Kalki 2898 AD BO Collection: ಕಲ್ಕಿ 2898 ಎಡಿ ಸಿನಿಮಾ ಮೊದಲ ದಿನದ ಗಳಿಕೆ ಎಷ್ಟು? ಸೃಷ್ಟಿ ಆಗಲಿದೆ ದಾಖಲೆ?
Kalki 2898 AD First Day Box Office Collection: ‘ಕಲ್ಕಿ 2898 ಎಡಿ’ ಚಿತ್ರವನ್ನು ನಾಗ್ ಅಶ್ವಿನ್ ಅವರು ನಿರ್ದೇಶನ ಮಾಡಿದ್ದಾರೆ. ಸೈನ್ಸ್ ಫಿಕ್ಷನ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಸಿನಿಮಾದ ಕಥೆ ಕುರುಕ್ಷೇತ್ರದ ಯುದ್ಧದ ಬಳಿಕ ‘ಕಲ್ಕಿ 2898 ಎಡಿ’ ಆರಂಭ ಆಗುತ್ತದೆ. ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿರುವುದರಿಂದ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲಬಹುದು ಎನ್ನಲಾಗಿದೆ.
‘ಕಲ್ಕಿ 2898 ಎಡಿ’ ಸಿನಿಮಾಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಅಭಿಮಾನಿಗಳು ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಬಜೆಟ್ 600 ಕೋಟಿ ರೂಪಾಯಿ ಇದೆ. ಹೀಗಾಗಿ ಸಿನಿಮಾಗೆ ದೊಡ್ಡ ಮಟ್ಟದ ಗಳಿಕೆ ಅಗತ್ಯವಿದೆ. ಈ ಚಿತ್ರ ಮೊದಲ ದಿನ ಎಷ್ಟು ಗಳಿಕೆ ಮಾಡಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಇದಕ್ಕೆ ಬಾಕ್ಸ್ ಆಫೀಸ್ ಪಂಡಿತರು ಒಂದು ಲೆಕ್ಕ ಕೊಟ್ಟಿದ್ದಾರೆ. ಈ ಚಿತ್ರ ಮೊದಲ ದಿನ 200 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ.
ನಾಗ್ ಅಶ್ವಿನ್ ‘ಕಲ್ಕಿ 2898 ಎಡಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಜೊತೆ ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ದುಲ್ಖರ್ ಸಲ್ಮಾನ್, ರಾಮ್ ಗೋಪಾಲ್ ವರ್ಮಾ ಮೊದಲಾದವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಚಿತ್ರದ ಗಳಿಕೆ ವಿಶ್ವಾದ್ಯಂತ 200 ಕೋಟಿ ರೂಪಾಯಿ ಗಳಿಸಲಿದೆ ಎಂದು ಅಂದಾಜಿಸಲಾಗಿದೆ.
ನಾಗ್ ಅಶ್ವಿನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸೈನ್ಸ್ ಫಿಕ್ಷನ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಕುರುಕ್ಷೇತ್ರದ ಯುದ್ಧದ ಬಳಿಕ ‘ಕಲ್ಕಿ 2898 ಎಡಿ’ ಸಿನಿಮಾದ ಕಥೆ ಆರಂಭ ಆಗುತ್ತದೆ. ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿರುವುದರಿಂದ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲಬಹುದು ಎನ್ನಲಾಗಿದೆ.
ಇದನ್ನೂ ಓದಿ: ಹೇಗಿದೆ ‘ಕಲ್ಕಿ 2898 ಎಡಿ’ ಸಿನಿಮಾ? ಇಲ್ಲಿದೆ ಮೊದಲಾರ್ಧದ ವಿಮರ್ಶೆ
‘ಕಲ್ಕಿ 2898 ಎಡಿ’ ಸಿನಿಮಾ ವಿದೇಶದಲ್ಲಿ 60-70 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎನ್ನಲಾಗಿದೆ. ಭಾರತದಲ್ಲಿ ಈ ಚಿತ್ರ 130-140 ಕೋಟಿ ರೂಪಾಯಿ ಬಾಚಿಕೊಳ್ಳಬಹುದು ಎನ್ನಲಾಗಿದೆ. ಈ ಮೂಲಕ ವಿಶ್ವ ಮಾರುಕಟ್ಟೆಯಲ್ಲಿ ಚಿತ್ರ 200 ಕೋಟಿ ರೂಪಾಯಿ ಗಳಿಸಬಹುದು ಎನ್ನಲಾಗಿದೆ.
ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳು
ಬಾಹುಬಲಿ 2: 214.5 ಕೋಟಿ ರೂಪಾಯಿ
ಆರ್ಆರ್ಆರ್: 223 ಕೋಟಿ ರೂಪಾಯಿ
ಸಲಾರ್: 165.3 ಕೋಟಿ ರೂಪಾಯಿ
ಕೆಜಿಎಫ್ 2: 162.9 ಕೋಟಿ ರೂಪಾಯಿ
ಲಿಯೋ: 142.8 ಕೋಟಿ ರೂಪಾಯಿ
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:42 am, Thu, 27 June 24