ಸೋನಾಕ್ಷಿ ರಿಸೆಪ್ಷನ್ಗೆ ಅತಿಥಿಗಳಂತೆ ರೆಡಿ ಆಗಿ ಬಂದ ಫ್ಯಾನ್ಸ್; ಮುಂದಾಗಿದ್ದು ಮಾತ್ರ ದುರಂತ
ಡಿಜಿಟಲ್ ಕ್ರಿಯೇಟರ್ ಸುಶಾಂತ್ ಅವರು ಇತ್ತೀಚೆಗೆ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್ನಲ್ಲಿ ಅವರು ಇತ್ತೀಚೆಗೆ ನಡೆದ ಸೆಲೆಬ್ರಿಟಿ ಮದುವೆ ರಿಸೆಪ್ಷನ್ ಘಟನೆ ವಿವರಿಸಿದ್ದಾರೆ. ಇದು ಸೋನಾಕ್ಷಿ ರಿಸೆಪ್ಷನ್ನ ಘಟನೆ ಎಂದು ಕೆಲವರು ಊಹಿಸಿದ್ದಾರೆ. ಈ ಮದುವೆಯಲ್ಲಿ ಆದ ತೊಂದರೆ ಏನು ಎಂಬ ಬಗ್ಗೆ ಇಲ್ಲಿದೆ ವಿವರ.
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಇತ್ತೀಚೆಗೆ ಝಹೀರ್ ಇಖ್ಬಾಲ್ನ ಮದುವೆ ಆದರು. ಸಿಂಪಲ್ ಆಗಿ ಈ ವಿವಾಹ ಕಾರ್ಯ ನಡೆದಿತ್ತು. ಆ ಬಳಿಕ ಸೋನಾಕ್ಷಿ ಅವರು ಭರ್ಜರಿಯಾಗಿ ರಿಸೆಪ್ಷನ್ ಆಯೋಜನೆ ಮಾಡಿದ್ದರು. ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದರು. ಈ ಮಧ್ಯೆ ಒಂದು ತೊಂದರೆ ಆಗಿದೆ. ಫ್ಯಾನ್ಸ್ ಭರ್ಜರಿಯಾಗಿ ರೆಡಿ ಆಗಿ ಬಂದಿದ್ದರು. ಅವರು ಕೂಡ ಅತಿಥಿಗಳಂತೆ ಕಾಣಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಈ ವೇಳೆ ಅವಘಡ ಉಂಟಾಗಿದೆ.
ಡಿಜಿಟಲ್ ಕ್ರಿಯೇಟರ್ ಸುಶಾಂತ್ ಅವರು ಇತ್ತೀಚೆಗೆ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್ನಲ್ಲಿ ಅವರು ಇತ್ತೀಚೆಗೆ ನಡೆದ ಸೆಲೆಬ್ರಿಟಿ ಮದುವೆ ರಿಸೆಪ್ಷನ್ ಘಟನೆ ವಿವರಿಸಿದ್ದಾರೆ. ಇದು ಸೋನಾಕ್ಷಿ ರಿಸೆಪ್ಷನ್ನ ಘಟನೆ ಎಂದು ಕೆಲವರು ಊಹಿಸಿದ್ದಾರೆ.
‘ಸೆಲೆಬ್ರಿಟಿ ಮದುವೆ ರಿಸೆಪ್ಷನ್ನಲ್ಲಿ ಅಭಿಮಾನಿಗಳು ಗೇಟ್ನ ಮುರಿದು ಒಳಗೆ ಬರೋದನ್ನು ನೋಡಿದೆ. ಜನರು ಟಿಪ್-ಟಾಪ್ ಆಗಿ ಡ್ರೆಸ್ ಹಾಕಿ ಬಂದಿದ್ದರು. ತಾವೂ ಅತಿಥಿಗಳು ಎಂದು ತೋರಿಸುವ ಪ್ರಯತ್ನದಲ್ಲಿದ್ದರು. ಇದೆಲ್ಲ ಯಾವ ಖುಷಿಗೆ? ರೀಲ್ಸ್ ಮಾಡೋದಕ್ಕಾ? ಜನರು ಇಷ್ಟೊಂದು ಅನುಪಯುಕ್ತ ಎಂದು ಗೊತ್ತಿರಲಿಲ್ಲ’ ಎಂದು ಸುಶಾಂತ್ ಪೋಸ್ಟ್ ಮಾಡಿದ್ದಾರೆ.
ಜೂನ್ 23ರಂದು ಸೋನಾಕ್ಷಿ ಹಾಗೂ ಝಹೀರ್ ಅವರು ಮದುವೆ ಆಗಿದ್ದಾರೆ. ಮನೆಯಲ್ಲಿ ಸಿಂಪಲ್ ಆಗಿ ಮದುವೆ ನಡೆದಿದೆ. ಇಬ್ಬರೂ ಏಳು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಆ ಬಳಿಕ ಇವರು ವಿವಾಹ ಆಗುವ ನಿರ್ಧಾರ ತೆಗೆದುಕೊಂಡರು.
ಇದನ್ನೂ ಓದಿ: ತಂದೆ-ತಾಯಿಯಿಂದಲೇ ಹಣ ಪಡೆದಿದ್ದಾರೆ ಸೋನಾಕ್ಷಿ ಸಿನ್ಹಾ; ಒಟ್ಟೂ ಸಾಲ ಎಷ್ಟು?
ಸಲ್ಮಾನ್ ಖಾನ್, ಕಾಜೋಲ್, ವಿದ್ಯಾ ಬಾಲನ್, ರೇಖಾ, ಹುಮಾ ಖುರೇಶಿ, ಅದಿತಿ ರಾವ್ ಹೈದರಿ, ಆದಿತ್ಯ ರಾಯ್ ಕಪೂರ್, ಅನಿಲ್ ಕಪೂರ್ ಮೊದಲಾದವರು ಮದುವೆಗೆ ಬಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.