ಮದುವೆ ಆದ ಎರಡೇ ದಿನಕ್ಕೆ ಪ್ರೆಗ್ನೆಂಟ್​ ಎಂಬ ಸುದ್ದಿ ಹರಡಿದ್ದಕ್ಕೆ ಸೋನಾಕ್ಷಿ ಪ್ರತಿಕ್ರಿಯೆ

ಮದುವೆ ಮತ್ತು ರಿಸೆಪ್ಷನ್​ ಮುಗಿಯುತ್ತಿದ್ದಂತೆಯೇ ನಟಿ ಸೋನಾಕ್ಷಿ ಸಿನ್ಹಾ ಅವರು ಗಂಡನ ಜೊತೆ ಆಸ್ಪತ್ರೆಗೆ ಬಂದಿದ್ದರು. ಹಾಗಾಗಿ ಅವರು ಪ್ರೆಗ್ನೆಂಟ್​ ಆಗಿರಬಹುದು ಎಂದು ಗಾಸಿಪ್​ ಹರಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋನಾಕ್ಷಿ ಸಿನ್ಹಾ ಅವರು ಈಗ ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ಸೋನಾಕ್ಷಿ ಸಿನ್ಹಾ ಅವರು ಗರ್ಭಿಣಿ ಆಗಿದ್ದು ಹೌದು? ಅಭಿಮಾನಿಗಳ ಮನದಲ್ಲಿ ಇರುವ ಪ್ರಶ್ನೆಗೆ ಇಲ್ಲಿದೆ ಉತ್ತರ..

ಮದುವೆ ಆದ ಎರಡೇ ದಿನಕ್ಕೆ ಪ್ರೆಗ್ನೆಂಟ್​ ಎಂಬ ಸುದ್ದಿ ಹರಡಿದ್ದಕ್ಕೆ ಸೋನಾಕ್ಷಿ ಪ್ರತಿಕ್ರಿಯೆ
ಝಹೀರ್​ ಇಖ್ಬಾಲ್​, ಸೋನಾಕ್ಷಿ ಸಿನ್ಹಾ

Updated on: Jul 05, 2024 | 10:57 PM

ನಟಿ ಸೋನಾಕ್ಷಿ ಸಿನ್ಹಾ ಅವರು ಕೆಲವೇ ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಹುಕಾಲದ ಗೆಳೆಯ ಝಹೀರ್​ ಇಖ್ಬಾಲ್​ ಜೊತೆ ಅವರ ಮದುವೆ ನೆರವೇರಿತು. ಮದುವೆ ಆದ ಎರಡೇ ದಿನಗಳ ಬಳಿಕ ಸೋನಾಕ್ಷಿ ಸಿನ್ಹಾ ಅವರು ಪ್ರೆಗ್ನೆಂಟ್​ ಎಂಬ ಗಾಸಿಪ್​ ಹಬ್ಬಿತ್ತು. ಅದಕ್ಕೆ ಕಾರಣ ಆಗಿದ್ದು ಒಂದು ಘಟನೆ. ಮದುವೆ ಆದ ಬಳಿಕ ಸೋನಾಕ್ಷಿ ಸಿನ್ಹಾ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರಿಂದ ಈ ವದಂತಿ ಹರಡಿತ್ತು. ಅದಕ್ಕೆ ಈಗ ಸೋನಾಕ್ಷಿ ಸಿನ್ಹಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಟೈಮ್ಸ್​ ನೌ’ ನಡೆಸಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಮದುವೆ ಬಳಿಕ ಜೀವನ ಹೇಗಿದೆ ಎಂದು ಕೇಳಿದ್ದಕ್ಕೆ ಸೋನಾಕ್ಷಿ ಸಿನ್ಹಾ ಅವರು ಉತ್ತರ ನೀಡಿದ್ದಾರೆ. ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್​ ಇಖ್ಬಾಲ್​ ಅವರು ಕಳೆದ 7 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹಾಗಾಗಿ ಅವರು ಬೆಸ್ಟ್​ ಫ್ರೆಂಡ್ಸ್​ ರೀತಿ ಇದ್ದಾರೆ. ಈ ಕಾರಣದಿಂದಾಗಿ ಮದುವೆ ಬಳಿಕ ಜೀವನ ತುಂಬ ಬದಲಾಗಿದೆ ಎಂದು ಸೋನಾಕ್ಷಿ ಸಿನ್ಹಾಗೆ ಅನಿಸುತ್ತಿಲ್ಲ. ಈಗ ಅವರ ಜೀವನ ಬದಲಾಗಿರುವುದು ಗಾಸಿಪ್​ಗಳ ವಿಷಯದಲ್ಲಿ ಮಾತ್ರ!

‘ಮದುವೆ ನಂತರ ಆಗಿರುವ ಒಂದೇ ಒಂದು ಬದಲಾವಣೆ ಏನೆಂದರೆ, ಈಗ ನಾವು ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ಆಸ್ಪತ್ರೆಗೆ ಬಂದ ತಕ್ಷಣ ಜನರಿಗೆ ನಾನು ಪ್ರೆಗ್ನೆಂಟ್​ ಆಗಿದ್ದೇನೆ ಎನಿಸುತ್ತದೆ’ ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ. ಆ ಮೂಲಕ ಇತ್ತೀಚೆಗೆ ಹರಡಿದ್ದ ಗಾಸಿಪ್​ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಈಗ ಪ್ರೆಗ್ನೆಂಟ್​ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ. ಅಷ್ಟಕ್ಕೂ ಸೋನಾಕ್ಷಿ ಸಿನ್ಹಾ ಅವರು ಮದುವೆ ನಂತರ ಆಸ್ಪತ್ರೆಗೆ ಹೋಗಿದ್ದು ಯಾಕೆ ಎಂಬುದಕ್ಕೂ ಉತ್ತರ ಸಿಕ್ಕಿದೆ.

ಇದನ್ನೂ ಓದಿ: ಸೋನಾಕ್ಷಿ ರಿಸೆಪ್ಷನ್​ಗೆ ಅತಿಥಿಗಳಂತೆ ರೆಡಿ ಆಗಿ ಬಂದ ಫ್ಯಾನ್ಸ್; ಮುಂದಾಗಿದ್ದು ಮಾತ್ರ ದುರಂತ

ಸೋನಾಕ್ಷಿ ಸಿನ್ಹಾ ಅವರ ಮದುವೆಯ ಬಳಿಕ ಅವರ ತಂದೆ ಶತ್ರುಘ್ನ ಸಿನ್ಹಾ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು. ಆದ್ದರಿಂದ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರನ್ನು ನೋಡುವ ಸಲುವಾಗಿ ಸೋನಾಕ್ಷಿ ಸಿನ್ಹಾ ಮತ್ತು ಝಹೀರ್​ ಇಖ್ಬಾಲ್​ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಗ ಅವರನ್ನು ನೋಡಿದ ಅನೇಕರು ತಪ್ಪಾಗಿ ಅರ್ಥ ಮಾಡಿಕೊಂಡರು. ಸೋನಾಕ್ಷಿ ಪ್ರೆಗ್ನೆಂಟ್​ ಆದ್ದರಿಂದ ಆಸ್ಪತ್ರೆಗೆ ಗಂಡನ ಜೊತೆ ಬಂದಿದ್ದಾರೆ ಎಂದು ಗಾಸಿಪ್​ ಹಬ್ಬಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us