Prabhas: ಹೇಗಿದೆ ‘ಕಲ್ಕಿ 2898 ಎಡಿ’ ಸಿನಿಮಾ? ಇಲ್ಲಿದೆ ಮೊದಲಾರ್ಧದ ವಿಮರ್ಶೆ

Kalki 2898 AD Review: Kalki 2898 AD First Half Review: ಪ್ರಭಾಸ್ ಮೊದಲಾದವರು ನಟಿಸಿರೋ ‘ಕಲ್ಕಿ 2898 ಎಡಿ’ ಸಿನಿಮಾ ಇಂದು ರಿಲೀಸ್ ಆಗಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್​ಗೆ ಭರ್ಜರಿ ನಿರೀಕ್ಷೆ ಇತ್ತು. ಈ ನಿರೀಕ್ಷೆಯನ್ನು ಮೀರಿ ಸಿನಿಮಾ ಮೂಡಿ ಬಂದಿದೆಯೇ? ಈ ಚಿತ್ರದಲ್ಲಿ ಏನಿದೆ? ಏನಿಲ್ಲ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

Prabhas: ಹೇಗಿದೆ ‘ಕಲ್ಕಿ 2898 ಎಡಿ’ ಸಿನಿಮಾ? ಇಲ್ಲಿದೆ ಮೊದಲಾರ್ಧದ ವಿಮರ್ಶೆ
ಕಲ್ಕಿ 2898 ಎಡಿ ಸಿನಿಮಾ
Follow us
| Updated By: ರಾಜೇಶ್ ದುಗ್ಗುಮನೆ

Updated on: Jun 27, 2024 | 8:38 AM

‘ಕಲ್ಕಿ 2898 ಎಡಿ’ (Kalki 2898 AD Movie) ಸಿನಿಮಾ ಇಂದು (ಜೂನ್ 27) ರಿಲೀಸ್ ಆಗಿದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಸಾಕಷ್ಟು ಕಾದಿದ್ದರು. ಕೊನೆಗೂ ಈ ಕಾಯುವಿಕೆ ಕೊನೆ ಆಗಿದೆ. ಪ್ರಭಾಸ್, ಕಮಲ್ ಹಾಸನ್, ಅಮಿತಾಭ್ ಬಚ್ಚನ್ ಸೇರಿ ಅನೇಕ ಸ್ಟಾರ್ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ನೋಡಿದ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮೂರು ಗಂಟೆ ಅವಧಿಯ ಈ ಚಿತ್ರದ ಮೊದಲಾರ್ಧ ವಿಮರ್ಶೆ ಇಲ್ಲಿದೆ.

  1. ಕುರುಕ್ಷೇತ್ರದ ಯುದ್ಧದ ಬಳಿಕ ‘ಕಲ್ಕಿ 2898 ಎಡಿ’ ಸಿನಿಮಾದ ಕಥೆ ಆರಂಭ ಆಗುತ್ತದೆ.
  2. ಮಾನವನ ಪಾಪ ಕೃತ್ಯಗಳಿಂದ ಇಡೀ ಮನುಕುಲವೆರ ವಿನಾಶದತ್ತ ಸಾಗಿದೆ. ಇಡೀ ಭೂಮಿಯೇ ಮರಳುಗಾಡಾಗಿದೆ. ಉಳಿದಿರುವ ಏಕೈಕ ನಗರ ಕಾಶಿ.
  3. ಆದರೆ ಕಾಶಿಯಲ್ಲಿ ಯಾಸ್ಕಿನ್​ನ (ಕಮಲ್ ಹಾಸನ್) ಆಡಳಿತವಿದೆ. ಮನುಕುಲವನ್ನೇ ಬದಲಿಸಲು ಎರಡು ಸಾವಿರ ವರ್ಷಗಳಿಂದ ಕಾಯುತ್ತಿದ್ದಾನೆ ಯಾಸ್ಕಿನ್.
  4. ಕಾಂಪ್ಲೆಕ್ಸ್ ಹೆಸರಿನ ಅತ್ಯಬ್ಧುತ ಲೋಕದಲ್ಲಿ ಯಾಸ್ಕಿನ್ ವಾಸ ಮಾಡುತ್ತಾನೆ. ಕಾಂಪ್ಲೆಕ್ಸ್ ಹೊರಗಿರುವವರ ಜೀವನ ನರಕ, ಎಲ್ಲರಿಗೂ ಕಾಂಪ್ಲೆಕ್ಸ ಒಳ ಹೋಗುವ ಆಸೆ, ಭೈರವ ಪ್ರಭಾಸ್​ಗೂ ಸಹ.
  5. ಕಲ್ಕಿಯ ಆಗಮನಕ್ಕಾಗಿ ಇಡೀ ಭೂಮಂಡಲ ಕಾಯುತ್ತಿದೆ. ಕಲ್ಕಿಯ ಆಗಮನವನ್ನು ತಡೆಯುವುದು ಯಾಸ್ಕಿನ್​ ಗುರಿ.
  6. ಸಿನಿಮಾ ಪ್ರಾರಂಭವಾದಾಗ ಕಾಣುವ ಅಶ್ವತ್ಥಾಮ ಮೊದಲಾರ್ಧದ ಅಂತ್ಯಕ್ಕೆ ಮತ್ತೆ ಕಾಣಿಸಿಕೊಳ್ಳುತ್ತಾನೆ. ದೀಪಿಕಾ ಗರ್ಭದಲ್ಲಿರುವ ಕಲ್ಕಿಯನ್ನು ಕಾಯಲು ಸನ್ನದ್ಧನಾಗಿ ಗುಹೆಯಿಂದ ಹೊರಬಂದಿದ್ದಾನೆ.
  7. ನಾಯಕ ಪ್ರಭಾಸ್ ಮುಂದಿನ ಬೌಂಟಿ ದೀಪಿಕಾ ಪಡುಕೋಣೆ ಆಗಿರುವ ಸಾಧ್ಯತೆ ಇದೆ. ಅಶ್ವತ್ಥಾಮನಿಗೂ, ಪ್ರಭಾಸ್​ಗೂ ನಡುವೆ ದೀಪಿಕಾಗಾಗಿ‌ ಯುದ್ಧ ನಡೆಯುವ ಸಾಧ್ಯತೆ ಇದೆ
  8. ಮೊದಲಾರ್ಧ ಕತೆಯ ಎಳೆ ತಿಳಿಸಲು, ಪಾತ್ರಗಳ ಮಾಹಿತಿ ತಿಳಿಸಲು ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ ನಿರ್ದೇಶಕ. ಎರಡು ಹಾಡುಗಳು ಮೊದಲಾರ್ಧದಲ್ಲಿವೆ. ಎರಡೂ ಸಹ ಸಾಧಾರಣವಾಗಿವೆ.
  9. ಮೊದಲಾರ್ಧದಲ್ಲಿ ಕೆಲವು ಅತಿಥಿ ಪಾತ್ರಗಳ ಎಂಟ್ರಿ. ರಾಮ್ ಗೋಪಾಲ್ ವರ್ಮಾ, ದುಲ್ಕರ್ ಸಲ್ಮಾನ್, ಬೃಹ್ಮನಂದಮ್, ಜೈರಾಮ್‌ ಬಂದು ಹೋಗುತ್ತಾರೆ. ದಿಶಾ ಪಟಾಣಿ ಕೆಲವು ದೃಶ್ಯ, ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಮೃಣಾಲ್ ಠಾಕೂರ್ ಸಹ ಸಣ್ಣ ಪಾತ್ರ ಮಾಡಿದ್ದಾರೆ.
  10. ಗ್ರಾಫಿಕ್ಸ್ ಅದ್ಭುತವಾಗಿದೆ, ಸೃಷ್ಟಿಸಿರುವ ಲೋಕವೂ ಅದ್ಭುತವಾಗಿದೆ. ಆದರೆ ದೃಶ್ಯಗಳ‌ ಎಡಿಟಿಂಗ್ ಸಮಸ್ಯೆ ಇದೆ. ದೃಶ್ಯಗಳ ನಡುವೆ ಸಂಯೋಜನೆ ಸರಿಯಾಗಿಲ್ಲ. ಸಂಗೀತವೂ ಅಷ್ಟಕ್ಕಷ್ಟೆ. ಮೊದಲಾರ್ಧ ಮುಗಿದರು, ನಾಯಕನ ಗುರಿ ಏನೆನ್ನುವುದು ಸ್ಪಷ್ಟವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.