Snehalata Dixit: ಮಾಧುರಿ ದೀಕ್ಷಿತ್​ ತಾಯಿ ಸ್ನೇಹಲತಾ ನಿಧನ; 91ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಹಿರಿಯ ಜೀವ

Madhuri Dixit Mother Death: ಮುಂಬೈನ ನಿವಾಸದಲ್ಲಿ ಮಾಧುರಿ ದೀಕ್ಷಿತ್​ ಅವರ ತಾಯಿ ಸ್ನೇಹಲತಾ ದೀಕ್ಷಿತ್​ ಕೊನೆಯುಸಿರು ಎಳೆದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಪ್ತರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Snehalata Dixit: ಮಾಧುರಿ ದೀಕ್ಷಿತ್​ ತಾಯಿ ಸ್ನೇಹಲತಾ ನಿಧನ; 91ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಹಿರಿಯ ಜೀವ
ಸ್ನೇಹಲತಾ ದೀಕ್ಷಿತ್, ಮಾಧುರಿ ದೀಕ್ಷಿತ್

Updated on: Mar 12, 2023 | 5:16 PM

ಬಾಲಿವುಡ್​ನ ಖ್ಯಾತ ನಟಿ ಮಾಧುರಿ ದೀಕ್ಷಿತ್​ (Madhuri Dixit) ಅವರ ಮನೆಯಲ್ಲಿ ಶೋಕದ ವಾತಾವರಣ ಸೃಷ್ಟಿ ಆಗಿದೆ. ಮಾಧುರಿ ತಾಯಿ ಸ್ನೇಹಲತಾ ದೀಕ್ಷಿತ್​ (Snehalata Dixit) ಅವರು ನಿಧನರಾಗಿದ್ದಾರೆ. ಮಾಧುರಿ ದೀಕ್ಷಿತ್​ ವೃತ್ತಿಜೀವನಕ್ಕೆ ಅವರ ತಾಯಿ ನೀಡಿದ ಬೆಂಬಲ ಅಪಾರ. ಅಮ್ಮ ಕಲಿಸಿದ ಶಿಸ್ತಿನ ಪಾಠದ ಬಗ್ಗೆ ಮಾಧುರಿ ಅವರು ಅನೇಕ ಬಾರಿ ಹೇಳಿಕೊಂಡಿದ್ದರು. ಇಂದು (ಮಾರ್ಚ್​ 12) ಸ್ನೇಹಲತಾ ದೀಕ್ಷಿತ್​ ಅವರು ಮುಂಬೈನ ನಿವಾಸದಲ್ಲಿ ಕೊನೆಯುಸಿರು ಎಳೆದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಮುಂಬೈನಲ್ಲೇ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿ ಆಗಿದೆ. ತಾಯಿಯನ್ನು ಕಳೆದುಕೊಂಡ ಮಾಧುರಿ ದೀಕ್ಷಿತ್​ ಅವರಿಗೆ ಬಾಲಿವುಡ್​ನ (Bollywood) ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳು ಕೂಡ ಸ್ನೇಹಲತಾ ದೀಕ್ಷಿತ್​ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.

ಗಾಯನದಲ್ಲಿ ಸ್ನೇಹಲತಾ ದೀಕ್ಷಿತ್​ ಅವರು ಆಸಕ್ತಿ ಹೊಂದಿದ್ದರು. 2013ರಲ್ಲಿ ಮಾಧುರಿ ದೀಕ್ಷಿತ್​ ನಟಿಸಿದ್ದ ‘ಗುಲಾಬ್​ ಗ್ಯಾಂಗ್​’ ಸಿನಿಮಾದ ಒಂದು ಹಾಡಿಗೆ ಸ್ನೇಹಲತಾ ಧ್ವನಿ ನೀಡಿದ್ದರು. ಆ ಘಟನೆಯನ್ನು ನಿರ್ದೇಶಕ ಅನುಭವ್​ ಸಿನ್ಹಾ ಅವರು ವಿವರಿಸಿದ್ದರು. ‘ಒಂದು ಹಾಡು ಹೇಳಬೇಕು ಅಂತ ನಾವು ಮಾಧರಿ ಅವರಿಗೆ ಕೇಳಿದೆವು. ರೆಕಾರ್ಡಿಂಗ್​ ದಿನ ಮಾಧುರಿ ಜೊತೆ ಸ್ನೇಹಲತಾ ಕೂಡ ಬಂದಿದ್ದರು. ಅವರ ಧ್ವನಿಯೂ ಮಧುರವಾಗಿದೆ ಅಂತ ಗೊತ್ತಾಯಿತು. ಹಾಗಾಗಿ ಅವರ ಬಳಿಯೂ ಹಾಡುವಂತೆ ಕೇಳಿಕೊಂಡೆವು. ಇಬ್ಬರೂ ಜೊತೆಯಾಗಿ ಆ ಹಾಡಿಗೆ ಧ್ವನಿ ನೀಡಿದರು’ ಎಂದು ಅನುಭವ್​ ಸಿನ್ಹಾ ಹೇಳಿದ್ದರು.

ಇದನ್ನೂ ಓದಿ: Madhuri Dixit: ಪಾಕಿಸ್ತಾನಿ ಹುಡುಗಿಯ ಡ್ಯಾನ್ಸ್​ ಕಾಪಿ ಮಾಡಿದ ಮಾಧುರಿ ದೀಕ್ಷಿತ್​; ನೆಟ್ಟಿಗರಿಂದ ಬುದ್ಧಿಮಾತು

ಇದನ್ನೂ ಓದಿ
ಯೋಗರಾಜ್ ಭಟ್ ಮಾವ, ಸ್ಯಾಂಡಲ್​ವುಡ್ ಕಲಾವಿದ ಸತ್ಯ ನಾರಾಯಣ್ ಹೃದಯಾಘಾತದಿಂದ ನಿಧನ
Edava Basheer Death: ಹಾಡುವಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದು ಆರ್ಕೆಸ್ಟ್ರಾ ಗಾಯಕ ಎಡವ ಬಶೀರ್​ ನಿಧನ; ವಿಡಿಯೋ ವೈರಲ್​
Chalapathi Chowdary Death: ಹಿರಿಯ ನಟ ಕ್ಯಾಪ್ಟನ್​ ಚಲಪತಿ ಚೌದ್ರಿ ನಿಧನ
Mohan Juneja: ಖ್ಯಾತ ನಟ ಮೋಹನ್​ ಜುನೇಜ ನಿಧನ; ‘ಕೆಜಿಎಫ್​’ ಚಿತ್ರದಲ್ಲಿ ಅಭಿನಯಿಸಿದ್ದ ಜನಪ್ರಿಯ ಕಲಾವಿದ ಇನ್ನಿಲ್ಲ

ವೃತ್ತಿಜೀವನದಲ್ಲಿ ಎಷ್ಟೇ ಜನಪ್ರಿಯತೆ, ಯಶಸ್ಸು ಸಿಕ್ಕರೂ ಕೂಡ ವೈಯಕ್ತಿಕ ಬದುಕು ಹೇಗೆ ಇರಬೇಕು ಎಂದು ಮಾಧುರಿ ದೀಕ್ಷಿತ್​ಗೆ ಕಲಿಸಿದ್ದೇ ಅವರ ತಾಯಿ ಸ್ನೇಹಲತಾ. ಆ ಬಗ್ಗೆ ಕಳೆದ ವರ್ಷ ಸಂದರ್ಶನವೊಂದರಲ್ಲಿ ಮಾಧುರಿ ದೀಕ್ಷಿತ್​ ಹೇಳಿಕೊಂಡಿದ್ದರು.

‘ನಾನು ಸಿನಿಮಾ ನಟಿ ಆದ ನಂತರವೂ ಒಂದು ವೇಳೆ ನನ್ನ ರೂಮ್​ ಸರಿಯಾಗಿ ಇಟ್ಟುಕೊಳ್ಳದೇ ಇದ್ದರೆ ಅಮ್ಮ ಬೈಯ್ಯುತ್ತಿದ್ದರು. ಆ ರೀತಿ ಅವರು ನನ್ನನ್ನು ಬೆಳೆಸಿದರು. ಅದಕ್ಕಾಗಿಯೇ ನಾನು ಹೀಗೆ ಇದ್ದೇನೆ. ಮನೆಗೆ ಬಂದಾಗ ಗಂಡ ಮತ್ತು ಮಕ್ಕಳನ್ನು ನೋಡುತ್ತೇನೆ. ಕೆಲಸದ ವಿಚಾರವನ್ನು ಸ್ಟುಡಿಯೋದಲ್ಲಿ ಬಿಟ್ಟು ಬರುತ್ತೇನೆ’ ಎಂದು ಮಾಧುರಿ ದೀಕ್ಷಿತ್​ ಹೇಳಿದ್ದರು.

ಇದನ್ನೂ ಓದಿ: ಸಲಿಂಗಕಾಮಿ ಪಾತ್ರದಲ್ಲಿ ಮಾಧುರಿ ದೀಕ್ಷಿತ್​? ಹೊರಬಿತ್ತು ಫ್ಯಾನ್ಸ್​ ಅಚ್ಚರಿಪಡುವಂತಹ ಬ್ರೇಕಿಂಗ್​ ನ್ಯೂಸ್​

ಸ್ನೇಹಲತಾ ದೀಕ್ಷಿತ್​ ಅವರ 90ನೇ ವರ್ಷದ ಹುಟ್ಟುಹಬ್ಬಕ್ಕೆ ಮಾಧುರಿ ದೀಕ್ಷಿತ್​ ಭಾವುಕವಾಗಿ ಪೋಸ್ಟ್​ ಮಾಡಿದ್ದರು. ‘ನೀವು ಕಲಿಸಿದ ಪಾಠಗಳೇ ನನ್ನ ಬದುಕಿಗೆ ದೊಡ್ಡ ಉಡುಗೊರೆ’ ಎಂದು ಅವರು ಬರೆದುಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:16 pm, Sun, 12 March 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us