸಿ.

ಐಫೋನ್, ಐಪ್ಯಾಡ್ ಅಥವಾ ಐಪಾಡ್ ಟಚ್ 1. ಮೊಬೈಲ್ ಬ್ರೌಸರ್‌ನಿಂದ netflix.com/signupಗೆ ಭೇಟಿ ನೀಡಿ. ಗಮನಿಸಿ: Netflix iOS ಅಪ್ಲಿಕೇಶನ್‌ನಲ್ಲಿ ಸೈನ್ ಅಪ್ ಸಪೋರ್ಟ್ ಮಾಡಲ್ಲ 2. ಸೂಕ್ತವಾದ ಯೋಜನೆಯನ್ನು ಆರಿಸಿ. ಯಾವಾಗ ಬೇಕಾದರೂ ಡೌನ್‌ಗ್ರೇಡ್ ಮಾಡಬಹುದು ಅಥವಾ ಅಪ್‌ಗ್ರೇಡ್ ಮಾಡಬಹುದು. 3. ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ಪಾಸ್‌ವರ್ಡ್ ಹಾಕುವ ಮೂಲಕ ಖಾತೆಯನ್ನು ಸೃಷ್ಟಿಸಿ. 4. ಪಾವತಿ ವಿಧಾನವನ್ನು ನಮೂದಿಸಿ. 5. iOS 13.0 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯಲ್ಲಿ ಚಾಲನೆಯಲ್ಲಿರುವ ಸಾಧನದಲ್ಲಿ Netflix ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮತ್ತು ಸೈನ್ ಇನ್ ಮಾಡಿ.

ಸ್ಮಾರ್ಟ್ ಟಿವಿ ಮತ್ತು ಸ್ಟ್ರೀಮಿಂಗ್ ಮೀಡಿಯಾ ಪ್ಲೇಯರ್‌ಗಳು 1. ನೆಟ್‌ಫ್ಲಿಕ್ಸ್ ಅಪ್ಲಿಕೇಷನ್ ತೆರೆಯಿರಿ. ಸೂಚನೆ: ಅಪ್ಲಿಕೇಷನ್ ಹುಡುಕಲು ಸಹಾಯ ಬೇಕಾದರೆ ಸಾಧನದ ಬ್ರ್ಯಾಂಡ್ ಹೆಸರನ್ನು (ಉದಾ. Samsung, Roku, Xbox) ನಂತರ “Netflix ಅನ್ನು ಬಳಸುವುದು”ಗಾಗಿ ನೆಟ್​ಫ್ಲಿಕ್ಸ್ ಸಹಾಯ ಕೇಂದ್ರವನ್ನು ಹುಡುಕಿ. ಕೆಲವು ಸಾಧನಗಳು ತಮ್ಮ ರಿಮೋಟ್ ಕಂಟ್ರೋಲ್‌ನಲ್ಲಿ ನೆಟ್‌ಫ್ಲಿಕ್ಸ್ ಬಟನ್ ಅನ್ನು ಸಹ ಹೊಂದಿವೆ. 2. ಹೆಚ್ಚಿನ ಸ್ಮಾರ್ಟ್ ಟಿವಿಗಳು ಮತ್ತು ಸ್ಟ್ರೀಮಿಂಗ್ ಮೀಡಿಯಾ ಪ್ಲೇಯರ್‌ಗಳಲ್ಲಿ ಇಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆಯನ್ನು ಒದಗಿಸುವ ಮೂಲಕ ಪ್ರಾರಂಭಿಸಬೇಕಾಗುತ್ತದೆ. – ಒಮ್ಮೆ ಒದಗಿಸಿದ ನಂತರ ಸೈನ್‌ಅಪ್ ಹರಿವನ್ನು ಮುಂದುವರಿಸಲು ಸಕ್ರಿಯಗೊಳಿಸುವ ಲಿಂಕ್‌ನೊಂದಿಗೆ ಇಮೇಲ್ ಅಥವಾ SMS ಟೆಕ್ಸ್ಟ್ ಸಂದೇಶವನ್ನು ಸ್ವೀಕರಿಸುತ್ತೀರಿ. 3. ಸೂಕ್ತವಾದ ಯೋಜನೆಯನ್ನು ಆರಿಸಿ. ಯಾವಾಗ ಬೇಕಾದರೂ ಡೌನ್‌ಗ್ರೇಡ್ ಮಾಡಬಹುದು ಅಥವಾ ಅಪ್‌ಗ್ರೇಡ್ ಮಾಡಬಹುದು. 4. ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ಪಾಸ್‌ವರ್ಡ್ ಹಾಕುವ ಮೂಲಕ ಖಾತೆಯನ್ನು ಸೃಷ್ಟಿಸಿ. 5. ಪಾವತಿ ವಿಧಾನವನ್ನು ನಮೂದಿಸಿ.

ಸೆಟ್-ಟಾಪ್ ಬಾಕ್ಸ್ 1. ನೆಟ್‌ಫ್ಲಿಕ್ಸ್ ಅಪ್ಲಿಕೇಷನ್ ತೆರೆಯಿರಿ. ಸೂಚನೆ: ಅಪ್ಲಿಕೇಷನ್ ಹುಡುಕಲು ಸಹಾಯ ಬೇಕಾದರೆ ನಿಮ್ಮ ಸಾಧನದ ಬ್ರ್ಯಾಂಡ್ ಹೆಸರನ್ನು (ಉದಾ. Samsung, Roku, Xbox) ನಂತರ “Netflix ಅನ್ನು ಬಳಸುವುದು”ಗಾಗಿ ನೆಟ್​ಫ್ಲಿಕ್ಸ್ ಹೆಲ್ಪ್ ಸೆಂಟರ್ ಹುಡುಕಿ. ಕೆಲವು ಸಾಧನಗಳು ತಮ್ಮ ರಿಮೋಟ್ ಕಂಟ್ರೋಲ್‌ನಲ್ಲಿ ನೆಟ್‌ಫ್ಲಿಕ್ಸ್ ಬಟನ್ ಅನ್ನು ಸಹ ಹೊಂದಿವೆ. 2. ಸೂಕ್ತವಾದ ಯೋಜನೆಯನ್ನು ಆರಿಸಿ. ಯಾವಾಗ ಬೇಕಾದರೂ ಡೌನ್‌ಗ್ರೇಡ್ ಮಾಡಬಹುದು ಅಥವಾ ಅಪ್‌ಗ್ರೇಡ್ ಮಾಡಬಹುದು. 3. ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ಪಾಸ್‌ವರ್ಡ್ ಹಾಕುವ ಮೂಲಕ ಖಾತೆಯನ್ನು ಸೃಷ್ಟಿಸಿ. 4. ಪಾವತಿ ವಿಧಾನವನ್ನು ನಮೂದಿಸಿ.

ಇದನ್ನೂ ಓದಿ: Money Heist 5: ಉದ್ಯೋಗಿಗಳಿಗೆ ನೆಟ್​ಫ್ಲಿಕ್ಸ್​ ಸಬ್​ಸ್ಕ್ರಿಪ್ಶನ್​ ನೀಡಿ ರಜೆ ಘೋಷಿಸಿದ ಭಾರತದ ಕಂಪನಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ