Rana Daggubati: ರಾಣಾ ದಗ್ಗುಬಾಟಿ ಸಂಸಾರದಲ್ಲಿ ಬಿರುಕು? ಎಲ್ಲ ಪೋಸ್ಟ್​ ಡಿಲೀಟ್​ ಮಾಡಿದ ‘ಬಲ್ಲಾಳ ದೇವ’

TV9 Digital Desk

| Edited By: ಮದನ್​ ಕುಮಾರ್​

Updated on:Aug 09, 2022 | 7:56 AM

Rana Daggubati | Miheeka Bajaj: ರಾಣಾ ದಗ್ಗುಬಾಟಿ ಈ ರೀತಿ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇಷ್ಟೆಲ್ಲ ಗುಸುಗುಸು ಕೇಳಿಬಂದರೂ ಅವರ ಪತ್ನಿ ಮಿಹೀಕಾ ಬಜಾಜ್​ ತಲೆ ಕೆಡಿಸಿಕೊಂಡಿಲ್ಲ.

Rana Daggubati: ರಾಣಾ ದಗ್ಗುಬಾಟಿ ಸಂಸಾರದಲ್ಲಿ ಬಿರುಕು? ಎಲ್ಲ ಪೋಸ್ಟ್​ ಡಿಲೀಟ್​ ಮಾಡಿದ ‘ಬಲ್ಲಾಳ ದೇವ’
ಮಿಹೀಕಾ ಬಜಾಜ್, ರಾಣಾ ದಗ್ಗುಬಾಟಿ

ನಟ ರಾಣಾ ದಗ್ಗುಬಾಟಿ (Rana Daggubati) ಅವರು ಸಖತ್ ಬೇಡಿಕೆ ಇರುವಂತಹ ಕಲಾವಿದ. ‘ಬಾಹುಬಲಿ’ ಸಿನಿಮಾದಲ್ಲಿ ಅವರು ಮಾಡಿದ ಬಲ್ಲಾಳ ದೇವ ಎಂಬ ಪಾತ್ರವನ್ನು ಅಭಿಮಾನಿಗಳು ಎಂದಿಗೂ ಮರೆಯುವಂತಿಲ್ಲ. ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎರಡು ವರ್ಷ ಕಳೆದಿದೆ. ಗೆಳತಿ ಮಿಹೀಕಾ ಬಜಾಜ್​ ಜೊತೆ ಅವರು 2020ರ ಆಗಸ್ಟ್​ 8ರಂದು ಮದುವೆ ಆದರು. ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ಅವರ ಸಂಸಾರದ ಬಗ್ಗೆ ದೊಡ್ಡ ಗಾಸಿಪ್​ ಹಬ್ಬಿದೆ. ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್​ (Miheeka Bajaj) ನಡುವೆ ವೈಮನಸ್ಸು ಮೂಡಿದೆ ಎನ್ನಲಾಗಿದೆ. ಈ ಬಗ್ಗೆ ಟಾಲಿವುಡ್​ (Tollywood) ಅಂಗಳದಲ್ಲಿ ಗುಸುಗುಸು ಹಬ್ಬಿದೆ. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ವಿಚ್ಛೇದನದ ಸುದ್ದಿ ಬ್ಯಾಕ್​ ಟು ಬ್ಯಾಕ್​ ಕೇಳಿಬರುತ್ತಿರುವುದರಿಂದ ಇಂಥ ಗಾಸಿಪ್​ ಹರಡಿರುವುದಕ್ಕೆ ರಾಣಾ ಅಭಿಮಾನಿಗಳಲ್ಲಿ ಚಿಂತೆ ಮೂಡಿದೆ. ಈ ಬಗ್ಗೆ ಅವರಿಂದಲೇ ಸ್ಪಷ್ಟನೆ ಸಿಗಬೇಕಿದೆ.

ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್​ ನಡುವೆ ಯಾವ ಕಾರಣಕ್ಕೆ ವೈಮನಸ್ಸು ಮೂಡಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ರಾಣಾ ಅವರ ಒಂದು ನಡೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸದ್ಯ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿದ್ದ ಎಲ್ಲ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ್ದಾರೆ. ಒಂದಷ್ಟು ದಿನಗಳ ಕಾಲ ಅವರು ಸೋಶಿಯಲ್​ ಮೀಡಿಯಾದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಇದ್ದಕ್ಕಿದ್ದಂತೆಯೇ ರಾಣಾ ದಗ್ಗುಬಾಟಿ ಅವರು ಈ ರೀತಿ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇಷ್ಟೆಲ್ಲ ಗುಸುಗುಸು ಕೇಳಿಬಂದರೂ ಕೂಡ ರಾಣಾ ಪತ್ನಿ ಮಿಹೀಕಾ ಬಜಾಜ್​ ಅವರು ತಲೆ ಕೆಡಿಸಿಕೊಂಡಿಲ್ಲ. ವಿವಾಹ ವಾರ್ಷಿಕೋತ್ಸವದ ಸಲುವಾಗಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ವೆಡ್ಡಿಂಗ್​ ಆ್ಯನಿವರ್ಸರಿ ಆಚರಿಸಿದ್ದಾರೆ.

ಇದನ್ನೂ ಓದಿ

ಮಿಹೀಕಾ ಬಜಾಜ್​ ಮತ್ತು ರಾಣಾ ದಗ್ಗುಬಾಟಿ ಸಂಸಾರದಲ್ಲಿ ಯಾವುದೇ ಬಿರುಕು ಮೂಡಿಲ್ಲ ಎಂದು ತೆಲುಗಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಹಾಗಿದ್ದರೂ ರಾಣಾ ಅವರಿಂದಲೇ ಸ್ಪಷ್ಟನೆ ಸಿಗಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ. ಇನ್ನು, ಅವರು ನಟಿಸಿದ ‘ವಿರಾಟ ಪರ್ವಂ’ ಸಿನಿಮಾ ಈ ವರ್ಷ ತೆರೆಕಂಡು ಥಿಯೇಟರ್​ನಲ್ಲಿ ಸೋತಿತು. ಆ ಕಾರಣದಿಂದಲೂ ರಾಣಾ ದಗ್ಗುಬಾಟಿ ಅವರು ಬೇಸರದಲ್ಲಿ ಇದ್ದಿರಬಹುದು. ಹೊಸ ಸಿನಿಮಾಗಾಗಿ ಹೆಚ್ಚು ಸಮಯವನ್ನು ನೀಡುವ ಸಲುವಾಗಿ ಅವರು ಸೋಶಿಯಲ್​ ಮೀಡಿಯಾದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada